Gl harusha
ಅಪರಾಧ

ಕಾಸರಗೋಡು: ವಲಸೆ ಕಾರ್ಮಿಕನ ಕೊಲೆ ಪ್ರಕರಣ; ಓರ್ವ ಆರೋಪಿಯ ಬಂಧನ..!

ವಲಸೆ ಕಾರ್ಮಿಕನ ಕೊಲೆಗೆ ಸಂಬಂಧಪಟ್ಟಂತೆ ಕಾಸರಗೋಡು ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಕಾಸರಗೋಡು: ನಗರದ ಆನೆಬಾಗಿಲು ಎಂಬಲ್ಲಿ ಎರಡುದಿನಗಳ ಹಿಂದೆ ನಡೆದ ವಲಸೆ ಕಾರ್ಮಿಕನ ಕೊಲೆಗೆ ಸಂಬಂಧಪಟ್ಟಂತೆ ಕಾಸರಗೋಡು ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

srk ladders
Pashupathi
Muliya

ಬಂಧಿತನನ್ನು ಪಶ್ಚಿಮ ಬಂಗಾಳದ ಸಂಜಿತ್ ರಾಯ್ (25) ಎಂದು ಗುರುತಿಸಲಾಗಿದೆ. ಪಶ್ಚಿಮ ಬಂಗಾಳದ ಸುಶಾಂತ್ ರಾಯ್ (30) ರವರ ಕೊಲೆಗೆ ಸಂಬಂಧಪಟ್ಟಂತೆ ಈತನನ್ನು ಬಂಧಿಸಲಾಗಿದೆ.

ಕಟ್ಟಡ ನಿರ್ಮಾಣ ಕಾಮಗಾರಿಗೆ ಆರು ತಿಂಗಳ ಹಿಂದೆ ಕಾಸರಗೋಡಿಗೆ ಬಂದಿದ್ದ ಆರು ಮಂದಿಯ ತಂಡವು ಆನೆಬಾಗಿಲು ಎಂಬಲ್ಲಿ ಕ್ವಾಟರ್ಸ್ ನಲ್ಲಿ ವಾಸವಾಗಿದ್ದು ಸೋಮವಾರ ಮುಂಜಾನೆ ಇವರ ನಡುವೆ ಘರ್ಷಣೆ ನಡೆದಿದೆ. ಈ ಸಂದರ್ಭದಲ್ಲಿ ಬಲವಾದ ಪೆಟ್ಟು ಬಿದ್ದುದರಿಂದ ಸುಶಾಂತ್ ಅಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದರು.

ತಲೆಯ ಹಿಂಭಾಗಕ್ಕೆ ಬಿದ್ದ ಬಲವಾದ ಪೆಟ್ಟು ಸಾವಿಗೆ ಕಾರಣ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ತಿಳಿದುಬಂದಿತ್ತು. ಕೃತ್ಯದ ಬಳಿಕ ಸಂಜಯ್ ರಾಯ್ ಸೇರಿ ದಂತೆ ಜೊತೆಗಿದ್ದವರು ಪರಾರಿಯಾಗಲೆತ್ನಿಸಿದ್ದು, ಪಾಲಕ್ಕಾಡ್ ನಿಂದ ಪೊಲೀಸರು ವಶಕ್ಕೆ ಪಡೆದಿದ್ದರು.

ಒಟ್ಟು 14 ಮಂದಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಬಳಿಕ ಪ್ರಮುಖ ಆರೋಪಿಯಾದ ಸಂಜಯ್ ರಾಯ್ ನನ್ನು ಬಂಧಿಸಿದ್ದಾರೆ . ಸಂಜಯ್ ರಾಯ್ ಸುಶಾಂರ್‌ನ ಸಂಬಂಧಿಕ ಎಂದು ಪೊಲೀಸರು ತಿಳಿಸಿದ್ದಾರೆ. ಪಾನಮತ್ತರಾಗಿ ಇವರ ನಡುವೆ ಘರ್ಷಣೆ ನಡೆದಿದ್ದು ಮರದ ತುಂಡಿನಿಂದ ಈತ ಸುಶಾಂತ್‌ಗೆ ಹಲ್ಲೆ ನಡೆಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts