ಅಪರಾಧ

ಯೆಯ್ಯಾಡಿ:ಚೂರಿ ಇರಿತದಿಂದ ಗಾಯಗೊಂಡಿದ್ದ ವ್ಯಕ್ತಿ ನಿಧನ!!

ಯೆಯ್ಯಾಡಿಯ ಬಾ‌ರ್ ಒಂದರಲ್ಲಿ ಎರಡು ಗುಂಪುಗಳ ಮಧ್ಯೆ ಕಿರಿಕ್ ನಡೆದು ಚೂರಿ ಇರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕೌಶಿಕ್ (32) ಎಂಬ ಯುವಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ನಗರದ ಯೆಯ್ಯಾಡಿಯ ಬಾ‌ರ್ ಒಂದರಲ್ಲಿ ಎರಡು ಗುಂಪುಗಳ ಮಧ್ಯೆ ಕಿರಿಕ್ ನಡೆದು ಚೂರಿ ಇರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕೌಶಿಕ್ (32) ಎಂಬ ಯುವಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

akshaya college

ಜೂನ್ 6ರಂದು ಮಧ್ಯಾಹ್ನ ವೇಳೆಗೆ ಚೂರಿ ಇರಿತವಾಗಿತ್ತು. ಆರೋಪಿಗಳು ಹಾಗೂ ಸಂತ್ರಸ್ತ ಯುವಕ ಕೌಶಿಕ್ ಪರಿಚಿತರೇ ಆಗಿದ್ದರು. ಒಂದು ತಿಂಗಳ ಹಿಂದೆ ಇವರ ನಡುವೆ ಯಾವುದೋ ಕಾರಣಕ್ಕೆ ಮಾತಿನ ಚಕಮಕಿ ನಡೆದಿತ್ತು. ಇದೇ ಕೋಪದಲ್ಲಿ ಜೂನ್ 6ರಂದು ಯೆಯ್ಯಾಡಿಯ ಬಾರ್‌ನಲ್ಲಿದ್ದಾಗ ಪರಸ್ಪರ ಬೈದಾಡಿಕೊಂಡಿದ್ದರು. ಇದೇ ವೇಳೆ ಬಿಜೈ ನಿವಾಸಿಗಳಾದ ಬ್ರಿಜೇಶ್ ಮತ್ತು ಗಣೇಶ್ ಎಂಬುವರು ಚೂರಿ ತಂದು ಕೌಶಿಕ್ ಹೊಟ್ಟೆಗೆ ಇರಿದಿದ್ದಾರೆ. ತಕ್ಷಣ ಆತನ ಜೊತೆಗಿದ್ದವರು ಕೌಶಿಕ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದರು.

ಬ್ರಿಜೇಶ್ ಮತ್ತು ಕೌಶಿಕ್ ಮಧ್ಯೆ ಹಿಂದೆ ಗಲಾಟೆಯಾಗಿದ್ದು, ಅದೇ ದ್ವೇಷದಲ್ಲಿ ಕುಡಿದ ಮತ್ತಿನಲ್ಲಿ ಚೂರಿಯಿಂದ ಇರಿಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕದ್ರಿ ಪೊಲೀಸರು ಬ್ರಿಜೇಶ್, ಗಣೇಶ್, ನಿತಿನ್ ಕುಮಾ‌ರ್ ಮತ್ತು ವಿನೋದ್ ಎಂಬವರನ್ನು ಬಂಧಿಸಿ ಜೈಲಿಗೆ ಹಾಕಿದ್ದಾರೆ. ಸದ್ಯ ಜಾನಿಶ್ ಮೃತಪಟ್ಟಿದ್ದರಿಂದ ಹಲ್ಲೆ ಪ್ರಕರಣವನ್ನು ಪೊಲೀಸರು ಪ್ರಕರಣವಾಗಿ ಬದಲಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts