Gl ugadhi

ದೇಶ

ಹೆಣ್ಣು ಮಗು ಜನಿಸಿದರೆ 50 ಸಾವಿರ ರೂ., ಗಂಡು ಮಗುವಿಗೆ ಒಂದು ಹಸು!  ತೆಲುಗು ನಾಡಿನಲ್ಲಿ ಹೀಗೊಂದು ಸಂಚಲನ…

ಮೂರನೇ ಮಗು ಮಾಡಿಕೊಳ್ಳುವಂತಹ ದಂಪತಿಗಳಿಗೆ ಸಿಹಿ ಸುದ್ದಿ ಒಂದು ದೊರೆತಿದ್ದು ಹೆಣ್ಣು ಮಗು ಜನಿಸಿದರೆ 50,000 ನಗದು ಹಾಗೂ ಗಂಡು ಮಗು ಜನಿಸಿದರೆ ಹಸುವನ್ನು ಬಹುಮಾನವಾಗಿ ನೀಡುವುದಾಗಿ ಸಂಸದರು ಒಬ್ಬರು ಘೋಷಣೆ ಮಾಡಿದ್ದಾರೆ.ಹೌದು, ತೆಲುಗು ದೇಶಂ ಪಕ್ಷ (TDP)ದ ಸಂಸದ ಕಾಳಿಸೆಟ್ಟಿ ಅಪ್ಪಲನಾಯ್ಡು ಅವರು, 3ನೇ…

ಬದುಕೇ ಬದಲಿಸಿದ ಕುಂಭಮೇಳ: 45 ದಿನದಲ್ಲಿ 30 ಕೋಟಿ ರೂ. ಗಳಿಸಿದ ದೋಣಿ ನಾವಿಕ! | ಆರೋಗ್ಯ, ಸ್ವಚ್ಛತಾ…

ವಿಶ್ವದ ಅತಿ ದೊಡ್ಡ ಧಾರ್ಮಿಕ ಉತ್ಸವ 144 ವರ್ಷಕ್ಕೊಮ್ಮೆ ಸಂಭವಿಸುವ ಮಹಾಕುಂಭಮೇಳಕ್ಕೆ ಸಾಕ್ಷಿಯಾದ ಪ್ರಯಾಗ್‌ರಾಜ್‌ಗೆ ದೇಶ-ವಿದೇಶಗಳಿಂದ ಬಂದ 63ಕೋಟಿಗೂ ಅಧಿಕ ಭಕ್ತಾಧಿಗಳು ಆಗಮಿಸಿ, ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ

ಭಾರತದಲ್ಲಿ 124 ವರ್ಷಗಳಲ್ಲಿಯೇ ಹೆಚ್ಚಿನ ತಾಪಮಾನ ಕಂಡ ಫೆಬ್ರವರಿ ತಿಂಗಳು: ಭಾರತೀಯ ಹವಾಮಾನ ಇಲಾಖೆ

ಭಾರತದಲ್ಲಿ ಕಳೆದ 124 ವರ್ಷಗಳಲ್ಲಿಯೇ ಫೆಬ್ರವರಿ ತಿಂಗಳು ಹೆಚ್ಚಿನ ತಾಪಮಾನ ದಾಖಲಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಸರಾಸರಿ ತಾಪಮಾನವು 22 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿತ್ತು ಎಂದು ಅಧಿಕೃತ ಅಂಕಿಅಂಶಗಳು ತೋರಿಸಿವೆ.

ಹಿಮನದಿಗಳನ್ನು ಸಂರಕ್ಷಿಸದಿದ್ದರೆ ನದಿಗಳು ಬತ್ತುವ ಸಾಧ್ಯತೆ: ಪರಿಸರ ಹೋರಾಟಗಾರ ಸೋನಂ ವಾಂಗ್!!

ವರ್ಷವಿಡೀ ಹರಿಯುವ ನದಿಗಳಿಗೆ ಜೀವಸೆಲೆಯಾಗಿರುವ ಹಿಮನದಿಗಳನ್ನು ಸಂರಕ್ಷಿಸಲು ಕ್ರಮ ಕೈಗೊಳ್ಳದೇ ಇದ್ದರೆ ನದಿಗಳು ಬತ್ತುವ ಸಾಧ್ಯತೆ ಇದೆ. ಇದರಿಂದ 144 ವರ್ಷಗಳ ಬಳಿಕ ನಡೆಯಲಿರುವ ಮುಂದಿನ ಕುಂಭಮೇಳವನ್ನು ಮರಳಿನಲ್ಲಿ ನಡೆಸಬೇಕಾದೀತು ಎಂದು ಪರಿಸರ ಹೋರಾಟಗಾರ ಸೋನಂ ವಾಂಗ್ ಚುಕ್ ಎಚ್ಚರಿಸಿದ್ದಾರೆ.

