ಬೆಂಗಳೂರು/ ದಕ್ಷಿಣ ಕನ್ನಡ (ಆ.23): ಧರ್ಮಸ್ಥಳದಲ್ಲಿ ಶವಗಳನ್ನು ಹೂತಿದ್ದೇನೆ ಎಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೂರು ನೀಡಿ, ಎಸ್‌ಐಟಿ ತಂಡ ಮುಂದೆ 17 ಸ್ಥಳಗಳನ್ನು ತೋರಿಸಿ ಗುಂಡಿ ಅಗೆಸಿದ ಅನಾಮಿಕನ ದೂರು ಸುಳ್ಳೆಂದು ಅನುಮಾನ ಬಂದ ಬೆನ್ನಲ್ಲಿಯೇ ಬಂಧನ ಮಾಡಿದ್ದಾರೆ.
ಇದರ ಬೆನ್ನಲ್ಲಿಯೇ ಮುಸುಕುಧಾರಿ ಅನಾಮಿಕ ಫೋಟೋ ರಿವೀಲ್ ಆಗಿದೆ.
ಧರ್ಮಸ್ಥಳದ ಕೇಸಿನಲ್ಲಿ ನಾನೊಬ್ಬ ಸಾಕ್ಷಿದಾರ ಎಂದು ಸಾಕ್ಷಿ ಸಂರಕ್ಷಣಾ ಕಾಯ್ದೆಯಡಿ ಪೊಲೀಸರಿಂದ ರಕ್ಷಣೆ ಪಡೆದುಕೊಂಡಿದ್ದ ಅನಾಮಿಕನನ್ನು ಪೊಲೀಸರು ಬಂಧನ ಮಾಡದೇ, ವಶಕ್ಕೂ ಪಡೆಯದೇ ಆತನನ್ನು ಸ್ವತಂತ್ರವಾಗಿ ಬಿಟ್ಟಿದ್ದರು. ಆದರೆ, ಆತನಿಗೆ ನೀಡಲಾಗಿದ್ದ ಸಾಕ್ಷಿ ಸಂರಕ್ಷಣಾ ಕಾಯ್ದೆಯನ್ನು ರದ್ದುಗೊಳಿಸಿದ ಬೆನ್ನಲ್ಲಿಯೇ ಮುಸುಕುದಾರಿ ಅನಾಮಿಕನನ್ನು ಬಂಧನ ಮಾಡಲಾಗಿತ್ತು. ಇದಾದ ನಂತರ ಆತನ ಹೆಸರು ಸಿ.ಎನ್. ಚಿನ್ನಯ್ಯ ಅಲಿಯಾಸ್ ಚೆನ್ನ ಎಂದೂ ಆತನ ಮೂಲವನ್ನು ರಿವೀಲ್ ಮಾಡಿತ್ತು.
ಇದೀಗ ಚಿನ್ನಯ್ಯನ ಫೋಟೋವನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ರಿವೀಲ್ ಮಾಡಿದೆ. ಇಲ್ಲಿದ್ದಾನೆ ನೋಡಿ, ಈತನೇ ಮಾಸ್ಕ್ ಮ್ಯಾನ್ ಚಿನ್ನಯ್ಯ. ಇದೇ ಫೋಟೋವನ್ನು ಚಿನ್ನಯ್ಯ ಸ್ವತಃ ಧರ್ಮಸ್ಥಳದಲ್ಲಿ ತೆಗೆಸಿಕೊಂಡಿದ್ದನು. ಜೂನ್ ತಿಂಗಳಿಂದ ಎಸ್‌ಐಟಿ ಮುಂದೆ ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದ ವ್ಯಕ್ತಿ ಈತನೇ ಆಗಿದ್ದಾನೆ.