All News

ಪ್ರಚೋದಿಸಿದ ತಾಯಿ: ಲೇಡಿ ಪಿಎಸ್‌ಐ ಮೇಲೆ ಹಲ್ಲೆ ಮಾಡಿದ ಮಗ!!

ತಾಯಿಯ ಮಾತಿನಿಂದ ಪ್ರಚೋದನೆಗೊಂಡು ಮಗ ಮಹಿಳಾ ಪಿಎಸ್‌ಐ (PSI) ಮೇಲೆ ಹಲ್ಲೆ ಮಾಡಿದ ಘಟನೆ ನ. 7 ರಂದು ಗುರುವಾರ ರಾತ್ರಿ 10 ಗಂಟೆ ಸುಮಾರು ನೆಲಮಂಗಲ ಟೌನ್ ಠಾಣೆಯಲ್ಲಿ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ತಾಯಿಯ ಮಾತಿನಿಂದ ಪ್ರಚೋದನೆಗೊಂಡು ಮಗ ಮಹಿಳಾ ಪಿಎಸ್‌ಐ (PSI) ಮೇಲೆ ಹಲ್ಲೆ ಮಾಡಿದ ಘಟನೆ ನ. 7 ರಂದು ಗುರುವಾರ ರಾತ್ರಿ 10 ಗಂಟೆ ಸುಮಾರು ನೆಲಮಂಗಲ ಟೌನ್ ಠಾಣೆಯಲ್ಲಿ ನಡೆದಿದೆ.

ನೆಲಮಂಗಲದ ಮುಕ್ತಿನಾಥೇಶ್ವರ ಬಡಾವಣೆಯ ಮಧಸೂದನ್ ಹಲ್ಲೆ ಮಾಡಿದ ಆರೋಪಿ

SRK Ladders

ಬಿಇ ಡ್ರಾಪ್ ಔಟ್ ಆಗಿರುವ ಮಧುಸೂದನ್ ಕೆಲಸಕ್ಕೆ ಹೋಗದೆ ಮನೆಯಲ್ಲೇ ಕಾಲ ಕಳೆಯುತ್ತಿದ್ದನು. ಈ ವಿಚಾರವಾಗಿ ತಾಯಿ ಸುಶೀಲಮ್ಮ ಮತ್ತು ಮಧುಸೂದನ್ ನಡುವೆ ಗಲಾಟೆ ನಡೆದಿದೆ. ಬಳಿಕ, ತಾಯಿ ಸುಶೀಲಮ್ಮ ಮಗನ ವಿರುದ್ಧ ನೆಲಮಂಗಲ ಟೌನ್‌ ಠಾಣೆಗೆ ದೂರು ನೀಡಿದ್ದಾರೆ.

ನಂತರ, ಪೊಲೀಸರು ವಿಚಾರಣೆಗೆಂದು ಇಬ್ಬರನ್ನೂ ಠಾಣೆಗೆ ಕರೆಸಿದ್ದಾರೆ. ಪೊಲೀಸ್ ಠಾಣೆಯಲ್ಲೇ ತಾಯಿ ಮತ್ತು ಮಗ ಜಗಳವಾಡಲು ಆರಂಭಿಸಿದ್ದಾರೆ. ಈ ವೇಳೆ ಮಹಿಳಾ ಪಿಎಸ್‌ಐ ಜಯಂತಿ, ಮಧುಸೂದನ್‌ಗೆ ಗದರಿಸಿ ಒಂದೇಟು ಹೊಡೆದಿದ್ದಾರೆ.

ಈ ಸಂದರ್ಭದಲ್ಲಿ ಸುಶೀಲಮ್ಮ, “ದೂರು ಕೊಟ್ಟು ಪೊಲೀಸರಿಂದ ಹೊಡೆಸಿದರೇ, ಪೊಲೀಸರಿಗೆ ತಿರುಗಿ ಹೊಡೆಯುವೆ ಅಂತ ಹೇಳುತ್ತಿದ್ದಿಯಲ್ಲ. ಈಗ ಹೊಡಿ ನೋಡೋಣ. ನೀನು ಗಂಡಸಾಗಿದ್ದರೆ ಪೊಲೀಸರಿಗೆ ಹೊಡೆದು ತೋರಿಸು. ಹೊಡಿ ಈಗ ಪೊಲೀಸರಿಗೆ ನೋಡೋಣ” ಎಂದು ಮಗ ಮಧುಸೂದನ್‌ನನ್ನು ಪ್ರಚೋದಿಸಿದ್ದಾಳೆ. ಪ್ರಚೋದನೆಗೊಂಡ ಮಧುಸೂದನ್ ಮಹಿಳಾ ಪಿಎಸ್‌ಐ ಜಯಂತಿ ಮೇಲೆ ಹಲ್ಲೆ ಮಾಡಿದ್ದಾನೆ. ಮಹಿಳಾ ಪಿಎಸ್‌ಐ ಜಯಂತಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಧುಸೂದನ್ ವಿರುದ್ಧ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮಧುಸೂದನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮಧುಸೂದನ್ ವಿರುದ್ದ ಕಲಂ-132,121(1 ),121(2),352, 54, 3 3(5) 2 ಪ್ರಕರಣ ಕೇಸು  ದಾಖಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts