Gl harusha
ಅಪರಾಧ

ರೀಲ್ಸ್ ಮಾಡಿ ಜೈಲು ಸೇರಿದ ಪೊಲೀಸ್ ಅಧಿಕಾರಿ ಹೆಂಡತಿ!!

ಟ್ರಾಫಿಕ್ ಮಧ್ಯೆ ರೀಲ್ಸ್ (Reels) ಮಾಡಲು ಹೋಗಿ ಓರ್ವ ಪೊಲೀಸ್‌ ಅಧಿಕಾರಿಯ ಪತ್ನಿ ಜೈಲು ಸೇರಿದ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಟ್ರಾಫಿಕ್ ಮಧ್ಯೆ ರೀಲ್ಸ್ (Reels) ಮಾಡಲು ಹೋಗಿ ಓರ್ವ ಪೊಲೀಸ್‌ ಅಧಿಕಾರಿಯ ಪತ್ನಿ ಜೈಲು ಸೇರಿದ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದೆ.

srk ladders
Pashupathi
Muliya

ಟ್ರಾಫಿಕ್ ಲೈಟ್‌ನ (traffic light) ಹಸಿರು ದೀಪ ಉರಿಯುತ್ತಿರುವಾಗ ಇಲ್ಲೊಬ್ಬ ಪೊಲೀಸ್‌ ಅಧಿಕಾರಿಯ ಪತ್ನಿ ವಾಹನಗಳು ಓಡಾಡುವಂತಹ ರಸ್ತೆ ಮಧ್ಯೆ ನಿಂತು ರೀಲ್ಸ್ಗಾಗಿ ಹರಿಯಾನ್ವಿ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಇವರ ಈ ರೀಲ್ಸ್ ಹುಚ್ಚಾಟದಿಂದಾಗಿ ಕೆಲ ಕಾಲ ಟ್ರಾಫಿಕ್ ಜಾಮ್ (Jam) ಉಂಟಾಗಿ ವಾಹನ ಸವಾರರು ಪರದಾಡಿದ್ದಾರೆ.

ಇನ್ನೂ ರೀಲ್ಸ್ ಮಾಡುತಿರುವ ಮಹಿಳೆಯನ್ನು ಚಂಡೀಗಢ ಪೊಲೀಸ್ ಅಧಿಕಾರಿಯ ಪತ್ನಿ ಜ್ಯೋತಿ (Jyoti) ಎಂದು ಮತ್ತು ವಿಡಿಯೋ ಚಿತ್ರಿಕರಣ ಮಾಡುತ್ತಿರುವರು ಜ್ಯೋತಿಯ ಸಹೋದರಿ ಪೂಜಾ (Pooja) ಗುರುತಿಸಲಾಗಿದೆ.

ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದಂತೆಯೇ ಹೆಡ್‌ ಕಾನ್ಸ್‌ಟೇಬಲ್ ಜಸ್ಟೀರ್ ಅವರ ದೂರಿನ ಮೇರೆಗೆ ಇಬ್ಬರು ಸಹೋದರಿಯರ ವಿರುದ್ಧ ಎಫ್‌ಐಆ‌ರ್ (FIR) ದಾಖಲಾಗಿದೆ. ಕೊನೆಗೆ ಪೊಲೀಸ್‌ ಠಾಣೆಯಲ್ಲಿ ವಿಚಾರಣೆ ಎದುರಿಸಿದ ಬಳಿಕ ಇಬ್ಬರೂ ಜಾಮೀನು ಪಡೆದು ವಾಪಸ್ ಆಗಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ (public places) ಇಂತಹ ಚಟುವಟಿಕೆಗಳು ಸಂಚಾರಕ್ಕೆ ಅಡ್ಡಿಯುಂಟುಮಾಡುತ್ತವೆ, ಇದು ರಸ್ತೆ ಅಪಘಾತಗಳಿಗೆ ಕಾರಣವಾಗಬಹುದು ಎಂದು ಘಟನೆಯ ನಂತರ ಚಂಡೀಗಢ ಪೊಲೀಸರು ಸ್ಪಷ್ಟಪಡಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts