ಅಪರಾಧ

ಹಲಸಿನ ಹಣ್ಣು ಕತ್ತರಿಸುವಾಗ ತಲೆಗೆ ಬಡಿದ ಕತ್ತಿ: ಬಾಲಕ ಹುಸೈನ್ ಮೃತ್ಯು!!

ಈ ಸುದ್ದಿಯನ್ನು ಶೇರ್ ಮಾಡಿ

ಹಲಸಿನ ಹಣ್ಣು ಕತ್ತರಿಸುವಾಗ ಆಕಸ್ಮಿಕವಾಗಿ ಕತ್ತಿ ತಲೆಗೆ ಬಡಿದು 8 ವರ್ಷದ ಬಾಲಕ ಸಾವನ್ನಪ್ಪಿರುವ ಘೋರ ದುರಂತ ಕಾಸರಗೋಡಿನ ವಿದ್ಯಾನಗರ ಠಾಣಾ ವ್ಯಾಪ್ತಿಯ ಪಾಡಿ ಬೆಳ್ಳೂರಡ್ಕ ಎಂಬಲ್ಲಿ ನಡೆದಿದೆ.

akshaya college

ಮೃತನನ್ನು ಹುಸೈನ್ ಶಹಬಾಸ್ (8) ಎಂದು ತಿಳಿದುಬಂದಿದೆ.

ತಾಯಿ ಜೊತೆ ಆಲಂಪಾಡಿ ಬೆಳ್ಳೂರಡ್ಕದಲ್ಲಿರುವ ಅಜ್ಜಿ ಮನೆಗೆ ಹುಸೈನ್ ಬಂದಿದ್ದನು. ತಾಯಿ ಅಡುಗೆ ಕೋಣೆ ಹೊರಗಡೆ ಮುಟ್ಟು ಕತ್ತಿಯಲ್ಲಿ ಹಲಸಿನ ಹಣ್ಣು ತುಂಡರಿಸುತ್ತಿದ್ದರು.

ಈ ವೇಳೆ ಹೊರಗಡೆಯಿಂದ ಆಟವಾಡುತ್ತಿದ್ದ ಹುಸೈನ್ ಓಡಿ ಕೊಂಡುಬಂದಾಗ ಆಕಸ್ಮಿಕವಾಗಿ ಕಾಲು ಜಾರಿ ಮುಟ್ಟು ಕತ್ತಿಯ ಮೇಲೆ ಬಿದ್ದಿದ್ದಾನೆ. ಗಂಭೀರ ಗಾಯಗೊಂಡ ಬಾಲಕನನ್ನು ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ದರೂ ಸಹ ಬಾಲಕ ಉಳಿಯಲಿಲ್ಲ.

ವಿದ್ಯಾನಗರ ಠಾಣಾ ಪೊಲೀಸರು ಅಸಹಜ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts