ಅಪರಾಧ

ಆಟೋ ಚಾಲಕ ರಿಕ್ಷಾ ಸಹಿತ ನಾಪತ್ತೆ!

ಪುತ್ತೂರು ರೈಲ್ವೇ ನಿಲ್ದಾಣದ ಬಳಿ ಬಾಡಿಗೆಗೆಂದು ಹೋದ ಸಾಲ್ಮರ ಸೂತ್ರ ಬೆಟ್ಟು ನಿವಾಸಿ ಆಟೋ ರಿಕ್ಷಾ ಚಾಲಕ ಲೋಕೇಶ ಎಂಬುವವರು ರಿಕ್ಷಾ ಸಹಿತ ನಾಪತ್ತೆಯಾಗಿರುವ ಘಟನೆ ಎ.21 ರಂದು ನಡೆದಿದ್ದು, ಈ ಕುರಿತು ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

ಉಗ್ರರ ದಾಳಿಗೆ ಶಿವಮೊಗ್ಗ ಮೂಲದ ಪ್ರವಾಸಿಗ ಸಾವು!

ಜಮ್ಮು-ಕಾಶ್ಮೀರ ಪಹಲ್ಗಾಮ್ ಪ್ರದೇಶದ ಬೈಸರನ್ ವ್ಯಾಲಿಯಲ್ಲಿ ಉಗ್ರರು ಗುಂಡಿನ ದಾಳಿ ಮಾಡಿದ್ದು, ಈ ಘಟನೆಯಲ್ಲಿ ಶಿವಮೊಗ್ಗ ಮೂಲದ ಪ್ರವಾಸಿಗ ಸೇರಿ ಇಬ್ಬರು ಸಾವಿಗೀಡಾಗಿದ್ದಾರೆ. 12 ಜನರು ಗಾಯಗೊಂಡಿದ್ದಾರೆ.

ತನ್ನ ಮನೆಯಲ್ಲೇ ಕಳ್ಳತನ;  ಮನೆಮಗಳ ಬಂಧನ!!

ಮನೆಯವರು ಕಾಶಿಯಾತ್ರೆಗೆ ಹೋಗಿದ್ದ ವೇಳೆ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಕತೆ ಕಟ್ಟಿದ್ದ ದೂರುದಾರರ ಮಗಳನ್ನೇ ಮಾರತಹಳ್ಳಿ ಠಾಣೆ ಪೊಲೀಸರು ಬಂಧಿಸಿ 21 ಲಕ್ಷ ರೂ. ಮೌಲ್ಯದ 258 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಟ್ಲ: ರಸ್ಕಿನ್ ಕಾಂಪ್ಲೆಕ್ಸ್ ನ  ಎರಡು ಅಂಗಡಿಗಳು ಬೆಂಕಿಗಾಹುತಿ.!!

ವಿಟ್ಲ ಅರಮನೆ ರಸ್ತೆಯ ರಸ್ಕಿನ್ ಕಾಂಪ್ಲೆಕ್ಸ್ ನಲ್ಲಿ ಎರಡು ಅಂಗಡಿಗಳು ಬೆಂಕಿಗಾಹುತಿಯಾದ ಘಟನೆ ವಿಟ್ಲದಲ್ಲಿ ನಡೆದಿದೆ. ಮುರುಳಿಧರ್ ನೇತೃತ್ವದ ಫ್ರೆಂಡ್ಸ್ ವಿಟ್ಲ ತಂಡದ ಸದಸ್ಯರು ಕೂಡಲೇ ಪಿಕಪ್ ವಾಹನದಲ್ಲಿ ನೀರು ತಂದು ಬೆಂಕಿ ನಂದಿಸಲು ಯತ್ನಿಸಿದರು ಬಳಿಕ ಸ್ಥಳಕ್ಕೆ ಪುತ್ತೂರು ವಿಭಾಗದ ಅಗ್ನಿಶಾಮಕ ದಳದ…

ಕಾರು-ಆಟೋ ರಿಕ್ಷಾ ನಡುವೆ ಡಿಕ್ಕಿ, ಆಟೋ ಚಾಲಕ ಸಾವು…!!

ಪೆರಿಯಶಾಂತಿ ಸಮೀಪ ವಾಲ್ತಾಜೆ ಸೇತುವೆ ಬಳಿ ಕಾರು ಹಾಗೂ ಆಟೋ ರಿಕ್ಷಾವೊಂದರ ನಡುವೆ ಡಿಕ್ಕಿ ಸಂಭವಿಸಿ ಆಟೋ ರಿಕ್ಷಾ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಎ.20ರಂದು ಸಂಜೆ ನಡೆದಿದೆ.

ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಓಂ ಪ್ರಕಾಶ್ ಹತ್ಯೆ!

ಕರ್ನಾಟಕದ ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಓಂ ಪ್ರಕಾಶ್ ಅವರನ್ನು ರವಿವಾರ (ಎ20) ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹೆಚ್‌ಎಸ್ ಆರ್ ಲೇಔಟ್ ನಿವಾಸದಲ್ಲಿ ಓಂ ಪ್ರಕಾಶ್ ಅವರ ಮೃತ ದೇಹ ರಕ್ತದ ಮಡುವಿನಲ್ಲಿ ಇರುವುದು ಕಂಡು ಬಂದಿದೆ.

ಕೆಂಪೇಗೌಡ ಏರ್ ಪೋರ್ಟ್: ನಿಂತಿದ್ದ ವಿಮಾನಕ್ಕೆ ಟಿಟಿ ವಾಹನ ಡಿಕ್ಕಿ; ತಪ್ಪಿದ ಭಾರೀ ದುರಂತ

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಿನ್ನೆ ಸಂಜೆ ಘಟನೆ ನಡೆದಿದೆ. ಡಿಕ್ಕಿಯ ರಬ್ಬಸಕ್ಕೆ ಟಿಟಿ ವಾಹನದ ಟಾಪ್ ನಚ್ಚುಗುಜ್ಜಾಗಿದೆ. ಸಣ್ಣ ಪುಟ್ಟ ಗಾಯಗಳೊಂದಿಗೆ ಟಿಟಿ ಚಾಲಕ ಪಾರಾಗಿದ್ದಾರೆ.

ಜನಿವಾರ ಕಿತ್ತೆಸೆದ ಪ್ರಕರಣ| ಒಗ್ಗಟ್ಟಿನ ಹೋರಾಟಕ್ಕೆ ಸಚ್ಚಿದಾನಂದ ಮೂರ್ತಿ ತೃಪ್ತಿ

ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳ ಜನಿವಾರ ಕಿತ್ತೆಸೆದ ಘಟನೆ ವಿರುದ್ಧ ಬ್ರಾಹ್ಮಣ ಸಂಘಟನೆಗಳು ಒಗ್ಗಟ್ಟಿನಿಂದ ಪ್ರತಿಭಟನೆ ನಡೆಸಿದ್ದು ಸ್ವಾಗತಾರ್ಹ, ಇನ್ನು ಮುಂದೆ ಇಂತಹ ದುಸ್ಸಾಹಸಕ್ಕೆ ಕೈಹಾಕದಂತೆ ನೀಡಿದ ಎಚ್ಚರಿಕೆಯ ಗಂಟೆ ಇದು ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ…