Gl
ಅಪರಾಧ

ಪ್ರೀತಿಸಿದ ಪ್ರೀತಂನ ಹತ್ಯೆ!! 2 ವರ್ಷ ದೊಡ್ಡವಳನ್ನು ಲವ್ ಮಾಡಿದ್ದೇ ತಪ್ಪಾ?

ಯುವಕನನ್ನು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿ ದುಷ್ಕರ್ಮಿಗಳು ಹತ್ಯೆ ಮಾಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗ್ರಾಮದಲ್ಲಿ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಯುವಕನನ್ನು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿ ದುಷ್ಕರ್ಮಿಗಳು ಹತ್ಯೆ ಮಾಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗ್ರಾಮದಲ್ಲಿ ನಡೆದಿದೆ.

rachana_rai
Pashupathi
akshaya college
Balakrishna-gowda

ನೀರುಗು‌ಂಟೆಪಾಳ್ಯ ಗ್ರಾಮದ ಪ್ರೀತಂ (19) ಕೊಲೆಯಾದ ಯುವಕ.

pashupathi

ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪೊಲೀಸ್ ಠಾಣೆಯ ಮುಂದೆ ಯುವಕನ ತಾಯಿ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಡೆಲಿವರಿ ಬಾಯ್ / ಎಂಬಿಬಿಎಸ್ ವಿದ್ಯಾರ್ಥಿನಿ:

ಮೃತ ಯುವಕ ಪ್ರೀತಂ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ತನಗಿಂತ 2 ವರ್ಷ ದೊಡ್ಡವಳಾದ ಯುವತಿಯನ್ನು ಪ್ರೀತಿ ಮಾಡುತ್ತಿದ್ದ. ಯುವತಿ ಎಂಬಿಬಿಎಸ್​ ಓದುತ್ತಿದ್ದಳು. ಪ್ರೀತಿ ವಿಚಾರ ತಿಳಿದು ಯುವಕನಿಗೆ ಯುವತಿ ಸಂಬಂಧಿಕರು ವಾರ್ನ್ ಮಾಡಿದ್ದರು.

ವಾರ್ನಿಂಗ್​ ಮಾಡಿದರೂ ಯುವತಿಯನ್ನು ಪ್ರೀತಂ ಪ್ರೀತಿ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಪ್ರೀತಂ ನನ್ನು ಕಿಡ್ನ್ಯಾಪ್​ ಮಾಡಿ ಹತ್ಯೆ ಮಾಡಲಾಗಿದೆ. ಯುವತಿ ಚಿಕ್ಕಮ್ಮನ ಮಗ ಶ್ರೀಕಾಂತ್ ಮತ್ತು ಸಹಚರರಿಂದ ಕಿಡ್ನ್ಯಾಪ್ ಮಾಡಲಾಗಿದ್ದು, ಕಂಠಪೂರ್ತಿ ಕುಡಿದು 4-5 ಜನರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ವೇಳೆ ಪ್ರೀತಂ ಸಾವು ಹಿನ್ನೆಲೆ ಶವ ಬಿಸಾಕಿ ಆರೋಪಿಗಳು ಎಸ್ಕೇಪ್ ಆಗಿರುವ ಆರೋಪ ಕೇಳಿಬಂದಿದೆ.

ಇತ್ತ ಬೆಳೆದು ನಿಂತಿದ್ದ ಮಗನನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪೊಲೀಸ್ ಠಾಣೆ ಮುಂದೆ ತಾಯಿ ಮತ್ತು ಸಂಬಂಧಿಕರು ಕಣೀರು ಹಾಕಿದ್ದಾರೆ. ಯುವಕನ ಸಾವಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts