ವ್ಯಕ್ತಿಯೋರ್ವ ಸೀರೆಯುಟ್ಟು ಓಡಾಡುತ್ತಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಇದು ನಡೆದಿರುವುದು ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ. ಹಸುಗೂಸುಗಳನ್ನು ಕಳ್ಳತನ ಮಾಡುವ ಉದ್ದೇಶದಿಂದ ವೇಷ ಮರೆಸಿ ಓಡಾಡುತ್ತಿದ್ದ ಎಂದು ಶಂಕಿಸಲಾಗಿದೆ.
ಶರಣಪ್ಪ(32) ಬಂಧಿತ ವ್ಯಕ್ತಿ.
ಸೀರೆ ಧರಿಸಿ ಬಂದು ಆಸ್ಪತ್ರೆಯಲ್ಲಿ ತಡರಾತ್ರಿ ಆಸ್ಪತ್ರೆ ಎಮರ್ಜೆನ್ಸಿ ವಾರ್ಡ್ ಓಳನುಗ್ಗಲು ಯತ್ನಿಸುತ್ತಿದ್ದ. ಯಾವ ವಾರ್ಡ್ಗೆ ಹೋಗಬೇಕು, ಹೆಸರೇನು ಎಂದು ಸ್ಥಳೀಯರು ಪ್ರಶ್ನೆ ಮಾಡಿದ್ದು, ಈ ವೇಳೆ ಏನೇನೋ ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಇದರಿಂದ ಆತಂಕದ ವಾತಾವರಣ ಸೃಷ್ಟಿಯಾಯಿತು. ಸ್ಥಳೀಯರ ದೂರು ನೀಡಿದ ಹಿನ್ನೆಲೆಯಲ್ಲಿ ಇದೀಗ ನಗರದ ಮಾರ್ಕೆಟ್ ಯಾರ್ಡ್ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಹಸುಗೂಸು ಕಳ್ಳತನದ ಶಂಕೆ ಹಿನ್ನೆಲೆ ಪೊಲೀಸರಿಗೆ ಸ್ಥಳೀಯರು ದೂರು ನೀಡಿದ್ದು, ಬಳಿಕ ಶರಣಪ್ಪ ನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ತಾನು ಮಂಗಳಮುಖಿ ಎಂದು ಹೇಳಿಕೊಂಡಿದ್ದು, ಆಸ್ಪತ್ರೆಯಲ್ಲಿ ಮಲಗಲು ಹೋಗಿದ್ದೆ ಎಂದು ಹೇಳಿದ್ದಾರೆ.
ಬೇರೆಯವರ ಮಗು ಕದ್ದು ತನ್ನದೆಂದ ಮಹಿಳೆ
ಇನ್ನು ಇತ್ತೀಚೆಗೆ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಓರ್ವ ಮಹಿಳೆ ಬೇರೆಯವರ ಹೆಣ್ಣು ಮಗುವನ್ನು ಕಳ್ಳತನ ಮಾಡಿ, ತನ್ನ ಮಗುವೆಂದಿದ್ದ ಘಟನೆ ನಡೆದಿತ್ತು. ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಖಾನಪೇಟೆ ನಿವಾಸಿ ಸಾಕ್ಷಿ ಯಾದವಾಡ ಮಗು ಕದಿದ್ದ ಮಹಿಳೆ.
ಪ್ರಕರಣಕ್ಕೆ ಸಂಬಂಧಿದಂತೆ ನಾಲ್ವರನ್ನು ಬಾಗಲಕೋಟೆ ನವನಗರ ಪೊಲೀಸರು ಬಂಧಿಸಿದ್ದಾರೆ. ಮಗುವಿನ ರಕ್ಷಣೆ ಮಾಡಲಾಗಿದೆ. ಬಂಧಿತರು 2024 ರಿಂದಲೇ ಮಗು ಕದಿಯಲು ಪ್ಲ್ಯಾನ್ ಮಾಡಿದ್ದು, ಮಹಿಳೆಗೆ ಆಕೆಯ ತಾಯಿ, ಸಹೋದರಿಯರು ಸೇರಿ ಮೂವರು ಸಾಥ್ ನೀಡಿದ್ದರು. ಇನ್ನು ಈ ಸಾಕ್ಷಿ ಯಾದವಾಡ ಜಿಲ್ಲೆಯ ಕಡಕೋಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಕಲಿ ತಾಯಿ ಕಾರ್ಡ್ ಮಾಡಿಸಿದ್ದು, ತನ್ನಗೆ ಅನುಕೂಲಕ್ಕೆ ತಕ್ಕಂತೆ ದಿನಾಂಕ ತಿದ್ದುಪಡಿ ಮಾಡುತ್ತಿದ್ದ ವಿಚಾರ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.