ಅಪರಾಧ

ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಆರೋಪಿ ಅಬ್ದುಲ್ ರಹಿಮಾನ್ ಎನ್‌ಐಎ ವಶಕ್ಕೆ!!

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಿಗೆ ಆಶ್ರಯ ನೀಡಿದ್ದ ಕೊಡಗಿನ ಸೋಮವಾರಪೇಟೆ ತಾಲೂಕಿನ ಅಬ್ದುಲ್ ರೆಹಮಾನ್ ಕಲ್ಕಂದೂರು ಎಂಬಾತನನ್ನು ಎನ್. ಐ.ಎ. ಅಧಿಕಾರಿಗಳು ಕೇರಳದ ವಿಮಾನ ನಿಲ್ದಾಣದಲ್ಲಿ ಬಂಧಿಸಿದಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಿಗೆ ಆಶ್ರಯ ನೀಡಿದ್ದ ಕೊಡಗಿನ ಸೋಮವಾರಪೇಟೆ ತಾಲೂಕಿನ ಅಬ್ದುಲ್ ರೆಹಮಾನ್ ಕಲ್ಕಂದೂರು ಎಂಬಾತನನ್ನು ಎನ್. ಐ.ಎ. ಅಧಿಕಾರಿಗಳು ಕೇರಳದ ವಿಮಾನ ನಿಲ್ದಾಣದಲ್ಲಿ ಬಂಧಿಸಿದಿದ್ದಾರೆ.

akshaya college

ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ವಿದೇಶಕ್ಕೆ ತೆರಳಿ ಕತಾರ್ ನ ದೋಹಾದಲ್ಲಿ ತಲೆಮರೆಸಿಕೊಂಡಿದ್ದ ಎಲ್ಲಾ ಆರೋಪಿಗಳಿಗಾಗಿ ಲುಕ್ ಔಟ್ ನೋಟೀಸ್ ಕೂಡ ಜಾರಿ ಮಾಡಲಾಗಿತ್ತು. ಅಬ್ದುಲ್ ರೆಹಮಾನ್ ಕಲ್ಕಂದೂರ್ ಹಾಗೂ ತಲೆಮರೆಸಿಕೊಂಡಿರುವ ಇತರರ ಬಗ್ಗೆ ಮಾಹಿತಿ ನೀಡಿದವರಿಗೆ ನಗದು ಬಹುಮಾನವನ್ನು ಕೂಡ ರಾಜ್ಯ ಗೃಹ ಇಲಾಖೆ ಘೋಷಿಸಿತ್ತು.

ಅಬ್ದುಲ್ ರೆಹಮಾನ್ ನಿಷೇಧಿತ ಪಿಎಫೈ ಸಂಘಟನೆಯ ಕಾರ್ಯದರ್ಶಿಯಾಗಿದ್ದ.

ರೆಹಮಾನನ್ನು ವಶಕ್ಕೆ ಪಡೆದಿರುವ ಎನ್ ಐ ಎ ಅಧಿಕಾರಿಗಳು ಬೆಂಗಳೂರಿನ ಎನ್ ಐ ಎ ನ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಮತ್ತೆ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪುತ್ತೂರು ತಹಸೀಲ್ದಾರ್ ಕಚೇರಿಗೆ ಲೋಕಾಯುಕ್ತ ದಾಳಿ!! ಬಲೆಗೆ ಬಿದ್ದ ಎಫ್‌ಡಿಎ ಸುನೀಲ್, ತಲೆಮರೆಸಿಕೊಂಡ ತಹಸೀಲ್ದಾರ್!!

ಪುತ್ತೂರು: ತಾಲೂಕಿನ ಆಡಳಿತ ಸೌಧದಲ್ಲಿರುವ ತಹಶೀಲ್ದಾರ್ ಕಚೇರಿಯ ಭೂ ಸುಧಾರಣಾ ಶಾಖೆಯ ಎಫ್.ಡಿ.ಎ…

ಪೆರ್ನಾಜೆ ಬಳಿ ಬಸ್ – ಕಾರು ಅಪಘಾತ! ರಸ್ತೆಯಲ್ಲಿ ಚೆಲ್ಲಿದ್ದ ತೈಲಕ್ಕೆ ಜಾರಿದ ಕೆವಿಜಿ ನಿವೃತ್ತ ಪ್ರಾಂಶುಪಾಲರಿದ್ದ ಕಾರು!!

ಪುತ್ತೂರು: ಸುಳ್ಯದಿಂದ ಪುತ್ತೂರಿಗೆ ಆಗಮಿಸುತ್ತಿದ್ದ ಕಾರು ಹಾಗೂ ಮೈಸೂರು ಕಡೆ ತೆರಳುತ್ತಿದ್ದ…