ಮಂಜೇಶ್ವರ: ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕೆಎಸ್ಸಾರ್ಟೀಸಿ ಬಸ್ಸಿನಲ್ಲಿ ಸಾಗಿಸಿದ ಅರ್ಧ ಕಿಲೋ ತೂಕದ ಚಿನ್ನಾಭರಣಗಳ ಸಹಿತ ಓರ್ವನನ್ನು ಮಂಜೇಶ್ವರ ಪೋಲೀಸರು ಬಂಧಿಸಿದ್ದಾರೆ.ಬಂಧಿತ ವ್ಯಕ್ತಿ ರಾಜಸ್ಥಾನ ಮೂಲದ ಚೆಗನ್ ಲಾಲ್ ಎಂಬಾತನಾಗಿದ್ದು, ವಿಚಾರಣೆ ನಡೆಯುತ್ತಿದೆ. ಹೊಸಂಗಡಿ ಚೆಕ್ ಪೋಸ್ಟ್ ಬಳಿ ಬಸ್ ತಡೆದು ನಡೆಸಿದ ತಪಾಸಣೆಯಲ್ಲಿ ಆರೋಪಿಯನ್ನು ಬಂಧಿಸಲಾಯಿತು.
ಅಬಕಾರಿ ದಳದವರು ಈ ಕಾರ್ಯಾಚರಣೆ ನಡೆಸಿದ್ದು, ಆರೋಪಿಯನ್ನು ಬಳಿಕ ಪೋಲೀಸರಿಗೆ ಹಸ್ತಾಂತರಿಸಲಾಯಿತು.