ನಿನ್ನೆ ತಡ ರಾತ್ರಿ(ಜೂನ್ 29ರ ರಾತ್ರಿ )ಮಧ್ಯೆ ಭೀಕರ ಕೊಲೆ, ಮಚ್ಚಿನಿಂದ ಹೊಡೆದು ವ್ಯಕ್ತಿಯೋರ್ವನನ್ನು ನಿರ್ದಯವಾಗಿ ಕೊಲೆ ಹಾಕಲಾಗಿದೆ.
ಕೊಲೆಗೀಡಾದ ವ್ಯಕ್ತಿಯನ್ನು ವಸಂತ್ (34) ಎಂದು ಗುರುತಿಸಲಾಗಿದೆ. ಶಿವಮೊಗ್ಗ ತಾಲೂಕಿನ ಕುಂಸಿ ಗ್ರಾಮದ ನಿವಾಸಿಯಾಗಿದ್ದು, ಕೂಲಿ ಕೆಲಸಮಾಡುತ್ತಾ ಜೀವನ ಸಾಗಿಸುತ್ತಿದ್ದರು.
ವಿವಾಹಿತನಾಗಿದ್ದ ವಸಂತ್ ಭೀಕರವಾಗಿ ಕೊ*ಲೆಗೀಡಾಗಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.
ಘಟನೆ ನಡೆದ ಬಳಿಕ ಇನ್ಸ್‌ಪೆಕ್ಟರ್ ದೀಪಕ್ ಹಾಗೂ ಅವರ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಸಂತನ ಕೊಲೆಗೆ ನಿಖರವಾದ ಕಾರಣಗಳು ಇನ್ನೂ ಬಹಿರಂಗವಾಗಿಲ್ಲ. ಆದರೂ, ಸ್ಥಳೀಯ ಮೂಲಗಳಿಂದ ದೊರಕಿದ ಮಾಹಿತಿಯ ಪ್ರಕಾರ, ಕುಂಸಿ ಗ್ರಾಮದ ಇಬ್ಬರು ವ್ಯಕ್ತಿಗಳು ಈ ಕೃತ್ಯದಲ್ಲಿ ಭಾಗವಹಿಸಿದ್ದಾಗಿ ಶಂಕಿಸಲಾಗಿದೆ.
ಕೃತ್ಯ ನಡೆದಿದೆ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಪೊಲೀಸರು ಸಕ್ರೀಯ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.