Gl harusha
ಕರಾವಳಿಪ್ರಚಲಿತಸ್ಥಳೀಯ

ಮಂಗಳೂರು: ಬಂಟ್ವಾಳದ ಯುವಕ ಸಮುದ್ರ ಪಾಲು!

ಮಂಗಳೂರು: ಇಲ್ಲಿನ ಮುಕ್ಕ ರೆಡ್‌ ರಾಕ್ ಕಡಲ ಕಿನಾರೆಯ ನೀರಿನಲ್ಲಿ ಆಡುತ್ತಿದ್ದ ಯುವಕನೋರ್ವ ಸಮುದ್ರ ಪಾಲಾಗಿರುವ ಘಟನೆ ಅ.22ರ ಮಂಗಳವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ‌.

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಇಲ್ಲಿನ ಮುಕ್ಕ ರೆಡ್‌ ರಾಕ್ ಕಡಲ ಕಿನಾರೆಯ ನೀರಿನಲ್ಲಿ ಆಡುತ್ತಿದ್ದ ಯುವಕನೋರ್ವ ಸಮುದ್ರ ಪಾಲಾಗಿರುವ ಘಟನೆ ಅ.22ರ ಮಂಗಳವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ‌.

srk ladders
Pashupathi
Muliya

ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ನಿವಾಸಿ, ಕೃಷ್ಣಕುಮಾರ್ ಸೋಮಯಾಜಿ ಅವರ ಪುತ್ರ ಪ್ರಜ್ವಲ್ (21) ನೀರುಪಾಲಾದ ಯುವಕ.

ಪ್ರಜ್ವಲ್ ಸುಮಾರು 8 ಮಂದಿ ಸ್ನೇಹಿತರೊಂದಿಗೆ ಅ.22ರ ಮಂಗಳವಾರ ಸಂಜೆ ಮುಕ್ಕ ರೆಡ್ ರಾಕ್ ಬಳಿಯ ಸಮುದ್ರ ಕಿನಾರೆಯಲ್ಲಿ ಆಟವಾಡುತ್ತಿದ್ದರು ಎನ್ನಲಾಗಿದೆ.

ಈ ಸಂದರ್ಭ ಸಮುದ್ರದ ಅಲೆಗೆ ಸಿಲುಕಿ ಪ್ರಜ್ವಲ್ ಸಮುದ್ರಪಾಲಾಗಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

Related Posts