tamanvi
ಅಪರಾಧ

ಉಪ್ಪಿನಂಗಡಿ: ನೇತ್ರಾವತಿಯಲ್ಲಿ ಆಟೋ ಚಾಲಕ ಗಗನ್ ಶವ ಪತ್ತೆ!

GL
 ಆಟೋ ರಿಕ್ಷಾದಲ್ಲಿ ಬಾಡಿಗೆಗೆ ಹೋಗುತ್ತಿದ್ದೇನೆಂದು ಮನೆಯವರಿಗೆ ಹೇಳಿ ಹೋದ ಗೋಳಿತೊಟ್ಟುವಿನ ಆಟೋ ರಿಕ್ಷಾ ಚಾಲಕ ನಾಪತ್ತೆಯಾಗಿ ಇದೀಗ ಶವವಾಗಿ ಪತ್ತೆಯಾಗಿದ್ದಾನೆ.

ಈ ಸುದ್ದಿಯನ್ನು ಶೇರ್ ಮಾಡಿ

ಆಟೋ ರಿಕ್ಷಾದಲ್ಲಿ ಬಾಡಿಗೆಗೆ ಹೋಗುತ್ತಿದ್ದೇನೆಂದು ಮನೆಯವರಿಗೆ ಹೇಳಿ ಹೋದ ಗೋಳಿತೊಟ್ಟುವಿನ ಆಟೋ ರಿಕ್ಷಾ ಚಾಲಕ ಇದೀಗ ಶವವಾಗಿ ಪತ್ತೆಯಾಗಿದ್ದಾರೆ.

Shani-pooja

ಮೃತರನ್ನು ಗಗನ್ (19 ವರ್ಷ) ಎಂದು ಗುರುತಿಸಲಾಗಿದೆ.

ಮಾರ್ಚ್ 10 ರಂದು ಯುವಕ ಗೋಳಿತೊಟ್ಟಿನಿಂದ ಮನೆಗೆ ಕರೆ ಮಾಡಿ ನೆಲ್ಯಾಡಿ ಕಡೆಗೆ ಬಾಡಿಗೆ ಇದೆ ಎಂದು ಹೇಳಿ ಹೊರಟಿದ್ದ. ಇದೀಗ ನಾಪತ್ತೆಯಾಗಿದ್ದ ಆಟೋ ರಿಕ್ಷಾ ಚಾಲಕನ ಶವ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.

ಮಾರ್ಚ್ 10 ರಾತ್ರಿಯಿಂದಲೇ ಯುವಕನ ಹುಡುಕಾಟವನ್ನು ಮನೆಯವರು, ಸಂಬಂಧಿಕರು, ಸ್ನೇಹಿತರು ನಡೆಸಿದ್ದರು. ಎಲ್ಲೂ ಸಿಕ್ಕಿರಲಿಲ್ಲ. ಮಾರ್ಚ್ 11ರ ಸಂಜೆ ತನಕ ಹುಡುಕಾಟ ನಡೆಸಿದಾಗ ನೇತ್ರಾವತಿ ನದಿ ತಟದಲ್ಲಿ ಆತನ ರಿಕ್ಷಾ ಪತ್ತೆಯಾಗಿತ್ತು.

ರಿಕ್ಷಾದಲ್ಲಿ ಆತನ ಪರ್ಸ್ ಸಿಕ್ಕಿದೆ. ಆದರೆ ಮೊಬೈಲ್ ಫೋನ್ ಸಿಕ್ಕಿಲ್ಲ.

ಯುವಕನಿಗೆ ಯಾವುದೇ ದುಶ್ಚಟಗಳಿರಲಿಲ್ಲ. ಹೀಗಾಗಿ ಮನೆಯವರು ಸಾವಿನ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಪುತ್ತೂರಿಗೆ ಕೊಂಡೊಯ್ಯಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಹನಿಮೂನ್ ಕೊಲೆ ಪ್ರಕರಣಕ್ಕೆ ಹೋಲುವ ಮತ್ತೊಂದು ಘಟನೆ | ವಾಕಿಂಗ್ ವೇಳೆ ಪತಿಯ ಕೊಲೆಗೆ ಪತ್ನಿ ರೂಪಿಸಿದ್ದ ಸಂಚು ಬಯಲು!!

ನವವಿವಾಹಿತ ದಂಪತಿಗಳು ಸಂಜೆ ನಡಿಗೆಗೆ ತೆರಳಿದ್ದ ವೇಳೆ ಸಂಭವಿಸಿದ ಹಿಟ್–ಅಂಡ್–ರನ್ ಪ್ರಕರಣವು…