All News

ಮಂಗಳೂರಿನ ಸಾಧಕನಿಗೆ ಬೆಂಗಳೂರಿನಲ್ಲಿ  ಅವಮಾನ!! ಅನಾಥ, ಬಡವರ ಶವ ಸಂಸ್ಕಾರಗೈಯುವ ನಿಸ್ವಾರ್ಥ ಸಾಧಕನನ್ನು ಪ್ರಶಸ್ತಿಗೆಂದು ಕರೆಸಿ, ಬರಿಗೈಲಿ ಕಳಿಸಿದರು!! “ಅಧಿಕಾರಿಗಳ ಎಡವಟ್ಟೋ – ರಾಜಕೀಯ ಕುಮ್ಮಕ್ಕೋ” ಸಾಮಾಜಿಕ ವಲಯದಲ್ಲಿ ಬಿಸಿಬಿಸಿ ಚರ್ಚೆ!!

ಅಧಿಕಾರಿಗಳ ಎಡವಟ್ಟೋ ಅಥವಾ ಜನಪ್ರತಿನಿಧಿಗಳ ಹುನ್ನಾರವೋ ಗೊತ್ತಿಲ್ಲ. ಆದರೆ ಸದ್ದಿಲ್ಲದೇ ನಿಸ್ವಾರ್ಥ ಸೇವೆಗೈಯುತ್ತಿದ್ದ ಓರ್ವ ಮಂಗಳೂರಿನ ಸಾಧಕನಿಗೆ ರಾಜ್ಯ ಸರಕಾರದಿಂದ ಹೀನಾಯ ಅವಮಾನ ಮಾಡಲಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಅಧಿಕಾರಿಗಳ ಎಡವಟ್ಟೋ ಅಥವಾ ಜನಪ್ರತಿನಿಧಿಗಳ ಹುನ್ನಾರವೋ ಗೊತ್ತಿಲ್ಲ. ಆದರೆ ಸದ್ದಿಲ್ಲದೇ ನಿಸ್ವಾರ್ಥ ಸೇವೆಗೈಯುತ್ತಿದ್ದ ಓರ್ವ ಮಂಗಳೂರಿನ ಸಾಧಕನಿಗೆ ರಾಜ್ಯ ಸರಕಾರದಿಂದ ಹೀನಾಯ ಅವಮಾನ ಮಾಡಲಾಗಿದೆ.

ಮಂಗಳೂರಿನ ಹೊರವಲಯದ ತೊಕ್ಕೊಟ್ಟಿನಲ್ಲಿ ಅನಾಥ ಶವಗಳ ಹಾಗೂ ಬಡವರ ಶವಗಳ ಅಂತ್ಯಕ್ರಿಯೆ ನಡೆಸಿಕೊಡುತ್ತಿದ್ದರು. ಇವರ ನಿಸ್ವಾರ್ಥ ಸೇವೆ ಈಗಾಗಲೇ ಹಲವರಿಂದ ಪ್ರಶಂಸೆಗೆ ಪಾತ್ರವಾಗಿದೆ. ಹಾಗೆಂದು ಯಾವುದೇ ಪ್ರಶಸ್ತಿ, ಪುರಸ್ಕಾರಕ್ಕೆ ಹಾತೊರೆದವರೇ ಅಲ್ಲ ಈ ಬಾಬು ಪಿಲಾರ.

SRK Ladders

ಬಾಬು ಪಿಲಾರ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಇದರ ನಡುವೆ, ಅಕ್ಟೋಬ‌ರ್ 30ರ ರಾತ್ರಿ ಬೆಂಗಳೂರಿನಿಂದ ಬಾಬು ಅವರಿಗೆ ಫೋನ್ ಮಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೀಲಮ್ಮ ಎಂಬುವರು ನಿಮಗೆ ಸುವರ್ಣ ಕರ್ನಾಟಕ 50 ಪ್ರಯುಕ್ತ ಸುವರ್ಣ ಸಂಭ್ರಮ ರಾಜ್ಯ ಪ್ರಶಸ್ತಿ ಘೋಷಣೆಯಾಗಿದೆ ಎಂದಿದ್ದರು. ಮಾತ್ರವಲ್ಲ, ನೀವು ಪ್ರಶಸ್ತಿ ಪಡೆಯಲು ಬೆಂಗಳೂರಿಗೆ ತುರ್ತಾಗಿ ಆಗಮಿಸಬೇಕು ಎಂದು ಆಹ್ವಾನ ನೀಡಿದ್ದರು.

ಆಗ ಬಾಬು ಅವರು ಸರಿಯಾಗಿ ನೋಡಿಕೊಳ್ಳಿ ನನ್ನದೇ ಹೆಸರು ಇದೆಯಲ್ಲವೇ? ಎಂದು ಅಧಿಕಾರಿಗೆ ಸ್ಪಷ್ಟನೆಯನ್ನು ಕೇಳಿದ್ದರು. ಆಗ ಅಧಿಕಾರಿ ಹೌದು ನಿಮ್ಮದೇ ಹೆಸರು ಎಂದು ಮರು ಉತ್ತರ ನೀಡಿದ್ದರು. ಅದರಂತೆ ಸುಮಾರು 55 ವರ್ಷದ ಬಾಬು ಪಿಲಾರ ಬೆಂಗಳೂರಿಗೆ ಹೋಗಿ ಪ್ರಶಸ್ತಿ ಪಡೆಯುವ ಖುಷಿಯಲ್ಲಿ ತೆರಳಿದ್ದರು.

ಕುಮಾರ ಕೃಪಾ ಸರಕಾರಿ ಅತಿಥಿ ಬಂಗಲೆಯಲ್ಲಿ ತಂಗಲು ವ್ಯವಸ್ಥೆ ಮಾಡಿಕೊಟ್ಟಿದ್ದರು. ಆದರೆ ಮಧ್ಯಾಹ್ನದ ಹೊತ್ತಿಗೆ ಬಾಬು ಪಿಲಾರ ಅವರಿಗೆ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರ ಪಿಎ ಕಿರಣ್ ಫೋನ್ ಮಾಡಿ “ಬಾಬು ಕಿಲಾರ’ ಅಂತ ಬೇರೊಬ್ಬರು ಇದ್ದಾರೆ. ಅವರು ಮಂಡ್ಯ ಜಿಲ್ಲೆಯ ಕಿಲಾರದವರು. ಅಮೆರಿಕದಲ್ಲಿ ನೆಲೆಸಿದ್ದು ನಿಮ್ಮ ಹೆಸರು ತಪ್ಪಾಗಿ ಬಂದಿದೆ ಎಂದು ತಿಳಿಸಿದ್ದಾರೆ.

ಮಂಗಳೂರು ‘ಬಾಬು ಪಿಲಾರ’ ಅವರಿಗೆ ತೀವ್ರ ನಿರಾಸೆಯಾಗಿದೆ. ಆಗ ಬಾಬು ಅವರು ನಾನೇನು ಪ್ರಶಸ್ತಿ ಕೇಳಿಕೊಂಡು ಬಂದಿದ್ದೇನೆಯೇ ಎಂದು ನೀಲಮ್ಮ ಅವರಿಗೆ ಫೋನ್ ಕರೆ ಮಾಡಿದಾಗ – ನಾನು ಕಾರ್ಯಕ್ರಮದಲ್ಲಿ ಇದ್ದೇನೆ. ಏನೋ ತಪ್ಪಾಗಿದೆ ಎಂದು ಉತ್ತರಿಸಿದ್ದಾರೆ.

ರಾಜ್ಯ ಸರಕಾರದ ಅಧಿಕಾರಿಗಳು ತಾವೇ ಮಾಡಿಕೊಂಡ ಗೊಂದಲದಲ್ಲಿ ಬಾಬು ಅವರನ್ನು ಬೆಂಗಳೂರಿಗೆ ಕರೆಸಿಕೊಂಡು ಕರಾವಳಿಯ ಮತ್ತೊಬ್ಬ ಸಾಧಕರಿಗೆ ಘೋರ ಅವಮಾನ ಮಾಡಿದ್ದಾರೆ.

ಬಾಬು ಪಿಲಾರ ಅವರ ಹೆಸರು ತಪ್ಪಾಗಿರಬಹುದು. ಆದರೆ ಮೊಬೈಲ್ ಸಂಖ್ಯೆ ತಪ್ಪಾಗಲು ಸಾಧ್ಯವೇ? ಬಾಬು ಪಿಲಾರ ಅವರ ಮೊಬೈಲ್ ಸಂಖ್ಯೆಗೆ ನೀಲಮ್ಮ ಅವರು ಕರೆ ಮಾಡಿದ್ದರಲ್ಲವೇ? ಅದು ಹೇಗೆ ಸಾಧ್ಯ? ಅವರಿಗೆ ಮೊಬೈಲ್ ಸಂಖ್ಯೆ ಸಿಕ್ಕಿದ್ದಾದರೂ ಹೇಗೆ? ಕರಾವಳಿಯ ಸಾಧಕನಿಗೆ ಅವಮಾನದ ಹಿಂದೆ ರಾಜಕೀಯ ಕುಮ್ಮಕ್ಕು ಇದೆಯೇ? ಇಂತಹ ಚರ್ಚೆಗಳು ಇದೀಗ ಸಾಮಾಜಿಕ ವಲಯದಲ್ಲಿ ಕೇಳಿಬರುತ್ತಿವೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts