ಬೆಳ್ತಂಗಡಿ: ಚತುರ್ದಾನ ಪರಂಪರೆಯ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ತಮ್ಮ 76 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದು, ಇದೇ ಸಂದರ್ಭ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ನೇಮಕವಾಗಿದ್ದಾರೆ.
ಕಳೆದ 50 ವರ್ಷಗಳಿಂದ ಅತೀ ಹೆಚ್ಚು ಪಾರಂಪರಿಕ, ಸಾಂಸ್ಕೃತಿಕ ವಸ್ತುಗಳ ಸಂಗ್ರಹದ ಜತೆಗೆ 7500 ತಾಳೆ ಗರಿ ಹಸ್ತಪ್ರತಿ, 21,000 ಕಲಾ ಪ್ರಕಾರ, 25,000 ಅತೀ ಹಳೆಯ ಮತ್ತು ಅಪರೂಪದ ಪುಸ್ತಕಗಳು, 100 ವಿಂಟೇಜ್ ವಾಹನಗಳ ಸಂಗ್ರಹ ಬೆಳ್ತಂಗಡಿ ಮಂಜೂಷ ಸಂಗ್ರಹಾಲಯದಲ್ಲಿದ್ದು, ಈ ಅಪರೂಪದ ವಸ್ತುಗಳ ಸಂಗ್ರಹವನ್ನು ಪರಿಗಣಿಸಿ ನ. 25ರ ಹುಟ್ಟುಹಬ್ಬದ ದಿನದಂದೇ ಈ ಗೌರವವನ್ನು ಹಸ್ತಾಂತರಿಸಲಾಗಿದೆ.
ಡಾ. ಹೆಗ್ಗಡೆ ಹುಟ್ಟುಹಬ್ಬದಂದು ರಾಜ್ಯಾದ್ಯಂತ ಗಣ್ಯರು, ಅಭಿಮಾನಿಗಳು ಶುಭಹಾರೈಸಿದರು. ನ.26 ರಿಂದ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಆರಂಭಗೊಳ್ಳಲಿದ್ದು ಕ್ಷೇತ್ರದಲ್ಲಿ ಸಂಭ್ರಮ ಸಡಗರ ಮನೆ ಮಾಡಿದೆ.