tamanvi
ಅಪರಾಧ

ಭ್ರಷ್ಟಾಚಾರ: ಗಣಿ ಇಲಾಖೆ ದ.ಕ ಜಿಲ್ಲಾ ಡಿಡಿ ಸಸ್ಪೆಂಡ್

GL

ಈ ಸುದ್ದಿಯನ್ನು ಶೇರ್ ಮಾಡಿ

ದಕ್ಷಿಣ ಕನ್ನಡ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಡಿಡಿ ಕೃಷ್ಣವೇಣಿ ಅವರ ವಿರುದ್ಧ ಇಲಾಖೆ ತನಿಖೆ ಬಾಕಿ ಇರಿಸಿ ಅಮಾನತುಗೊಳಿಸಿ ಅಧೀನ ಕಾರ್ಯದರ್ಶಿ ಮಂಜುನಾಥ್ ಭಾನುವಾರ ಆದೇಶ ಹೊರಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶನಿವಾರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುವ ಮೂಲಕ ಕೃಷ್ಣವೇಣಿಯನ್ನು ಸೇವೆಯಿಂದ ಅಮಾನತುಗೊಳಿಸಿ ಮತ್ತು ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ಡಿಡಿ ಕೃಷ್ಣವೇಣಿ ಅವರ ಮೇಲೆ 2ನೇ ಬಾರಿ ಲೋಕಾಯುಕ್ತ ದಾಳಿ ನಡೆದಿದ್ದು, ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಈ ವೇಳೆ 12 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿತ್ತು. ಇನ್ನು ಇತ್ತೀಚೆಗೆ ಉಳ್ಳಾಲ ತಾಲೂಕಿನ ಇರಾ ಗ್ರಾಮದ ವ್ಯಕ್ತಿಯೊಬ್ಬರ ಬಳಿ 50 ಸಾವಿರ ರೂ. ಲಂಚ ಸ್ವೀಕರಿಸುವಾಗ ಬಂಧನಕೊಳ್ಳಗಾಗಿದ್ದರು.

ಸರ್ಕಾರದ ನಿಯಮಗಳ ಪ್ರಕಾರ 48 ಗಂಟೆಗಳಿಗಿಂತ ಹೆಚ್ಚು ಕಾಲ ಪೊಲೀಸ್ ಕಸ್ಟಡಿಯಲ್ಲಿರುವ ಯಾವುದೇ ಅಧಿಕಾರಿಯನ್ನು ಅಮಾನತುಗೊಳಿಸಲಾಗುತ್ತದೆ. ಆದರೆ, ಕೃಷ್ಣವೇಣಿ 18 ದಿನ ಜೈಲಿನಲ್ಲಿದ್ದರೂ ಈ ನಿಯಮವನ್ನು ಪಾಲನೆ ಆಗಿಲ್ಲ ಎನ್ನಲಾಗಿದ್ದು, ಸಾರ್ವಜನಿಕರ ಟೀಕೆಗೂ ಗುರಿಯಾಗಿತ್ತು.

ಜಾಮೀನು ಮೇಲೆ ಹೊರಬಂದು ಮತ್ತೆ ತಮ್ಮ ಸ್ಥಾನಕ್ಕೆ ಹಿಂದಿರುಗಿದ್ದರು. ಜೊತೆಗೆ ಹೈಕೋರ್ಟ್‌ನಿಂದ ಸ್ಟೇ ತಂದು ಅಮಾನತು ಮಾಡದಂತೆ ತಡೆದಿದ್ದರು. ಇತ್ತ ಕಚೇರಿಯಲ್ಲಿ ಮತ್ತೆ ದರ್ಬಾ‌ರ್ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ಬಂದ ಹಿನ್ನಲೆ ಕೃಷ್ಣವೇಣಿ ಅವರನ್ನು ಅಮಾನತುಗೊಳಿಸಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಹನಿಮೂನ್ ಕೊಲೆ ಪ್ರಕರಣಕ್ಕೆ ಹೋಲುವ ಮತ್ತೊಂದು ಘಟನೆ | ವಾಕಿಂಗ್ ವೇಳೆ ಪತಿಯ ಕೊಲೆಗೆ ಪತ್ನಿ ರೂಪಿಸಿದ್ದ ಸಂಚು ಬಯಲು!!

ನವವಿವಾಹಿತ ದಂಪತಿಗಳು ಸಂಜೆ ನಡಿಗೆಗೆ ತೆರಳಿದ್ದ ವೇಳೆ ಸಂಭವಿಸಿದ ಹಿಟ್–ಅಂಡ್–ರನ್ ಪ್ರಕರಣವು…