Gl jewellers

ಸ್ಥಳೀಯ

ಯುನೈನ್ ಆಟೋ ಲಿಂಕ್ಸ್ ಮಾಲಕರಾಗಿದ್ದ ಉಸ್ಮಾನ್ ಹೃದಯಾಘಾತದಿಂದ ನಿಧನ

ಪುತ್ತೂರು: ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಓಜಾಲ ನಿವಾಸಿ ಉಸ್ಮಾನ್ ರವರು ದೇರಳಕಟ್ಟೆ ಯೆನಪೋಯ ಆಸ್ಪತ್ರೆಯಲ್ಲಿ ಮಾ 6ರಂದು ಹೃದಯಾಘಾತದಿಂದ ನಿಧನರಾದರು ಹಲವಾರು ವರ್ಷಗಳಿಂದ ಸೆಕೆಂಡ್ ಹ್ಯಾಂಡ್ ವಾಹನ ವ್ಯಾಪಾರ ನಡೆಸುತ್ತಿದ್ದ ಅವರು, ಹಲವಾರು ವರ್ಷಗಳ ಹಿಂದೆ ಪುತ್ತೂರಿನ ಜೆ.ಎಂ.ಕಟ್ಟಡದಲ್ಲಿ ಯುನೈನ್ ಆಟೋ…

ಪಬ್ಲಿಕ್‌ ಪರೀಕ್ಷೆ ರದ್ದು!: ಯಾವೆಲ್ಲಾ ತರಗತಿಗಳ ಪರೀಕ್ಷೆ ರದ್ದು. ಇಲ್ಲಿದೆ ಡಿಟೈಲ್ಸ್…

ಬೆಂಗಳೂರು: ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯ ಸರ್ಕಾರ 5,8,9 ಮತ್ತು 11ನೇ ತರಗತಿಗಳಿಗೆ ರಾಜ್ಯ ಸರ್ಕಾರ ನಡೆಸಲು ಉದ್ದೇಶಿಸಿರುವ ಪಬ್ಲಿಕ್‌ ಪರೀಕ್ಷೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಸರ್ಕಾರ ಜಂಟಿಯಾಗಿ ಹೊರಡಿಸಿದ್ದ ಬೋರ್ಡ್‌…

ಬಜರಂಗದಳ ಮುಖಂಡ ಮುರಳಿಕೃಷ್ಣ ಹಸಂತಡ್ಕ ಪೊಲೀಸ್ ವಶಕ್ಕೆ!!

ತುಮಕೂರು: ಬಜರಂಗದಳ ಪ್ರಾಂತ ಸಹ ಸಂಯೋಜಕ್ ಮುರಳಿಕೃಷ್ಣ ಹಸಂತಡ್ಕ ಅವರನ್ನು ಕುಣಿಗಲ್ ರಸ್ತೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಪ್ರತಿಭಟನೆಗೆ ತೆರಳುತ್ತಿದ್ದ ಮುರಳೀಕೃಷ್ಣ ಹಸಂತ್ತಡ್ಕ ಅವರನ್ನು ತಡೆಯುವ ಉದ್ದೇಶದಿಂದ ಈ ಬಂಧನ ನಡೆದಿದೆ ಎಂದು ಹೇಳಲಾಗಿದೆ. ಭಯೋತ್ಪಾದಕ ಚಟುವಟಿಕೆಯ…

ಈ ದಿನಾಂಕದಂದು ಲೋಕ ಚುನಾವಣೆ ದಿನಾಂಕ ಘೋಷಣೆ!! 7 ಹಂತಗಳಲ್ಲಿ ಮತದಾನ ನಡೆಯುವ ಸಾಧ್ಯತೆ!

ನವದೆಹಲಿ: ಬಹು ನಿರೀಕ್ಷಿತ ಲೋಕಸಭೆ ಚುನಾವಣಾ ದಿನಾಂಕ ಮಾ.14 ಅಥವಾ 15ರಂದು ಘೋಷಣೆ ಆಗುವ ಸಾಧ್ಯತೆಗಳಿವೆ. ತಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ಮೂಲಗಳು ಹೇಳಿವೆ. ಏಪ್ರಿಲ್‌-ಮೇನಲ್ಲಿ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ. 2019ರಲ್ಲೂ ದೇಶದಲ್ಲಿ 7…

ಮತ್ತೆ ಬದಲಾಯ್ತು ಪಠ್ಯಪುಸ್ತಕ! ಟಿಪ್ಪು ಸುಲ್ತಾನ್ ಸೇರಿದಂತೆ ಯಾವೆಲ್ಲಾ ಪಠ್ಯ ಯಥಾಸ್ಥಿತಿ, ಯಾವುದಕ್ಕೆಲ್ಲಾ…

ಬೆಂಗಳೂರು : ಈ ಹಿಂದೆ ವಿವಾದ ಸೃಷ್ಟಿಸಿದ್ದ ಶಾಲಾ ಪಠ್ಯಪುಸ್ತಕ ಪರಿಷ್ಕರಣೆಯ ಪರಿಷ್ಕೃತ ವರದಿಯ ಶಿಫಾರಸು ಆಧರಿಸಿ 2024-25ನೇ ಸಾಲಿನಿಂದ ಹೊಸ ಪಠ್ಯಪುಸ್ತಕಗಳನ್ನು ಸರಕಾರ ಮುದ್ರಿಸಿ ಶಾಲೆಗೆ ಹಂಚಿಕೆ ಮಾಡಲು ನಿರ್ಧರಿಸಿದೆ. 1 ರಿಂದ 10ನೇ ತರಗತಿ ಕನ್ನಡ ಪ್ರಥಮ ಮತ್ತು ದ್ವಿತೀಯ ಭಾಷೆ, 9-10ನೆ ತರಗತಿಯ…

ಫೇಸ್’ಬುಕ್, ಇನ್’ಸ್ಟಾ ಬಳಕೆದಾರರ ಪರದಾಟ!!

