pashupathi
ಅಪರಾಧ

ತನ್ನ ಮನೆಯಲ್ಲೇ ಕಳ್ಳತನ;  ಮನೆಮಗಳ ಬಂಧನ!!

tv clinic
ಮನೆಯವರು ಕಾಶಿಯಾತ್ರೆಗೆ ಹೋಗಿದ್ದ ವೇಳೆ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಕತೆ ಕಟ್ಟಿದ್ದ ದೂರುದಾರರ ಮಗಳನ್ನೇ ಮಾರತಹಳ್ಳಿ ಠಾಣೆ ಪೊಲೀಸರು ಬಂಧಿಸಿ 21 ಲಕ್ಷ ರೂ. ಮೌಲ್ಯದ 258 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

akshaya college

ಯಮಲೂರಿನ ನಿವಾಸಿಯೊಬ್ಬರು ಕಾಶಿ ಯಾತ್ರೆಗೆ ಹೋಗಿ ವಾಪಸ್ ಬಂದಾಗ ಮನೆಗೆ ಹಾಕಿರುವ ಬೀಗ ಹಾಗೆಯೇ ಇತ್ತು. ಆದರೆ ಬೀಗ ತೆಗೆದು ಒಳಗೆ ಹೋಗಿ ನೋಡಿದಾಗ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣಗಳು ಕಳ್ಳತನವಾಗಿದ್ದವು.

ಈ ಬಗ್ಗೆ ಅವರು ಮಗಳು ಮತ್ತು ತಂಗಿ ಹಾಗೂ ತಂಗಿಯ ಮಗನ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಅವರ ಮಗಳನ್ನು ಠಾಣೆಗೆ ಕರೆಸಿ ವಿಚಾರಣೆಗೊಳಪಡಿಸಿದಾಗ ಚಿನ್ನಾಭರಣಗಳನ್ನು ಕಳವು ಮಾಡಿದಾಗ ತಿಳಿಸಿದ್ದಾರೆ.

ಕಳವು ಮಾಡಿದ ಚಿನ್ನಾಭರಣಗಳ ಪೈಕಿ 30 ಗ್ರಾಂ ಆಭರಣಗಳನ್ನು ಜ್ಯುವೆಲ್ಲರಿ ಅಂಗಡಿಯೊಂದರಲ್ಲಿ ಅಡಮಾನವಿಟ್ಟಿದ್ದು, ಉಳಿದ 228 ಗ್ರಾಂ ಆಭರಣವನ್ನು ತನ್ನ ಮನೆಯಲ್ಲಿಟ್ಟಿರುವುದಾಗಿ ವಿಚಾರಣೆ ವೇಳೆ ಆರೋಪಿತೆ ಹೇಳಿದ್ದಾಳೆ.

ಈಕೆಯ ಹೇಳಿಕೆ ಮೇರೆಗೆ ಪೊಲೀಸರು ಒಟ್ಟು 258 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದು, ಇದರ ಒಟ್ಟು ಮೌಲ್ಯ 21 ಲಕ್ಷ ರೂ. ಮೌಲ್ಯಗಳೆಂದು ಅಂದಾಜಿಸಲಾಗಿದೆ. ಈ ಪ್ರಕರಣವನ್ನು ಇನ್‌ಸ್ಪೆಕ್ಟರ್ ಅನಿಲ್‌ಕುಮಾ‌ರ್ ಹಾಗೂ ಸಿಬ್ಬಂದಿ ತಂಡ ಬೇಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿತೆಗೆ ನೋಟೀಸ್ ಜಾರಿ ಮಾಡಿ ಬಿಡುಗಡೆಗೊಳಿಸಿದ್ದಾರೆ.

Astrologer

What's your reaction?

Related Posts