ಅಪಘಾತ

ಸಿಂಗಾಪುರ ಧ್ವಜ‌ ಹೊಂದಿರುವ ಕಂಟೈನರ್ ಹಡಗಿನಲ್ಲಿ ಸ್ಫೋಟ!!ರಕ್ಷಣೆಗೆ ಧಾವಿಸಿದ ಕರಾವಳಿ ರಕ್ಷಣಾ ಪಡೆ,…

ಸಿಂಗಾಪುರ ಧ್ವಜ ಹೊಂದಿರುವ ಕಂಟೈನ‌ರ್ ಹಡಗು ಎಂವಿ ವಾನ್ ಹೈ 503ರಲ್ಲಿ ಸ್ಪೋಟವೊಂದು ಸಂಭವಿಸಿರುವುದಾಗಿ ರಕ್ಷಣಾ ಪಡೆ PRO ತಿಳಿಸಿದೆ. ಕೇರಳದ ಕರಾವಳಿಯಲ್ಲಿ ಸೋಮವಾರ ಬೆಳಗ್ಗೆ ಈ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ.

ರೈಲಿನಿಂದ ಹಳಿಗೆ ಬಿದ್ದ ಪ್ರಯಾಣಿಕರು: ಐವರು ಸಾವು!

ಟ್ರೈನ್‌ನಿಂದ ಹಳಿಗೆ ಬಿದ್ದು ಐವರು ಪ್ರಯಾಣಿಕರು ಮೃತಪಟ್ಟ ಘಟನೆ ಮುಂಬೈನಲ್ಲಿ ಸೋಮವಾರ (ಜೂ.09) ನಡೆದಿದೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಿಂದ ಥಾಣೆಯ ಕಸರಾ ಪ್ರದೇಶದ ಕಡೆಗೆ ಹೋಗುತ್ತಿದ್ದ ರೈಲಿನಿಂದ ಪ್ರಯಾಣಿಕರು ಹಳಿಗೆ ಬಿದ್ದಿದ್ದಾರೆ.

ಮುಳ್ಳೇರಿಯಾ: ತಂದೆಯ ಕಾರಿನಡಿಗೆ ಬಿದ್ದು ಒಂದೂವರೆ ವರ್ಷದ ಮಗು ಮೃತ್ಯು!

ತಂದೆ ಚಲಾಯಿಸುತ್ತಿದ್ದ ಕಾರಿನಡಿಗೆ ಬಿದ್ದು, ಒಂದೂವರೆ ವರ್ಷದ ಪುಟ್ಟ ಕಂದ ಸಾವನ್ನಪ್ಪಿರುವ ಘಟನೆ  ಮುಳ್ಳೇರಿಯಾದಲ್ಲಿ ನಡೆದಿದೆ. ಎಂ.ಹರಿದಾಸ್ ಮತ್ತು ಶ್ರೀವಿದ್ಯಾ ದಂಪತಿಯ ಪುತ್ರಿ ಹೃದ್ಯ ನಂದಾ ಎಂದು ಗುರುತಿಸಲಾಗಿದೆ.

ಗುಂಡ್ಯ: ಖಾಸಗಿ ಬಸ್ ಪಲ್ಟಿ-16ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗುಂಡ್ಯ ಸಮೀಪ ಬರ್ಚಿನಹಳ್ಳ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಜೂ.7ರಂದು ಮುಂಜಾನೆ ಸಂಭವಿಸಿದೆ.

ಉಟ್ಟ ಬಟ್ಟೆಗೆ ಹತ್ತಿಕೊಂಡ ಪೂಜೆಯ ಬೆಂಕಿ, ಮೃತ್ಯು!

ಮಂಗಳೂರು: ಪೂಜೆಯ ವೇಳೆ ಉಟ್ಟ ಬಟ್ಟೆಗೆ ಬೆಂಕಿ ತಗುಲಿದ ಪರಿಣಾಮ ಗಂಭೀರ ಸ್ಥಿತಿಯಲ್ಲಿ ನಗರದ ಖಾಸಗಿ ಆಸ್ಪತ್ರೆಯಲ್ಲಿದ್ದ ವೃದ್ಧೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ನಗರದ ಮೇರಿಹಿಲ್ ಸಮೀಪದ ಗುರುನಗರ ಎಂಬಲ್ಲಿನ ಸರೋಜಿನಿ (64) ಎಂಬವರು ಮೃತಪಟ್ಟರೆ, ಅವರನ್ನು ರಕ್ಷಿಸಲು…

ಬೆಳ್ತಂಗಡಿಯಲ್ಲಿ ಕಾಡಾನೆ ದಾಳಿ; ರಿಕ್ಷಾ ಚಾಲಕ ಜಸ್ಟ್ ಮಿಸ್, ರಿಕ್ಷಾ ನಜ್ಜುಗುಜ್ಜು!!

ಕಾಡಾನೆ ದಾಳಿಯಿಂದ ಆಟೋ ರಿಕ್ಷಾವೊಂದು ನಜ್ಜುಗುಜ್ಜಾದ ಘಟನೆ ಧರ್ಮಸ್ಥಳದ ಬೊಳಿಯಾರು ಎಂಬಲ್ಲಿ ಇಂದು( ಜೂ.6) ಶುಕ್ರವಾರ ಮುಂಜಾನೆ ನಡೆದಿದೆ.

ಆರ್‌ಸಿಬಿ ಸಂಭ್ರಮಾಚರಣೆ ಕಾಲ್ತುಳಿತದಲ್ಲಿ ಇಳಂತಿಲ ಮೂಲದ ಯುವತಿ ಸಾವು

ಉದ್ಯಮಿಯಾಗಿರುವ ಇಳಂತಿಲ ಮೂಲದ ಕರುಣಾಕರ ಶೆಟ್ಟಿ ಮತ್ತು ಕಾರ್ಕಳ ಹೆಬ್ರಿಯ ಪೂಜಾ ಶೆಟ್ಟಿಯವರ ಪುತ್ರಿ ಚಿನ್ನಯಿ ಶೆಟ್ಟಿ(20) ಕಾಲ್ತುಳಿತದಿಂದ ಸಾವಿಗೀಡಾಗಿದವರು ಎಂದು ತಿಳಿದು ಬಂದಿದೆ.