ಅಪರಾಧ

ಕೊಡಿಪ್ಪಾಡಿ ನಿವಾಸಿ ಲಲಿತಾ ಆತ್ಮಹತ್ಯೆ!

ನೇಣು ಬಿಗಿದು ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಿಪ್ಪಾಡಿ ಗ್ರಾಮದ ಕುದ್ಮಾನ್ ಎಂಬಲ್ಲಿ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ನೇಣು ಬಿಗಿದು ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಿಪ್ಪಾಡಿ ಗ್ರಾಮದ ಕುದ್ಮಾನ್ ಎಂಬಲ್ಲಿ ನಡೆದಿದೆ.

akshaya college

ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಕುದ್ಮಾನ್ ನಿವಾಸಿ ಲಲಿತಾ ಎಂದು ಗುರುತಿಸಲಾಗಿದೆ.

ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಮನೆ ಹಿಂಬದಿಯ ಅಂಗಳದಲ್ಲಿರುವ ಗೇರು ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಕಾಗದ ಪತ್ರ ಲಭಿಸಿದ್ದು, ಅದರಲ್ಲಿ ‘ನನ್ನ ಮರಣಕ್ಕೆ ನನ್ನ ಅನಾರೋಗ್ಯ ಕಾರಣ ಎಂದು ಬರೆದಿರುವುದು ಕಂಡು ಬಂದಿದೆ.

ಮೃತರ ಪುತ್ರ ಸತೀಶ್ ಕೆ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts