ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕಾಮಗಾರಿ ವೇಳೆ ಅವಘಡವೊಂದು ಸಂಭವಿಸಿದೆ.
ತೆಂಗಿನಮರ ಮುರಿದು ಬಿದ್ದು ದೇವಸ್ಥಾನದ ನಿತ್ಯ ಕಾರ್ಮಿಕನೋರ್ವನಿಗೆ ಗಾಯ ಉಂಟಾಗಿದೆ ಎಂದು ತಿಳಿದುಬಂದಿದೆ. ದೇವಳದ ಪುಷ್ಕರಣಿ ಸಮೀಪ ಅವಘಡ ನಡೆದಿದೆ.
ರವಿ (35) ಗಾಯಗೊಂಡವರು. ಅವರನ್ನು ತಕ್ಷಣ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತರಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ತಿಳಿದುಬಂದಿದೆ.