All News

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಸಭೆ.

ಅಖಿಲ ಕರ್ನಾಟಕ ಹಿರಿಯರ ಸೇಪ್ರತಿಷ್ಠಾನ (ರಿ) ಮೆಲ್ಕಾರ್ ಬಂಟ್ವಾಳ ಇದರ ಕೇಂದ್ರ ಸಮಿತಿಯ ಸಭೆಯು ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಚಾರ್ಯ  ಪ್ರೊ.ವೇದವ್ಯಾಸ ರಾಮಕುಂಜ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರ್ ಬಂಟ್ವಾಳ ಇದರ ಕೇಂದ್ರ ಸಮಿತಿಯ ಸಭೆ ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಚಾರ್ಯ  ಪ್ರೊ.ವೇದವ್ಯಾಸ ರಾಮಕುಂಜ  ಇವರ ನಿವಾಸದಲ್ಲಿ ಜರಗಿತು. 

ಪ್ರತಿಷ್ಠಾನದ ಅಧ್ಯಕ್ಷ  ಕೆಯ್ಯೂರು ನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು.   ಪ್ರತಿ ತಾಲೂಕು ಘಟಕದ ಪುನಾರಚನೆ,ಕೇಂದ್ರ ಸಮಿತಿಯ ಸಭೆಗೆ ಗೈರಾಗುತ್ತಿರುವ ಪದಾಧಿಕಾರಿಗಳ ಬದಲಾವಣೆ,ಕೇಂದ್ರ ಸಮಿತಿಗೆ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ, ಡಿಸೆಂಬರ್ ನಲ್ಲಿ ಜರಗುವ ತೃತೀಯ ವಾರ್ಷಿಕೋತ್ಸವ, ತಾಲೂಕ ಘಟಕದ ಅಧ್ಯಕ್ಷ  ಮತ್ತು ಕಾರ್ಯದರ್ಶಿ ಕೇಂದ್ರಸಮಿತಿಯ  ಪ್ರತಿ ತಿಂಗಳ ಸಭೆಯಲ್ಲಿ ಪ್ರತಿನಿಧಿಗಳಾಗಿ  ಹಾಜರಿರುವ ಅಗತ್ಯದ ಬಗ್ಗೆ ಚರ್ಚಿಸಲಾಯಿತು.

SRK Ladders

 ಪ್ರತಿಷ್ಠಾನದ ಗೌರವಾಧ್ಯಕ್ಷ  ಪ್ರೊ.ಎ .ವಿ ನಾರಾಯಣ , ಮಹಿಳಾ ಪ್ರತಿನಿಧಿ ಪ್ರೊ.ವತ್ಸಲಾ ರಾಜ್ನಿ,ಸಹ ಸಂಚಾಲಕ ಭಾಸ್ಕರ ಬಾರ್ಯ, ಅನಾರು ಕೃಷ್ಣಶರ್ಮ, ಗುಂಡ್ಯಡ್ಕ ಈಶ್ವರ ಭಟ್, ಚಂದ್ರಶೇಖರ ಆಳ್ವ ಪಡುಮಲೆ, ಭವಾನಿ ಶಂಕರ ಶೆಟ್ಟಿ ಪುತ್ತೂರು, ಜಯಾನಂದ ಪೆರಾಜೆ, ಉದಯಶಂಕರ ರೈ ಪುಣಚ, ರಾಜಮಣಿ ರಾಮಕುಂಜ ಬಂಟ್ವಾಳ, ಸೀತಾರಾಮ.ಕೆ, ಸೋಮನಾಥ ಬೇಕಲ್, ಚಂದ್ರಕಲಾ ಎಸ್‌.ಬಿ ಭಾಗವಹಿಸಿದ್ದರು.

ಉಪಾಧ್ಯಕ್ಷ ಲೋಕೇಶ್ ಹೆಗ್ಡೆ ಸ್ವಾಗತಿಸಿ ಪ್ರೊ. ವೇದವ್ಯಾಸ ವಂದಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts