ಅಪರಾಧ

ವಿಟ್ಲ: ಸ್ವಿಫ್ಟ್ ಕಾರ್ ನಲ್ಲಿ ಬಂದು ಬಟ್ಟೆ ದೋಚಿದ ನವೀನ್ ಬಗಂಬಿಲ ಪೊಲೀಸ್ ವಶಕ್ಕೆ| ಇನ್ನುಳಿದ ಮೂವರಿಗೆ ಠಾಣೆಗೆ ಹಾಜರಾಗುವಂತೆ ಖಡಕ್ ಸೂಚನೆ|ದೋಚಿದ ವಸ್ತುಗಳನ್ನು 24 ಗಂಟೆಯೊಳಗೆ ಮಾಲಿಕರಿಗೆ ಹಿಂತಿರುಗಿಸಿದ ವಿಟ್ಲ ಪೊಲೀಸರು

ಡ್ರೆಸ್ ಶಾಪ್ ನಲ್ಲಿ ಒಂಟಿ ಮಹಿಳೆ ಕೆಲಸ ಮಾಡುತ್ತಿದ್ದ ವೇಳೆ ನವೀನ್  ಬಗಂಬಿಲ ಮತ್ತು ಇತರ ಮೂರು ಜನ ಏಕಾಏಕಿ ಅಂಗಡಿಯೊಳಗೆ ಅಕ್ರಮ ಪ್ರವೇಶ ಮಾಡಿ ಬೆದರಿಸಿ ಅಂಗಡಿಯಲ್ಲಿದ್ದ ಬಟ್ಟೆ  ಮತ್ತು ವಸ್ತುಗಳನ್ನು ದೋಚಿ ಪರಾರಿಯಾದ ಘಟನೆ ವಿಟ್ಲ ಶಾಲಾ ರಸ್ತೆ ಬಳಿ ನಿನ್ನೆ ಮಾ. 18 ರಂದು ನಡೆದಿತ್ತು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿತ್ತು. 

ಈ ಸುದ್ದಿಯನ್ನು ಶೇರ್ ಮಾಡಿ

ವಿಟ್ಲ: ಡ್ರೆಸ್ ಶಾಪ್ ನಲ್ಲಿ ಒಂಟಿ ಮಹಿಳೆ ಕೆಲಸ ಮಾಡುತ್ತಿದ್ದ ವೇಳೆ ನವೀನ್   ಬಗಂಬಿಲ ಮತ್ತು ಇತರ ಮೂರು ಜನ ಏಕಾಏಕಿ ಅಂಗಡಿಯೊಳಗೆ ಅಕ್ರಮ ಪ್ರವೇಶ ಮಾಡಿ ಬೆದರಿಸಿ ಅಂಗಡಿಯಲ್ಲಿದ್ದ ಬಟ್ಟೆ  ಮತ್ತು ವಸ್ತುಗಳನ್ನು ದೋಚಿ ಪರಾರಿಯಾದ ಘಟನೆ ವಿಟ್ಲ ಶಾಲಾ ರಸ್ತೆ ಬಳಿ ನಿನ್ನೆ ಮಾ. 18 ರಂದು ನಡೆದಿತ್ತು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿತ್ತು. 

akshaya college

ಕೃತ್ಯ ನಡೆದ 24 ಗಂಟೆಯ ಒಳಗೆ ಈ ಕೃತ್ಯದ ಪ್ರಮುಖ ಆರೋಪಿ ನವೀನ್ ಬಗಂಬಿಲ ಎಂಬಾತನನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದು ದೋಚಿದ ವಸ್ತುಗಳನ್ನು ಮತ್ತೆ ಅಂಗಡಿ ಮಾಲಿಕರಿಗೆ ಹಿಂದಿರುಗಿಸಿದ್ದಾರೆ. 

ನವೀನ್ ಬಗಂಬಿಲ ಕೋಟೆಕಾರ್ ಪಟ್ಟಣ ಪಂಚಾಯತ್ ನ ನಾಮ ನಿರ್ದೇಶಿತ ಸದಸ್ಯನಾಗಿರುತ್ತಾನೆ. ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನುಳಿದ ಮೂವರನ್ನು ಪೊಲೀಸ್ ಠಾಣೆಗೆ ಹಾಜರಾಗುವಂತೆ ಖಡಕ್ ಸೂಚನೆ ನೀಡಿದ್ದಾರೆ.

ವಿಟ್ಲ ಪೊಲೀಸರ ಯಶಸ್ವಿ ಕಾರ್ಯಾಚರಣೆಗೆ ವಿಟ್ಲದ ವರ್ತಕರು ಮತ್ತು ನಾಗರಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts