pashupathi
ಅಪರಾಧಪ್ರಚಲಿತ

ಮಂಗಳೂರಿಗೆ ಬರುತ್ತಿದ್ದ ಬಸ್  ತಡೆದು ಹಲ್ಲೆ !!

tv clinic
ಖಾಸಗಿ ಬಸ್ಸನ್ನು ವ್ಯಕ್ತಿಯೊಬ್ಬ ಅಡ್ಡಗಟ್ಟಿ ಗಾಜು ಒಡೆದು ಹಾಕಿ ದಾಂಧಲೆ ಎಸಗಿ ಪ್ರಯಾಣಿಕರನ್ನು ಭೀತಿಗೊಳಪಡಿಸಿದ ಘಟನೆ ಇಂದು ನಸುಕಿನ ಹೊತ್ತು ಹಾಸನದ ಬಳಿ ಸಂಭವಿಸಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸನ್ನು ವ್ಯಕ್ತಿಯೊಬ್ಬ ಅಡ್ಡಗಟ್ಟಿ ಗಾಜು ಒಡೆದು ಹಾಕಿ ದಾಂಧಲೆ ಎಸಗಿ ಪ್ರಯಾಣಿಕರನ್ನು ಭೀತಿಗೊಳಪಡಿಸಿದ ಘಟನೆ ಇಂದು ನಸುಕಿನ ಹೊತ್ತು ಹಾಸನದ ಬಳಿ ಸಂಭವಿಸಿದೆ. ದಾಂಧಲೆ ಎಸಗಿದ ವ್ಯಕ್ತಿ ಈ ಪರಿಸರದ ಪುಡಿ ರೌಡಿ ಎನ್ನಲಾಗಿದೆ. ಬಸ್‌ ತಡೆದು ಅಟ್ಟಹಾಸ ಮೆರೆದು ಲಾಂಗ್‌ನಿಂದ ಹಲ್ಲೆಗೆ ಯತ್ನಿಸಿದ್ದಾನೆ. ಘಟನೆ ಹಾಸನ ಹೊರವಲಯದ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಗುರುವಾರ ನಸುಕಿನ ಜಾವ 2 ಗಂಟೆಗೆ ಬೈಪಾಸ್‌ ರಸ್ತೆಯ ದೇವರಾಯಪಟ್ಟಣದ ಬಸ್ಸಿಗೆ ಕೆಎ 51 ಎಂವಿ 8912 ನಂಬರ್‌ನ ಸ್ವಿಫ್ಟ್ ಕಾರನ್ನು ಅಡ್ಡ ಇಟ್ಟು ನಿಲ್ಲಿಸಿದ್ದಾನೆ. ಕಾರಿನಿಂದ ಇಳಿದ ಬಳಿಕ ಗಲಾಟೆ ಮಾಡಿ ಬಸ್ಸಿನ ಗ್ಲಾಸನ್ನು ಒಡೆದು ಹಾಕಿದ್ದಾನೆ. ಪುಡಿ ರೌಡಿಯ ಹುಚ್ಚಾಟ ಬಸ್ಸಿನಲ್ಲಿದ್ದವರ ಮೊಬೈಲ್‌ಗಳಲ್ಲಿ ಸೆರೆಯಾಗಿದೆ. ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

akshaya college

ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 103