ಅಪರಾಧ

ಮಂಜೇಶ್ವರ: ಮಲಗಿದ್ದ ತಾಯಿಗೆ ಬೆಂಕಿ ಹಚ್ಚಿ ಕೊಂದ ಮಗ!!

ಮಲಗಿದ ತಾಯಿಗೆ ಬೆಂಕಿ ಹಚ್ಚಿ ಆಕೆಯನ್ನು ಕೊಂದು ಬಳಿಕ, ನೆರೆಮನೆಯ ಮಹಿಳೆಯನ್ನು ಮನೆಗೆ ಕರೆಸಿ, ಆಕೆಗೂ ಬೆಂಕಿ ಹಚ್ಚಿದ ಘಟನೆ ನಡೆದಿದ್ದು ತಾಯಿ ಸಾವನ್ನಪ್ಪಿದ್ದಾರೆ

ಈ ಸುದ್ದಿಯನ್ನು ಶೇರ್ ಮಾಡಿ

ಮಂಜೇಶ್ವರ: ರಾತ್ರಿ ಹೊತ್ತು ಮನೆಯಲ್ಲಿ ಮಲಗಿದ ತಾಯಿಗೆ ಬೆಂಕಿ ಹಚ್ಚಿ ಆಕೆಯನ್ನು ಕೊಂದು ಬಳಿಕ, ನೆರೆಮನೆಯ ಮಹಿಳೆಯನ್ನು ಮನೆಗೆ ಕರೆಸಿ, ಆಕೆಗೂ ಬೆಂಕಿ ಹಚ್ಚಿದ ಘಟನೆ ನಡೆದಿದ್ದು ತಾಯಿ ಸಾವನ್ನಪ್ಪಿದ್ದಾರೆ ನೆರೆಮನೆಯ ಮಹಿಳೆ ಗಂಭೀರವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

akshaya college

ವರ್ಕಾಡಿ ನಲ್ಲಂಗಿ ನಿವಾಸಿ ದಿ.ಲೂಯಿಸ್ ಮೊಂತೇರೋರವರ ಪತ್ನಿ ಹಿಲ್ದಾ (60) ಮೃತಪಟ್ಟ ಮಹಿಳೆ. ಪುತ್ರ ಮೇಲ್ವಿನ್ ಈ ಕೃತ್ಯವೆಸಗಿದ್ದಾನೆ.

ನೆರೆಮನೆಯ ವಿಕ್ಟರ್ ರವರ ಪತ್ನಿ ಲೊಲಿಟಾ (30) ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜೂನ್ 26 ಗುರುವಾರ ಮುಂಜಾನೆ ಈ ಘಟನೆ ನಡೆದಿದ್ದು, ಪುತ್ರ ಮೇಲ್ವಿನ್ ಮೊಂತೇರೋ (33) ಈ ಕೃತ್ಯವೆಸಗಿ ಪರಾರಿಯಾಗಿದ್ದಾನೆ. ತಡರಾತ್ರಿ ತಾಯಿಗೆ ಬೆಂಕಿ ಹಚ್ಚಿದ ಬಳಿಕ, ನೆರೆಮನೆಯ ಮಹಿಳೆಯನ್ನು ತಾಯಿಗೆ ಹುಷಾರಿಲ್ಲವೆಂದು ಮನೆಗೆ ಕರೆದ ಬಳಿಕ ಆಕೆಗೂ ಬೆಂಕಿ ಹಚ್ಚಿದ್ದಾನೆ.

ತಾಯಿ ಮೃತ ದೇಹ ಮನೆಯ ಹಿಂಭಾಗದ ಪೊದರುಗಳಡೆಯಲ್ಲಿ ದೊರೆತಿದೆ. ಮನೆಯಲ್ಲಿ ತಾಯಿ ಮತ್ತು ಮಗ ಮಾತ್ರವೇ ವಾಸಿಸುತ್ತಿದ್ದು, ಇನ್ನೋರ್ವ ಮಗ ಅಲ್ವಿನ್ ಮೊಂತೇರೋ ಕೊಲ್ಲಿ ರಾಷ್ಟ್ರದಲ್ಲಿದ್ದಾನೆ. ಆರೋಪಿ ಮೇಲ್ವಿನ್ ಕಟ್ಟಡ ಕಾರ್ಮಿಕನಾಗಿದ್ದು, ಕೊಲೆ ಕೃತ್ಯಕ್ಕೆ ಕಾರಣವೇನೆಂಬುದು ತಿಳಿದು ಬಂದಿಲ್ಲ. ಮಂಜೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ತನಿಖೆ ಕೈಗೆತ್ತಿಕೊಂಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts