ಅಪರಾಧ

500 ರೂ. ಲಂಚ: ಗ್ರಾಮ ಲೆಕ್ಕಾಧಿಕಾರಿಗೆ 30 ವರ್ಷಗಳ ಬಳಿಕ ಶಿಕ್ಷೆ!!

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ: ಅಣ್ಣ-ತಮ್ಮಂದಿರರ ಜಾಗದ ವಿವಾದದಲ್ಲಿ ಪಹಣಿ ಪತ್ರ ನೀಡಲು 500 ರೂ. ಲಂಚ ಪಡೆದಿದ್ದ ಗ್ರಾಮ ಲೆಕ್ಕಾಧಿಕಾರಿಗೆ 30 ವರ್ಷಗಳ ಬಳಿಕ ಸುಪ್ರೀಂಕೋರ್ಟ್ ಬುಧವಾರ ಒಂದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸುವ ಮೂಲಕ ಕೆಲ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ.

akshaya college

ತಾಲೂಕಿನ ಕಡೋಲಿಗ್ರಾಮ ಲೆಕ್ಕಾಧಿಕಾರಿ ನಾಗೇಶ ಧೋಂಡು ಶಿವಂಗೇಕರ ಎಂಬಾತನಿಗೆ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದ್ದು ಆಪಾದಿತರನ್ನು ಹಿಂಡಲಗಾ ಜೈಲಿಗೆ ರವಾನಿಸಲಾಗಿದೆ.

ತನಿಖಾಧಿಕಾರಿಯಾಗುದ್ದ ಪೊಲೀಸ್ ಉಪಾಧೀಕ್ಷಕ ಎಂ.ಎಸ್. ದಂಡಿನತನಿಖೆ ಕೈಕೊಂಡು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಶೇಷ ನ್ಯಾಯಾಲಯವು ಸ್ಪೇಷಲ್ ನಾಗೇಶಗೆ 14.06.2006 ರಂದು 1 ವರ್ಷ ಕಠಿಣ ಶಿಕ್ಷೆ ಹಾಗೂ 1000 ರೂ. ದಂಡ ವಿಧಿಸಿ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯ ಸಂಚಾರಿ ಪೀಠ ಧಾರವಾಡ ಮೇಲ್ಮನವಿ ಸಲ್ಲಿಸಿದ್ದು, 09.03.2012 ರಂದು ಪ್ರಕರಣದಿಂದ ಆಪಾದಿತ ಅಧಿಕಾರಿಯನ್ನು ಬಿಡುಗಡೆಗೊಳಿಸಿ ಆದೇಶಿಸಿತ್ತು. ನಂತರ ಸುಪ್ರೀಂ ಕೋರ್ಟ್ ನಲ್ಲಿ ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದು ಶಿಕ್ಷೆ ವಿಧಿಸಿದೆ.

ಕಡೋಲಿಯ ಲಕ್ಷ್ಮಣ ರುಕ್ಕಣ್ಣ ಕಟಾಂಬಳೆ ಇವರ ಸಹೋದರರ ಜಮೀನನ್ನು ಪಾಲು ಸಂಬಂದ ಗೇಣಿ ಮತ್ತು ಪಹಣಿ ಪತ್ರಿಕೆಯಲ್ಲಿ ವಾಟ್ಟಿ ಮಾಡಿಕೊಂಡಿದ್ದನ್ನು ದಾಖಲಿಸಿ ಉತಾರ ಕೊಡುವ ಬಗ್ಗೆ 1996ರಲ್ಲಿ ಗ್ರಾಮ ಲೆಕ್ಕಾಧಿಕಾರಿ ನಾಗೇಶ 500 ರೂ. ಲಂಚ ಪಡೆದುಕೊಂಡಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಆರೋಪಿತಯನ್ನು ವಶಕ್ಕೆ ಪಡೆದಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts