pashupathi
ಅಪರಾಧ

ಸಮೀರ್ ಬಂಧನಕ್ಕೆ ಬಲೆ ಬೀಸಿದ ಧರ್ಮಸ್ಥಳ ಪೊಲೀಸರು!! ಬನ್ನೇರುಘಟ್ಟದ ಮನೆಯಲ್ಲಿ ಮೊಬೈಲ್ ಬಿಟ್ಟು ಪರಾರಿಯಾದ ಯೂಟ್ಯೂಬರ್!!

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ಬೆನ್ನಲ್ಲೇ ಯೂಟ್ಯೂಬರ್ ಸಮೀರ್ ಬಂಧನಕ್ಕೆ ಪೊಲೀಶರು ಬಲೆ ಬೀಸಿದ್ದಾರೆ.

akshaya college

ಬನ್ನೇರುಘಟ್ಟದ ಮನೆಯಲ್ಲಿ ತಾಯಿ ಹಾಗೂ ಸಹೋದರಿ ಜೊತೆ ವಾಸವಾಗಿರುವ ಸಮೀರ್, ಪೊಲೀಸರು ಬರುತ್ತಿದ್ದಂತೆ ಮನೆಯಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಈ ನಡುವೆ ಮನೆಯಲ್ಲಿ ಸಮೀರ್ ಮೊಬೈಲ್ ಮಾತ್ರ ಪತ್ತೆಯಾಗಿದೆ.

ಪಿ.ಎಸ್.ಐ. ಆನಂದ್ ಎನ್. ನೇತೃತ್ವದಲ್ಲಿ ಬೆಳಿಗ್ಗೆ 6 ಗಂಟೆಗೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಪೊಲೀಸರು ಮನೆಯಲ್ಲಿ ಸರ್ಚ್ ಮಾಡಲು ವಾರೆಂಟ್  ಸಹ ಪಡೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದುವರೆಗೂ ಪೊಲೀಸರ ಕರೆಗೆ ಸಮೀರ್ ಕಡೆಯಿಂದ ಯಾವುದೇ ಉತ್ತರ ಬಂದಿಲ್ಲ ಎಂದು ತಿಳಿದು ಬಂದಿದೆ.

ಬನ್ನೇರುಘಟ್ಟ ಪೊಲೀಸರ ಸಹಕಾರದಿಂದ ಕಾರ್ಯಾಚರಣೆ ನಡೆಸಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts