Gl

ರಾಜ್ಯ ವಾರ್ತೆ

ಲೋಕಸಭಾ ಚುನಾವಣೆ: ಕಾಂಗ್ರೆಸ್‌ ಅಧಿಕೃತ ಪಟ್ಟಿ ಬಿಡುಗಡೆ

ಬೆಂಗಳೂರು: ಲೋಕಸಭಾ ಚುನಾವಣೆ ಕಣ ದಿನೇ ದಿನೆ ರಂಗು ಪಡೆದುಕೊಳ್ಳುತ್ತಿದೆ. ಈಗ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಕಾಂಗ್ರೆಸ್‌ ಸಹ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ರಿಲೀಸ್‌ ಮಾಡಿದೆ. ಇದರಲ್ಲಿ ಬೆಂಗಳೂರು ಗ್ರಾಮಾಂತರ…

ರಾಮೇಶ್ವರಂ ಕೆಫೆ ಸ್ಫೋಟದ ಉಗ್ರ ಬಂಟ್ವಾಳದಲ್ಲಿ!!?? ಟ್ರಾವೆಲ್‌ ಹಿಸ್ಟರಿ ಹಿಡಿದು ಜಾಲಾಡುತ್ತಿರುವ…

ಬೆಂಗಳೂರು: ಬೆಂಗಳೂರಿನ ಬ್ರೂಕ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟದ ರೂವಾರಿಯನ್ನು ಸೆರೆ ಹಿಡಿಯಲು ಎನ್‌ಐಎ ಮತ್ತು ಪೊಲೀಸರು ನಡೆಸುತ್ತಿರುವ ಶತ ಪ್ರಯತ್ನಗಳು ಫಲ ನೀಡುತ್ತಿಲ್ಲ. ಬಾಂಬ್‌ ಇಟ್ಟು ಹೋದ ಆ ಟೋಪಿವಾಲಾ ದುಷ್ಕರ್ಮಿ ಅಲ್ಲಿದ್ದಾನೆ, ಇಲ್ಲಿದ್ದಾನೆ ಎಂಬ ಬಗ್ಗೆ…

ಕರ್ನಾಟಕದಲ್ಲಿನ್ನು ಬೈಕ್ ಟ್ಯಾಕ್ಸಿ ನಿಷೇಧ!! ವಿವಾದದ ಬಳಿಕ ಹೇರಿದ ನಿಷೇಧಕ್ಕೆ ಕಾರಣ ಬಹಿರಂಗ!

ಬೆಂಗಳೂರು: ಬೆಂಗಳೂರಿನಲ್ಲಿ ಓಲಾ ಹಾಗೂ ಉಬರ್ ನಷ್ಟೇ ಸಾಕಷ್ಟು ಪ್ರಸಿದ್ಧಿ ಪಡೆದಿದ್ದ ಬೈಕ್‍ಟ್ಯಾಕ್ಸಿ ಸೇವೆ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಅಧಿಸೂಚನೆಯಲ್ಲಿ, ಬೈಕ್‌ಗಳಂತಹ ಸಾರಿಗೆಯೇತರ ವಾಹನಗಳನ್ನು ಟ್ಯಾಕ್ಸಿಗಳಂತೆ ಮತ್ತು ಖಾಸಗಿ ಅಪ್ಲಿಕೇಶನ್‌ಗಳನ್ನು ಅವುಗಳ ಕಾರ್ಯಾಚರಣೆಗೆ ಬಳಸುವುದು ಮೋಟಾರು…

ಸುಧಾಮೂರ್ತಿ ಇನ್ನು ರಾಜ್ಯಸಭೆ ಎಂ.ಪಿ. | ಶುಭಹಾರೈಸಿದ ಮೋದಿ ಹೇಳಿದ್ದೇನು?

ಬೆಂಗಳೂರು: ಇನ್ಫೋಸಿಸ್‌ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಹಾಗೂ ಇನ್ಫೋಸಿಸ್‌ ಫೌಂಡೇಷನ್‌ನ ಮಾಜಿ ಅಧ್ಯಕ್ಷ, ಸಮಾಜಸೇವಕಿ ಸುಧಾ ಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ. ಬಿಜೆಪಿ ಪಕ್ಷದಿಂದ ಅವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲಾಗಿದೆ. ಈ ಕುರಿತಾಗಿ ಪ್ರಧಾನಿ ನರೇಂದ್ರ…

ಸ್ವಾಮೀಜಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ!

ಕುಣಿಗಲ್: ಹಂಗರಹಳ್ಳಿ ಶ್ರೀ ವಿದ್ಯಾ ಚೌಡೇಶ್ವರಿ ಮಠದ ಬಾಲ ಮಂಜುನಾಥ ಸ್ವಾಮಿ ಅವರನ್ನು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಗುರುವಾರ ಮಧ್ಯರಾತ್ರಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಬಾಲಕಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಗುರುವಾರ ಮಧ್ಯ ರಾತ್ರಿ ವಿಚಾರಣೆ ನಡೆಸಿ…

ರಾಮೇಶ್ವರಂ ಕೆಫೆ ಸ್ಫೋಟ: ಶಂಕಿತ ಉಗ್ರ ಎನ್ಐಎ ವಶ

ಬೆಂಗಳೂರು: ತೀವ್ರ ಆತಂಕಕ್ಕೆ ಕಾರಣವಾಗಿದ್ದ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರನೊಬ್ಬನನ್ನು ವಶಕ್ಕೆ ಪಡೆಯಲಾಗಿದೆ. ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿದ್ದ ಮಿನಾಜ್ ಅಲಿಯಾಸ್ ಸುಲೇಮಾನ್ ಎಂಬಾತನನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.…

5, 8, 9, 11ನೇ ತರಗತಿ ಬೋರ್ಡ್ ಪರೀಕ್ಷೆಗೆ ಅನುಮತಿ: ಹೈಕೋರ್ಟ್ ಆದೇಶ | ಪರೀಕ್ಷಾ ಆರಂಭಕ್ಕೂ ದಿನ ನಿಗದಿ

ಬೆಂಗಳೂರು: ರಾಜ್ಯ ಪಠ್ಯಕ್ರಮದ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ 5, 8, 9 ಹಾಗೂ 11ನೇ ತರಗತಿಗಳಿಗೆ, ರಾಜ್ಯಮಟ್ಟದ ಬೋರ್ಡ್‌ ಪರೀಕ್ಷೆ ನಡೆಸುವ ಸಂಬಂಧ ರಾಜ್ಯ ಸರಕಾರ ಹೊರಡಿಸಿದ್ದ ಸುತ್ತೋಲೆ ಯನ್ನು ರದ್ದುಪಡಿಸಿದ್ದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಗುರುವಾರ ವಿಭಾಗೀಯ ಪೀಠ…

ತಾಯಿಯ ಕರೆ ಜೀವ ಉಳಿಸಿತು!! | ರಾಮೇಶ್ವರಂ ಕೆಫೆ ಸ್ಫೋಟದ ರೋಚಕ ಕಥೆ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ ಕುಮಾರ್…

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಖ್ಯಾತ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಬಾಂಬ್ ಸ್ಫೋಟ ಸಂದರ್ಭದಲ್ಲಿ ಓರ್ವ ತಾಯಿ ಮಾಡಿದ ಒಂದು ದೂರವಾಣಿ ಕರೆ ಆತನ ಪ್ರಾಣ ಉಳಿಸಿದೆ. ಶುಕ್ರವಾರ ಮಧ್ಯಾಹ್ನ ಎಂದಿನಂತೆ ರಾಮೇಶ್ವರಂ ಕೆಫೆಗೆ ಊಟಕ್ಕೆ ಹೋಗಿದ್ದ 24 ವರ್ಷದ ಸಾಫ್ಟ್‌ವೇರ್…

ಬೆಂಗಳೂರು ಪಾರ್ಕಿಂಗ್ ಶುಲ್ಕ ಫ್ಲೈಟ್‌ ಚಾರ್ಜ್‌ಗೆ ಸಮ!!

ಬೆಂಗಳೂರು: ಒಂದು ಗಂಟೆ ಪಾರ್ಕಿಂಗ್‌ಗೆ ಅಬ್ಬಬ್ಬಾ ಎಂದರೆ ಎಷ್ಟು ಚಾರ್ಜ್‌ ಮಾಡಬಹುದು? 50 ರೂ.?, 100 ರೂ.? ಹೋಗಲಿ 200 ರೂ.? ಬೆಂಗಳೂರಿನ ಈ ಮಾಲ್‌ವೊಂದರಲ್ಲಿ ಬರೋಬ್ಬರಿ 1000 ರೂಪಾಯಿ ಪಾರ್ಕಿಂಗ್‌ ಚಾರ್ಜ್‌ ಅನ್ನು ನಿಗದಿ ಮಾಡಿದೆ. ಇದರ ಫೋಟೊ ಈಗ ಸಖತ್‌ ವೈರಲ್‌ ಆಗಿದೆ. ಭಾರತದಲ್ಲಿ ಮಾತ್ರ ಇಂಥ ಅಪರೂಪದ…

ರಾಜ್ಯದಲ್ಲಿ ಆ್ಯಸಿಡ್ ಮಾರಾಟ ನಿಷೇಧ: ಗೃಹ ಸಚಿವ | ಪರಿಹಾರದ ಬಗ್ಗೆಯೂ ಮಾತನಾಡಿದ ಪರಮೇಶ್ವರ್

ಬೆಂಗಳೂರು: ರಾಜ್ಯದಲ್ಲಿ ಆ್ಯಸಿಡ್ ಮಾರಾಟ ನಿಷೇಧಿಸಲಾಗುವುದು ಎಂದು ಘೋಷಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತರಿಗೆ ನಿವೇಶನ ನೀಡಲಾಗುವುದು ಎಂದೂ ಹೇಳಿದ್ದಾರೆ. ಇತ್ತೀಚೆಗೆ ಮಂಗಳೂರಿನಲ್ಲಿ ವ್ಯಕ್ತಿಯೊಬ್ಬ ಮೂವರು ಕಾಲೇಜು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ…