ಸುಬ್ರಹ್ಮಣ್ಯದ ಸರ್ಕಾರಿ ಆಸ್ಪತ್ರೆಯ ಅಂಬ್ಯುಲೆನ್ಸ್ ಚಾಲಕ ಹೊನ್ನಪ್ಪ ಗೌಡ ಕುಮಾರಧಾರ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಮೂಲಕ ಅವರು ಬದುಕಿದ್ದಾರೆ ಅನ್ನುವ ಊಹಪೋಹಗಳಿಗೆ ತೆರೆಬಿದ್ದಂತಾಗಿದೆ.
ಈಶ್ವರ್ ಮಲ್ಪೆ ಹಾಗೂ ತಂಡದ ಮೂರು ದಿನದ ಕಾರ್ಯಾಚರಣೆ ಬಳಿಕ ಶವವನ್ನು ಮೇಲಕ್ಕೆ ಎತ್ತಿದ್ದಾರೆ ಅನ್ನುವುದು ವಿಶೇಷ. ಈಶ್ವರ್ ಮಲ್ಪೆ ಜೊತೆಗೆ ಸುಳ್ಯದ ಪ್ರಗತಿ ಆಂಬ್ಯುಲೆನ್ಸ್ ಚಾಲಕ ಅಚ್ಚು ಪ್ರಗತಿ ಸೇರಿದಂತೆ ಸುಳ್ಯ ತಾಲೂಕು ಆಂಬ್ಯುಲೆನ್ಸ್ ಚಾಲಕ-ಮಾಲಕರು ಕೂಡ ಪಾಲ್ಗೊಂಡಿದ್ದರು.