ಪುತ್ತೂರು: ಎರಡು ತಂಡಗಳ ನಡುವೆ ಮಾರಾಮಾರಿ
ನಡೆದು, ಅದು ವಿಕೋಪಕ್ಕೆ ತಿರುಗಿ ಇಬ್ಬರ ಮೇಲೆ ಮಾರಕಾಯುಧದಿಂದ ಹಲ್ಲೆ ನಡೆದ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ನೆಕ್ಕಿಲಾಡಿ ಎಂಬಲ್ಲಿ ಮಾ 27 ರಂದು ಸಂಜೆ ನಡೆದಿದೆ.
ಈಶ್ವರಮಂಗಲ ಮೂಲದ ದೀಕ್ಷಿತ್ ರೈ ಕುತ್ಯಾಳ ಹಾಗೂ ಸ್ವಸ್ತಿಕ್ ಎಂಬವರಿಗೆ ಗಾಯವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹಣಕಾಸಿನ ವಿಚಾರವಾಗಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಫೋಟೊ ವೈರಲ್ ಮಾಡಿದ ವಿಚಾರವಾಗಿ ಈ ಗಲಾಟೆ ನಡೆದಿದೆ ಎಂದು ತಿಳಿದು ಬಂದಿದೆ.
6 ತಿಂಗಳ ಹಿಂದಿನವರೆಗೂ ಈ ಎರಡು ತಂಡದವರು ಸ್ನೇಹಿತರಾಗಿದ್ದು. ಬಳಿಕ ವ್ಯವಹಾರದಲ್ಲಿ ಮನಸ್ತಾಪ ಉಂಟಾಗಿ ಬೇರೆ ಬೇರೆಯಾಗಿದ್ದರು ಎನ್ನಲಾಗಿದೆ
ಎರಡು ದಿನಗಳ ಹಿಂದೆ ಕನ್ನಡದ ಚಿತ್ರನಟನನ್ನು ಪ್ರಜ್ವಲ್ ರೈ ಪಾತಾಜೆ ಎಂಬವರು ಕೇರಳದ ಮಾಡಯಿಕಾವು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದರು. ಈ ಸಂಗತಿ ಗೌಪ್ಯವಾಗಿಟ್ಟಿದ್ದರೂ ಚಿತ್ರ ನಟನೊಂದಿಗೆ ಪ್ರಜ್ವಲ್ ರೈ ಇರುವ ಫೋಟೊ ಗೆಳೆಯರ ಬಳಗದಲ್ಲಿ ವೈರಲ್ ಆಗಿ ರಾಜ್ಯ ಮಟ್ಟದ ಮಾಧ್ಯಮಗಳಿಗೆ ಸಿಕ್ಕಿತ್ತು. ಇದನ್ನು ಮಾದ್ಯಮಗಳಿಗೆ ತಲುಪಿಸುವಲ್ಲಿ ವಿರೋದಿ ಬಣದ ಕೈವಾಡ ಇದೆಯೆಂಬ ಅನುಮಾನಗಳು ಪ್ರಜ್ವಲ್ ಅವರಿಗಿತ್ತು ಎನ್ನಲಾಗಿದೆ.
ಮುನ್ನಲೆಗೆ ಬಂದು ಎರಡು ತಂಡಗಳ ನಡುವೆ ಕಳೆದೊಂದು ದಿನದಿಂದ ಫೋನ್ ನಲ್ಲಿ ಜಗಳವಾಗಿತ್ತು ಎಂದು ಮೂಲಗಳು ತಿಳಿಸಿವೆ.
ಇದರ ಮುಂದುವರಿದ ಭಾಗವಾಗಿ ಸಂಜೆ ಪುತ್ತೂರು ಪೇಟೆಯ ದರ್ಬೆ ಸಮೀಪದ ಹೊಟೇಲ್ ಒಂದರಲ್ಲಿ ಪ್ರಾರಂಭದಲ್ಲಿ ಮಾತಿನ ಚಕಮಕಿ ನಡೆದಿದೆ. ಇದರ ಮಾಹಿತಿ ಸಿಕ್ಕ ನಗರ ಠಾಣೆಯ ಪೊಲೀಸರು ಇತ್ತಂಡವನ್ನು ಸಮಾದಾನಿಸಿ ಅಲ್ಲಿಂದ ಕಳುಹಿಸಿದ್ದಾರೆ ಎನ್ನಲಾಗಿದೆ.
ಇದಾದ ಕೆಲ ಗಂಟೆಗಳ ಬಳಿಕ ರಾತ್ರಿ ಹೊತ್ತು. ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ನೆಕ್ಕಿಲಾಡಿಯಲ್ಲಿ ಕಾರಿಗೆ ಢಿಕಿ ಹೊಡೆದು ಇತ್ತಂಡಗಳು ಕಾದಾಡಿವೆ. ಈ ವೇಳೆ ಇಬ್ಬರಿಗೆ ಗಾಯವಾಗಿದೆ . ಪ್ರಜ್ವಲ್ ರೈ ತಂಡದಲ್ಲಿ ಯಾರೆಲ್ಲಾ ಇದ್ದರು ಹಾಗೂ ಅವರಿಗೆ ಗಾಯಗಳಾದ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ. ಪೊಲೀಸರು ಈ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ದೀಕ್ಷಿತ್ ರೈಯವರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆ ಮಂಗಳೂರಿಗೆ ಕರೆದುಕೊಂಡು ಹೋಗಿರುವುದಾಗಿ ತಿಳಿದು ಬಂದಿದೆ.