ಕ್ಯಾನ್ಸರ್ ಡೇ ಕೇರ್ ಕೇಂದ್ರ ಪ್ರತಿ ಜಿಲ್ಲೆಯಲ್ಲೂ ಆರಂಭ: ಮೋದಿ| ಅಗ್ಗವಾಗುತ್ತಾ ಔಷಧಿ? ಕೇಂದ್ರ ಸ್ಥಾಪನೆಗೆ…

ಭಾರತದ ಎಲ್ಲಾ ಜಿಲ್ಲೆಗಳಲ್ಲಿ ಮುಂದಿನ 3 ವರ್ಷಗಳಲ್ಲಿ ಕ್ಯಾನ್ಸರ್ ಡೇಕೇರ್ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿಯ ಪ್ರಧಾನ ಕಾರ್ಯದರ್ಶಿಯಾಗಿ ಆರ್‌ಬಿಐ ಮಾಜಿ ಗವರ್ನರ್ ಶಕ್ತಿಕಾಂತ ದಾಸ್ 

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾಜಿ ಗವರ್ನರ್ ಶಕ್ತಿಕಾಂತ ದಾಸ್ ಅವರಿಗೆ ದೊಡ್ಡ ಜವಾಬ್ದಾರಿ ನೀಡಲಾಗಿದೆ. ಅವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿ-2 ಆಗಿ ನೇಮಿಸಲಾಗಿದೆ.

ದೆಹಲಿ  ಸಿಎಂ ಆಗಿ ರೇಖಾ ಗುಪ್ತ ಇಂದು ಪ್ರಮಾಣವಚನ ಸ್ವೀಕಾರ 

ಇಂದು ದೆಹಲಿ ಮುಖ್ಯಮಂತ್ರಿಯವರ ಪ್ರಮಾಣ ವಚನ ಸ್ವೀಕಾರ (ಫೆ.20) ಮಧ್ಯಾಹ್ನ 12:35 ಕ್ಕೆ ರಾಮಲೀಲಾ ಮೈದಾನದಲ್ಲಿ ನಡೆಯಲಿದೆ. ಹಾಗೂ ಡಿಸಿಎಂ ಆಗಿ ಪರ್ವೇಶ್ ವರ್ಮಾ ಅವರನ್ನು ಅಧಿಕೃತವಾಗಿ ಘೋಷಿಸಿದೆ.

ತಿರುಪತಿಯಲ್ಲಿ ಚಿನ್ನದ ನಾಣ್ಯ ಖರೀದಿಗೆ ಎಟಿಎಂ!!

ತಿರುಪತಿಯಲ್ಲಿ ಚಿನ್ನದ ಎಟಿಎಂ, ನೋಟುಗಳ ಬದಲಾಗಿ ಚಿನ್ನದ ನಾಣ್ಯ ಬರುತ್ತೆ ತಿರುಪತಿಯಲ್ಲಿ 'ಗೋಲ್ಡ್ ಎಟಿಎಂ' ಪ್ರಾರಂಭವಾಗಿದೆ. ಚಿನ್ನದ ನಾಣ್ಯಗಳನ್ನು ಪಡೆಯಲು ಬಯಸುವ ಜನರಿಗೆ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ.

ಲ್ಯಾಡಿಂಗ್ ವೇಳೆ ರನ್‌ ವೇಯಲ್ಲೇ ತಲೆ ಕೆಳಗಾಗಿ ಬಿದ್ದ ವಿಮಾನ.!!

ಲ್ಯಾಂಡಿಂಗ್ ವೇಳೆ ವಿಮಾನವೊಂದು ಪಲ್ಟಿ ಹೊಡೆದ ಪರಿಣಾಮ ಹದಿನೆಂಟು ಮಂದಿ ಗಾಯಗೊಂಡಿರುವ ಘಟನೆ ಕೆನಡಾದ ಟೊರೊಂಟೊ ಪಿಯರ್ಸನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಸಂಭವಿಸಿದೆ. ನಾಲ್ವರು ಸಿಬ್ಬಂದಿಗಳು ಸೇರಿ ಒಟ್ಟು ಎಂಬತ್ತು ಮಂದಿ ಪ್ರಯಾಣಿಸುತ್ತಿದ್ದ ಡೆಲ್ಟಾ ಏರ್‌ಲೈನ್ಸ್ ವಿಮಾನ ಯುಎಸ್ ನ…