ಹೆರಿಗೆಯ ಸಮಯದಲ್ಲಿ ಸರಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷದಿಂದ ಕೊನೆಯುಸಿರೆಳೆದ ತನ್ನ ನವಜಾತ ಶಿಶುವನ್ನು ಚೀಲದಲ್ಲಿ ಹೊತ್ತುಕೊಂಡು ವ್ಯಕ್ತಿಯೊಬ್ಬ ಜಿಲ್ಲಾಧಿಕಾರಿ ಕಚೇರಿಗೆ ಬಂದಿರುವ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಬೆಳಕಿಗೆ ಬಂದಿದೆ.
ಲಖಿಂಪುರ ಖೇರಿಯಲ್ಲಿ ಈ ಘಟನೆ ನಡೆದಿದ್ದು ಇಲ್ಲಿನ ನಿವಾಸಿ ವಿಪಿನ್ ಗುಪ್ತಾ ಅವರ ಪತ್ನಿ ಗುರುವಾರ (ಆ.21) ರಂದು ರಾತ್ರಿ ಹೆರಿಗೆ ನೋವಿನಿಂದ ಬಳಲುತ್ತಿದ್ದರು ಕೂಡಲೇ ಪತ್ನಿಯನ್ನು ಕರೆದುಕೊಂಡು ಇಲ್ಲಿನ ಗೋಲ್ಡರ್ ಆಸ್ಪತ್ರೆಗೆ (ಸರಕಾರಿ ಆಸ್ಪತ್ರೆ) ಬಂದಿದ್ದಾನೆ ಈ ವೇಳೆ ಆಸ್ಪತ್ರೆ ವೈದ್ಯರು ಮೊದಲು ಶುಲ್ಕ ಪಾವತಿಸಿ ಬಳಿಕ ಚಿಕಿತ್ಸೆ ನೀಡುವುದಾಗಿ ಹೇಳಿದ್ದಾರೆ ಅದರಂತೆ ಶುಲ್ಕ ಪಾವತಿಸಿದ್ದಾರೆ ಇದಾದ ಬಳಿಕ ಮತ್ತೆ ಹೆಚ್ಚಿನ ಶುಲ್ಕ ಪಾವತಿಸುವಂತೆ ಕೇಳಿಕೊಂಡಿದ್ದಾರೆ ಆದರೆ ಒಮ್ಮೆಲೇ ಹಣ ಹೊಂದಿಸುವುದು ಕಷ್ಟ ಆದ ಕಾರಣ ಮುಂಜಾನೆ ಸುಮಾರು ಎರಡು ಗಂಟೆಯ ವೇಳೆಗೆ ಹಣವನ್ನು ಪಾವತಿ ಮಾಡಿದ್ದಾರೆ ಆದರೆ ಅಷ್ಟು ಹೊತ್ತಿಗಾಗಲೇ ಸಮಯ ಮೀರಿತ್ತು ಹೆರಿಗೆ ಮಾಡಿಸಿದ ವೇಳೆ ಮಗು ಮೃತಪಟ್ಟಿತ್ತು.
ಮಗುವನ್ನು ಹಿಡಿದುಕೊಂಡು ಜಿಲ್ಲಾಧಿಕಾರಿ ಕಚೇರಿಗೆ ಬಂದ ತಂದೆ:
ಇನ್ನು ಸರಕಾರಿ ಆಸ್ಪತ್ರೆಯ ನಿರ್ಲಕ್ಷದಿಂದ ಮಗು ಮೃತಪಟ್ಟಿರುವುದರಿಂದ ಸಿಟ್ಟಿಗೆದ್ದ ಮಗುವಿನ ತಂದೆ ತನ್ನ ಮೃತಪಟ್ಟ ನವಜಾತ ಶಿಶುವನ್ನು ಒಂದು ಚೀಲದೊಳಗೆ ಹಾಕಿ ಶುಕ್ರವಾರ (ಆ.22) ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಸರಕಾರಿ ಆಸ್ಪತ್ರೆಯಲ್ಲಿ ನಡೆದ ವಿಚಾರಗಳನ್ನು ಎಳೆಎಳೆಯಾಗಿ ವಿವರಿಸಿದ್ದಾನೆ.
ಅಧಿಕಾರಿಗಳಿಂದ ಆಸ್ಪತ್ರೆ ಬೀಗ:
ಸರಕಾರಿ ಆಸ್ಪತ್ರೆಯಲ್ಲಿ ನಡೆದ ವೈದ್ಯರ ನಿರ್ಲಕ್ಷದ ಕುರಿತು ಮಾಹಿತಿ ಪಡೆದ ಜಿಲ್ಲಾಧಿಕಾರಿ ಸರಕಾರಿ ಆಸ್ಪತ್ರೆಗೆ ಬೀಗ ಜಡಿಯುವಂತೆ ಆದೇಶ ಹೊರಡಿಸಿದ್ದು ಅದರಂತೆ ಅಧಿಕಾರಿಗಳು ಗೋಲ್ಡರ್ ಆಸ್ಪತ್ರೆಗೆ ತೆರಳಿ ಅಲ್ಲಿದ್ದ ರೋಗಿಗಳನ್ನು ಪಕ್ಕದ ಜಿಲ್ಲಾ ಮಹಿಳಾ ಆಸ್ಪತ್ರೆಗೆ ದಾಖಲಿಸಿ ಬೀಗ ಜಡಿದಿದ್ದಾರೆ. ಅಲ್ಲದೆ ಪ್ರಕರಣದ ಕುರಿತು ತನಿಖೆ ನಡೆಸುವಂತೆಯೂ ಆದೇಶ ಹೊರಡಿಸಿದ್ದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸೂಚಿಸಿದ್ದಾರೆ.
ವಿಪಿನ್ ಗುಪ್ತಾ ಅವರ ಪತ್ನಿಯನ್ನು ಜಿಲ್ಲಾ ಮಹಿಳಾ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದು ಇದರ ಜೊತೆಗೆ ಮಹಿಳೆಯ ಕುಟುಂಬದ ಜೊತೆ ಜಿಲ್ಲಾಡಳಿತ ಇರುವುದಾಗಿ ಹೇಳಿದೆ.