ಕಾಸರಗೋಡು:ಕಾಞಂಗಾಡು ಆವಿಕೆರೆಯ ಲಾಡ್ಜ್ ಕೋಣೆಯೊಂದರಲ್ಲಿ 10ರ ಹರೆಯದ ಬಾಲಕನನ್ನು ಕೊಲೆಗೈದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಕರ್ನಾಟಕ ಮೂಲದ ಆರೋಪಿಯನ್ನು 13 ವರ್ಷಗಳ ಬಳಿಕ ಆಂಧ್ರಪ್ರದೇಶದಿಂದ ಬಂಧಿಸಲಾಗಿದೆ. ಕರ್ನಾಟಕ ಬಾಗೇಪಲ್ಲಿ ಯ ಜಾಲಹಳ್ಳಿ ನಿವಾಸಿ ಸಹೀರ್ ಅಹಮ್ಮದ್ (48) ಬಂಧಿತ ವ್ಯಕ್ತಿಯಾಗಿದ್ದಾನೆ. ತಲೆಮರೆಸಿಕೊಂಡಿದ್ದ ಈತನನ್ನು ಹೊಸದುರ್ಗ ಪೋಲೀಸರು ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ವೈಎಸ್ ಆರ್ ಕಾಲನಿಯಿಂದ ನಾಟಕೀಯವಾಗಿ ಬಂಧಿಸಿ ಕರೆತಂದಿದ್ದಾರೆ.
2008ರಲ್ಲಿ ಪ್ರಸ್ತುತ ಕೊಲೆ ಪ್ರಕರಣ ನಡೆದಿತ್ತು. ಕರ್ನಾಟಕದಿಂದ ಹೂ ಮಾರಲು ಕಾಞಂಗಾಡು ಬಂದಿದ್ದ ಕುಟುಂಬದ 10ರ ಬಾಲಕನನ್ನು ಈತ ಕೊಲೆಗೈದಿದ್ದನು. ಹಬ್ಬದ ಋತುವಿನಲ್ಲಿ ಹೂ ಮಾರಲೆಂದು ಬಂದಿದ್ದ ಕರ್ನಾಟಕ ಮೂಲದ ಕುಟುಂಬ ಕಾಞಂಗಾಡಿನ ಲಾಡೊಂದರಲ್ಲಿ ವಾಸಿಸಿತ್ತು.ಎ.17ರಂದು ಹಗಲು 10ರ ಹುಡುಗನನ್ನು ಲಾಡ್ಜ್ ನಲ್ಲಿ ಬಿಟ್ಟು ಉಳಿದವರು ಹೂ ಮಾರಲು ತೆರಳಿದ್ದರು. ಈ ಸಂದರ್ಭ ಗಮನಿಸಿ ಲಾಡ್ಜ್ ಕೋಣೆಗೆ ಬಂದಿದ್ದ ಆರೋಪಿ ಬಾಲಕನನ್ನು ಕತ್ತು ಹಿಸುಕಿ ಕೊಲೆಗೈದು ಕೋಣೆಯಲ್ಲಿದ್ದ 8.500ರೂ ಅಪಹರಿಸಿದ್ದನು.
ಆದರೆ ಈತ 2023ರಲ್ಲಿ ತನ್ನ ಹೆಸರಲ್ಲೇ ನೂತನ ಮೊಬೈಲ್ ಸಿಮ್ ಕಾರ್ಡ್ ಪಡೆದಿದ್ದನು. ಇದು ಕೇಸಿಗೆ ಮಹತ್ತರ ಸುಳಿವಾಯಿತು. ಆ ನಂಬರಿನ ಜಾಡು ಹಿಡಿದು ಕಾಞಂಗಾಡು ಎಸ್. ಐ. ಶಾರ್ಜಧರನ್ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಯಿತು.