All News

ಉಗ್ರರ ದಾಳಿಗೆ ವೀರ ಮರಣವನ್ನಪ್ಪಿದ ಶ್ವಾನ ‘ಫ್ಯಾಂಟಮ್’

ಭಯೋತ್ಪಾದಕರ ದಾಳಿ ತೀವ್ರಗೊಂಡಿದ್ದು ಇದರ ಹಿನ್ನೆಲೆಯಲ್ಲಿ ಸೇನೆ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಸೋಮವಾರ ಬೆಳಿಗ್ಗೆ ಮುಂದಾಗಿದೆ ಅದರಂತೆ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಉಗ್ರರು ಸೇನಾ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಈ ವೇಳೆ ಸೇನಾ ಪಡೆಯ ಶ್ವಾನ 'ಫ್ಯಾಂಟಮ್' ಗೆ ಗಂಭೀರ ಗಾಯವಾಗಿತ್ತು ಕೂಡಲೇ ಶ್ವಾನಕ್ಕೆ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದೆ

ಈ ಸುದ್ದಿಯನ್ನು ಶೇರ್ ಮಾಡಿ

ಜಮ್ಮು ಕಾಶ್ಮೀರದ ಅನ್ನೂರ್‌ನ ಸುಂದರ್‌ಬನಿ ಸೆಕ್ಟರ್‌ನಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಹೆಮ್ಮೆಯ ಶ್ವಾನ ‘ಫ್ಯಾಂಟಮ್’ ವೀರ ಮರಣವನ್ನಪ್ಪಿದೆ

ಕಳೆದ ಕೆಲವು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ ತೀವ್ರಗೊಂಡಿದ್ದು ಇದರ ಹಿನ್ನೆಲೆಯಲ್ಲಿ ಸೇನೆ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಸೋಮವಾರ ಬೆಳಿಗ್ಗೆ ಮುಂದಾಗಿದೆ ಅದರಂತೆ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಉಗ್ರರು ಸೇನಾ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಈ ವೇಳೆ ಸೇನಾ ಪಡೆಯ ಶ್ವಾನ ‘ಫ್ಯಾಂಟಮ್’ ಗೆ ಗಂಭೀರ ಗಾಯವಾಗಿತ್ತು ಕೂಡಲೇ ಶ್ವಾನಕ್ಕೆ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

SRK Ladders

ಫ್ಯಾಂಟಮ್ ಬೆಲ್ಡಿಯನ್ ಮಾಲಿನೋಯಿಸ್‌ ತಳಿಗೆ ಸೇರಿದ ಶ್ವಾನವಾಗಿದ್ದು, 2020ರ ಮೇ ತಿಂಗಳಲ್ಲಿ ಜನಿಸಿತ್ತು. ಬಳಿಕ 2022ರಲ್ಲಿ ಸೇನೆಗೆ ಸೇರ್ಪಡೆಗೊಂಡಿತ್ತು ಅಲ್ಲದೆ ಶ್ವಾನ K9 ಘಟಕದ ಭಾಗವಾಗಿತ್ತು, ಭಯೋತ್ಪಾದನೆ-ವಿರೋಧಿ ಕಾರ್ಯಾಚರಣೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ್ದು ಪ್ಯಾಂಟಮ್ ಅಗಲಿಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ ಅವರ ಧೈರ್ಯ, ನಿಷ್ಠೆ ಮತ್ತು ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ವೈಟ್ ನೈಟ್ ಕಾರ್ಪ್ಸ್ ಟ್ವಿಟ್ ಮಾಡಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts