ಮುಂಡಾಜೆ: ನದಿಗೆ ಬಲೆಹಾಕಿ ಮೀನು ಹಿಡಿಯಲು ಹೋದ ವ್ಯಕ್ತಿಯೋರ್ವರ ಮೃತದೇಹ ಸ್ಥಳೀಯ ತೋಟವೊಂದರಲ್ಲಿ ಪತ್ತೆಯಾದ ಘಟನೆ ಆ.21ರಂದು ಮುಂಡಾಜೆಯಲ್ಲಿ ನಡೆದಿದೆ.ಮುಂಡಾಜೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ಚೆನ್ನಿಗುಡ್ಡೆ ನಿವಾಸಿ ಪೂವಪ್ಪ ನಾಯ್ಕ(50ವ) ಅಸಹಜವಾಗಿ ಮೃತಪಟ್ಟವರಾಗಿದ್ದಾರೆ.
ಈ ಬಗ್ಗೆ ಮೃತರ ಪುತ್ರ ದಿನೇಶ್ ನಾಯ್ಕ ಧರ್ಮಸ್ಥಳ ಠಾಣೆಗೆ ನೀಡಿದ ದೂರಿನಂತೆ ನನ್ನ ತಂದೆ ಪೂವಪ್ಪ ನಾಯ್ಕ ಅವರು ಆ.21 ರಂದು ಮಧ್ಯಾಹ್ನ 1.30ಗಂಟೆಗೆ ಮುಂಡಾಜೆ ಗ್ರಾಮದ ಮುಂಡ್ರುಪ್ಪಾಡಿ ಸೇತುವೆಯ ಮೃತ್ಯುಂಜಯ ನದಿಗೆ ಮೀನು ಹಿಡಿಯಲೆಂದು ಬಲೆ ಹಿಡಿದುಕೊಂಡು ಹೋಗಿ ನದಿಯ ಸೇತುವೆ ಅಡಿಯಲ್ಲಿ ಬಲೆ ಹಾಕಿ ನನ್ನನ್ನು ಅಲ್ಲೇ ನಿಲ್ಲಿಸಿ, ಬೇರೆ ಸ್ಥಳದಲ್ಲಿ ಬಲೆ ಹಾಕಿ ಮೀನು ಹಿಡಿದುಕೊಂಡು ಸಂಜೆ ೬.೩೦ ಕ್ಕೆ ಬಂದವರು, ಡ್ಯಾಂ ಬಳಿ ಹಾಕಿದ ಬಲೆ ತೆಗೆಯಯಲೆಂದು ವಾಪಾಸ್ಸು ಹೋದವರು ರಾತ್ರಿ ೭.೩೦ ತನಕವೂ ಹಿಂತಿರುಗಿ ಬಾರದೇ ಇದ್ದುದರಿಂದ, ಕೂಗಿ ಕರೆದರೂ ಯಾವುದೇ ಉತ್ತರ ಬಾರದೇ ಇದ್ದು, ಈ ವಿಚಾರವನ್ನು ಮನೆಯವರಿಗೆ ನೆರೆಕರೆಯವರಿಗೆ ಹಾಗೂ ಸಂಬಂಧಿಕರಿಗೆ ತಿಳಿಸಿ, ಹುಡುಕಾಡಿದಾಗ ರಾತ್ರಿ ತಂದೆ ಪೂವಪ್ಪ ನಾಯ್ಕರು ನದಿ ಬದಿಯಲ್ಲಿರುವ ಮುಂಡಾಜೆ ಗ್ರಾಮದ ಮುಂಡ್ರುಪ್ಪಾಡಿ ಸಂಜೀವ ಶೆಟ್ಟಿಯವರ ಅಡಿಕೆ ತೋಟದಲ್ಲಿ ಬಿದ್ದುಕೊಂಡಿದ್ದವರನ್ನು ಉಪಚರಿಸಿ ನೋಡಿದಾಗ ಬಾಯಲ್ಲಿ ನೊರೆ ಬಂದಿದ್ದು, ಮೃತ ಪಟ್ಟಿರುವುದು ಕಂಡು ಬಂದಿರುತ್ತದೆ ಎಂದು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಪ್ರಕರಣ ದಾಖಲಾಗಿರುತ್ತದೆ.