ನವದೆಹಲಿ: ಸಾಮಾಜಿಕ ಮಾಧ್ಯಮ ದೈತ್ಯ ಫೇಸ್ಬುಕ್ ಸರ್ವರ್ ಡೌನ್ ಆಗಿದ್ದು, ಭಾರತ ಸೇರಿ ವಿಶ್ವದ್ಯಾಂತ ಲಕ್ಷಾಂತರ ಬಳಕೆದಾರರು ಪರದಾಡುವಂತಾಯಿತು. ಬಳಕೆದಾರರಿಗೆ ತಮ್ಮ ಖಾತೆಗಳನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ. ಪ್ರಪಂಚದಾದ್ಯಂತದ ಬಳಕೆದಾರರು ತಮ್ಮ ಫೇಸ್ಬುಕ್ ಪ್ರೊಫೈಲ್ಗಳನ್ನು ಲಾಗ್ ಇನ್ ಮಾಡುವಲ್ಲಿ ಮತ್ತು…

ಬೆಳ್ಳಾರೆ ಎನ್ಐಎ ದಾಳಿ ಪ್ರಕರಣ: ಬಿಜು ಅಬ್ರಹಾಂ ವಶ

ಪಂಜ: ಕಡಬ ತಾಲೂಕಿನ ನಿಂತಿಕಲ್ಲು ಬಳಿಯ ಎಣ್ಮೂರಿಗೆ ದಾಳಿ ನಡೆಸಿರುವ ಎನ್ಐಎ ಅಧಿಕಾರಿಗಳು ಕೇರಳ ಮೂಲದ ಬಿಜು ಅಬ್ರಹಾಂ ಎಂಬಾತನನ್ನು ಬಂಧಿಸಿದ್ದಾರೆ. ಇಂದು ಬೆಳಗ್ಗೆ ದಾಳಿ ನಡೆಸಿದ್ದ ಅಧಿಕಾರಿಗಳು ವಿಚಾರಣೆ ಬಳಿಕ ಸಂಜೆಯ ವೇಳೆಗೆ ವಶಕ್ಕೆ ಪಡೆದಿದ್ದು ಬೆಂಗಳೂರಿಗೆ ಕರೆದೊಯ್ದಿರುವ ಮಾಹಿತಿಯಿದೆ. ಆರೋಪಿ ಬಿಜು…

ಗಾಂಜಾ ನಶೆಯಲ್ಲಿ ಎರ‍್ರಾಬಿರ‍್ರಿ ಓಡಿದ ಥಾರ್ ಜೀಪ್; ಬೈಕ್‌ ಸವಾರ ಸಾವು

ಉಳ್ಳಾಲ: ಮಹೀಂದ್ರಾ ಥಾರ್‌ ಜೀಪ್‌ ಚಾಲಕನ ಅವಾಂತರದಿಂದಾಗಿ ಮಂಗಳೂರು ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್‌ ಸವಾರರೊಬ್ಬರು ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ರಾ.ಹೆದ್ದಾರಿ 66ರ ಕೊಲ್ಯ ಬ್ರಹ್ಮಶ್ರೀ ಮಂದಿರ ಎದುರುಗಡೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಈ ಅವಾಂತರಕ್ಕೆ ಥಾರ್‌…

ಎಸಿ ಕಚೇರಿಯಲ್ಲೇ ಸಿಬ್ಬಂದಿಯನ್ನು ತರಾಟೆಗೆತ್ತಿಕೊಂಡ ಶಾಸಕರು!!

ಪುತ್ತೂರು: ದೇವಸ್ಥಾನದ ಜಾಗದ ವಿಚಾರದಲ್ಲಿ ಸತಾಯಿಸುತ್ತಿದ್ದ ಪುತ್ತೂರು ಸಹಾಯಕ ಆಯುಕ್ತರ ಕಚೇರಿ ಸಿಬ್ಬಂದಿಯನ್ನು ಶಾಸಕ ಅಶೋಕ್ ಕುಮಾರ್ ರೈ ತರಾಟೆಗೆತ್ತಿಕೊಂಡ ಘಟನೆ ಮಂಗಳವಾರ ನಡೆಯಿತು. ಎಸಿ ಸಹಾಯಕ ಆಯುಕ್ತರ ಕಚೇರಿಗೆ ದಿಡೀರನೆ ಭೇಟಿ ನೀಡಿದ ಶಾಸಕರು, ಕೇಸ್ ವರ್ಕರ್ ಪೂವಪ್ಪ ಅವರನ್ನು…

ಕಾಮಗಾರಿ ಪೂರ್ಣಗೊಳಿಸಲು ಶಾಸಕರು ನೀಡಿದ ಗಡುವಿಗೆ ನಾಳೆಯೇ ಕೊನೆ ದಿನ!!

ಪುತ್ತೂರು: ಗುದ್ದಲಿ ಪೂಜೆ ನಡೆದು 3 ತಿಂಗಳು ಕಳೆದಿರುವ ಪುರುಷರಕಟ್ಟೆಯಿಂದ ಪಾಪೆತ್ತಡ್ಕ ನಡುವಿನ ರಸ್ತೆ ಕಾಮಗಾರಿಯನ್ನು ಮುಂದಿನ ಮೂರು ದಿನದೊಳಗೆ ಪೂರ್ಣಗೊಳಿಸಬೇಕು. ತಪ್ಪಿದಲ್ಲಿ, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಎಚ್ಚರಿಕೆ ನೀಡಿದರು. ಪುತ್ತೂರು –…