Gl harusha
ದೇಶಪ್ರಚಲಿತರಾಜ್ಯ ವಾರ್ತೆ

ನೋಟರಿ ವಕೀಲರಿಗೆ ಸ್ಪಷ್ಟ ಸೂಚನೆ ನೀಡಿದ ಸಚಿವಾಲಯ!!  ಅಷ್ಟಕ್ಕೂ ಸಚಿವಾಲಯ ನೀಡಿದ ಸೂಚನೆಯಾದರೂ ಏನು ಗೊತ್ತೇ??

ಕೇಂದ್ರ ಸರ್ಕಾರದಿಂದ ನೇಮಕಗೊಂಡಿರುವ ನೋಟರಿ ವಕೀಲರಿಗೆ ಕಾನೂನು ಮತ್ತು ನ್ಯಾಯ ಸಚಿವಾಲಯದ ಕಾನೂನು ವ್ಯವಹಾರಗಳ ವಿಭಾಗ ಮಹತ್ವದ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಕೇಂದ್ರ ಸರ್ಕಾರದಿಂದ ನೇಮಕಗೊಂಡಿರುವ ನೋಟರಿ ವಕೀಲರಿಗೆ ಕಾನೂನು ಮತ್ತು ನ್ಯಾಯ ಸಚಿವಾಲಯದ ಕಾನೂನು ವ್ಯವಹಾರಗಳ ವಿಭಾಗ ಮಹತ್ವದ ಸೂಚನೆ ಹೊರಡಿಸಿದೆ. ದಿನಾಂಕ 10-10-2024ರಂದು ಕಾನೂನು ವ್ಯವಹಾರಗಳ ವಿಭಾಗ ಎಲ್ಲ ನೋಟರಿ ವಕೀಲರಿಗೆ ನೋಟೀಸ್ ಜಾರಿಗೊಳಿಸಲಾಗಿದೆ. ಇದರಲ್ಲಿ ಕೆಲವೊಂದು ಮಹತ್ವದ ಸೂಚನೆಗಳನ್ನು ನೀಡಲಾಗಿದೆ.

srk ladders
Pashupathi
Muliya

ನೋಟರಿ ವಕೀಲರು ವಿವಾಹ ನೋಂದಣಿ ಮತ್ತು ವಿವಾಹ ವಿಚ್ಚೇದನದ ಅಫಿಡವಿತ್ ಗೆ ದೃಢೀಕರಣ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ನೋಟರಿ ಕಾಯ್ದೆ 1952 ಸೆಕ್ಷನ್ 8 ಮತ್ತು ನೋಟರಿ ನಿಯಮಗಳು-1956ರ ನಿಯಮ 11ರ ಪ್ರಕಾರ ವಿವಾಹ ನೋಂದಣಿ ಮತ್ತು ವಿವಾಹ ವಿಚ್ಚೇದನ ಮಾಡುವುದು ನೋಟರಿ ವಕೀಲರ ಕೆಲಸದ ಭಾಗವಲ್ಲ. ಈ ನಿಯಮ ಮತ್ತು ಕಾಯ್ದೆಗಳ ಪ್ರಕಾರ, ನೋಟರಿ ವಕೀಲರು ಯಾವುದೇ ವಿವಾಹವನ್ನು ಅಧಿಕೃತಗೊಳಿಸಿ ಪ್ರಮಾಣಪತ್ರ ನೀಡುವಂತಿಲ್ಲ. ಅದೇ ರೀತಿ, ವಿಚ್ಚೇದನ ಪತ್ರದ ನೋಂದಣಿಯನ್ನು ನೋಂದಾಯಿಸುವಂತಿಲ್ಲ.  ನೋಟರಿ ವಕೀಲರು ವಿವಾಹ ಅಧಿಕಾರಿಯಾಗಿ  ನೇಮಕಗೊಂಡಿಲ್ಲ. ವೈವಾಹಿಕ ನೋಂದಣಿಗಳ ಪ್ರದತ್ತ ಅಧಿಕಾರವನ್ನು ನೋಟರಿ ವಕೀಲರಿಗೆ ನೀಡಲಾಗಿಲ್ಲ  ಎಂದು ಇಲಾಖೆಯಿಂದ ಹೊರಡಿಸಲಾದ ಕಚೇರಿ ಜ್ಞಾಪನಾ ಪತ್ರದ ನೋಟೀಸ್‌ನಲ್ಲಿ ತಿಳಿಸಲಾಗಿದೆ. ಯಾರಾದರೂ ನೋಟರಿ ವಕೀಲರ ನೆಲೆಯಲ್ಲಿ ವೈವಾಹಿಕ ದಾಖಲೆಗಳನ್ನು ವಿವಾಹ ನೋಂದಣಿ ಅಥವಾ ವಿಚ್ಚೇದನ ಕರಾರನ್ನು ದೃಢಪಡಿಸಿದ್ದಲ್ಲಿ ಅಥವಾ ನೋಂದಣಿ ಮಾಡಿಸಿಕೊಂಡಲ್ಲಿ  ಅದನ್ನು ಗಂಭೀರ ದುರ್ವತ್ತನೆ  ಎಂದು ಪರಿಗಣಿಸಲಾಗುವುದು ಮತ್ತು ಅಂತಹ ವಕೀಲರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts