All Newsರಾಜ್ಯ ವಾರ್ತೆ

ಮುಡಾ ಬೆನ್ನಲ್ಲೇ ಖರ್ಗೆ ಕುಟುಂಬದ ಜಮೀನು ವಾಪಾಸ್!!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಮುಡಾದಿಂದ ಪಡೆದಿದ್ದ 14 ನಿವೇಶನಗಳನ್ನು ವಾಪಸ್ ಮಾಡಿದ ಬೆನ್ನಲ್ಲೆ ಇದೀಗ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬಕ್ಕೆ ಸೇರಿದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ( KIADB)ನಿಂದ ಪಡೆದಿದ್ದ 5 ಎಕರೆ ಜಮೀನನ್ನು ವಾಪಸ್ ಮಾಡಲು ಖರ್ಗೆ ಕುಟುಂಬ ನಿರ್ಧಾರಿಸಿದೆ.

ಈ ಸುದ್ದಿಯನ್ನು ಶೇರ್ ಮಾಡಿ

KIADBಯಿಂದ ಪಡೆದಿದ್ದ 5 ಎಕರೆ ವಾಪಾಸ್ ನೀಡಿದ್ದೇಕೆ ಖರ್ಗೆ ಕುಟುಂಬದ ಟ್ರಸ್ಟ್??

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಮುಡಾದಿಂದ ಪಡೆದಿದ್ದ 14 ನಿವೇಶನಗಳನ್ನು ವಾಪಸ್ ಮಾಡಿದ ಬೆನ್ನಲ್ಲೆ ಇದೀಗ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬಕ್ಕೆ ಸೇರಿದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ( KIADB)ನಿಂದ ಪಡೆದಿದ್ದ 5 ಎಕರೆ ಜಮೀನನ್ನು ವಾಪಸ್ ಮಾಡಲು ಖರ್ಗೆ ಕುಟುಂಬ ನಿರ್ಧಾರಿಸಿದೆ.

SRK Ladders

ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಹುಲ್‌ ಖರ್ಗೆ ಅಧ್ಯಕ್ಷರಾಗಿದ್ದು, ಈ ಟ್ರಸ್ಟ್‌ಗೆ ಕೆಐಎಡಿಬಿಯಿಂದ 5 ಎಕರೆ ಜಮೀನನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಲಾಗಿದೆ. ಈ ಜಮೀನನ್ನು ಕೆಐಎಡಿಬಿ ನಿಯಮ ಉಲ್ಲಂಘಿಸಿ ಟ್ರಸ್ಟ್‌ಗೆ ನೀಡಲಾಗಿದೆ. ಜಮೀನು ಮಂಜೂರು ಸಂದರ್ಭದಲ್ಲಿ ನಾಗರಿಕ ಸೌಲಭ್ಯ(ಸಿಎ)ದ ನಿವೇಶನ ಹಂಚಲಾಗಿದೆ ಎಂದು ವಿಧಾನ ಪರಿಷತ್‌ನ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿ ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿದ್ದರು. ಈ ದೂರಿನ ಬೆನ್ನಲ್ಲೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಸಹ ಖರ್ಗೆ ಕುಟುಂಬದ ಟ್ರಸ್ಟ್‌ಗೆ ಸಿಎ ನಿವೇಶನ ಮಂಜೂರು ಮಾಡಿರುವ ಬಗ್ಗೆ ಸ್ಪಷ್ಟನೆ ನೀಡುವಂತೆ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದರು.

ಬೆಂಗಳೂರಿನಲ್ಲಿಂದು ಸುದ್ದಿಗಾರರಿಗೆ ಮಾಹಿತಿ ನೀಡಿದ ಐಟಿ-ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಸಿಎ ಜಮೀನು ವಾಪಸ್ ಮಾಡುವ ತೀರ್ಮಾನ ಕೈಗೊಂಡಿದ್ದೇವೆ ಎಂದರು. ನಾವು ಟ್ರಸ್ಟ್‌ಗೆ ನಿಯಮಬಾಹಿರವಾಗಿ ಜಮೀನು ಪಡೆದಿಲ್ಲ. ಟ್ರಸ್ಟ್ ಲಾಭಮಾಡುವ ಉದ್ದೇಶದಿಂದ ಮಾಡಿಲ್ಲ. ಪರಿಶಿಷ್ಟ ಜಾತಿಗೆ ಸೇರಿದ್ದರೂ ರಿಯಾಯಿತಿ ದರದಲ್ಲಿ ಜಮೀನು ಪಡೆದಿಲ್ಲ. ಆದರೂ ರಾಜಕೀಯ ಆರೋಪಗಳಿಂದ ಬೇಸತ್ತು ವಾಪಸ್ ಮಾಡುವ ತೀರ್ಮಾನವನ್ನು ಮಾಡಿದ್ದೇವೆ. ಈ ಸಂಬಂಧ ಟ್ರಸ್ಟ್‌ನ ಅಧ್ಯಕ್ಷ ರಾಹುಲ್. ಎಂ ಖರ್ಗೆ ಅವರು ಕಳೆದ ಸೆಪ್ಟೆಂಬರ್ 20ರಂದೇ ಕೆಐಎಡಿಬಿ ಸಿಇಓಗೆ ಜಮೀನನ್ನು ಹಿಂದಿರುಗಿಸುವ ಬಗ್ಗೆ ಪತ್ರ ಬರೆದಿದ್ದಾರೆ ಎಂದು ಪ್ರಿಯಾಂಕ ಖರ್ಗೆ ಹೇಳಿದರು.

ಟ್ರಸ್ಟ್‌ಗೆ ಜಮೀನು ಪಡೆದಿದ್ದನ್ನು ಬಿಜೆಪಿ ದೊಡ್ಡ ಹಗರಣ ನಡೆದಿದೆ ಎಂದು ಬಿಂಬಿಸಿ ಆರೋಪ ಮಾಡುತ್ತಿದೆ. ನಾವು ಟ್ರಸ್ಟ್ ಮಾಡಿರುವುದು ಲಾಭ ಮಾಡುವ ಉದ್ದೇಶದಿಂದ ಅಲ್ಲ. ಶಿಕ್ಷಣ ನೀಡುವ ಉದ್ದೇಶಕ್ಕೆ ಜಮೀನು ಮಂಜೂರಾಗಿದ್ದರೂ ಜಮೀನಿನ ಸ್ವಾಧೀನಕ್ಕೆ ಇನ್ನೂ ಪಡೆದಿಲ್ಲ. ಈ ಕಲುಷಿತ ವಾತಾವರಣದಲ್ಲಿ ಜಮೀನನ್ನು ಇಟ್ಟುಕೊಂಡರೆ ಟ್ರಸ್ಟ್‌ನ ಉದ್ದೇಶ ವಿಷಯಾಂತರ ಆಗುತ್ತದೆ. ಅನಗತ್ಯ ವಿವಾದ, ಆರೋಪಗಳು ಬೇಡ ಎಂಬ ಕಾರಣಕ್ಕೆ ಜಮೀನು ವಾಪಸ್ ಮಾಡುವ ತೀರ್ಮಾನ ಮಾಡಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ವಿವಿ ಪ್ರಾಧ್ಯಾಪಕಿಯಾದ ಮಂಗಳಮುಖಿ; ಉನ್ನತ ಶಿಕ್ಷಣದ ಪ್ರಾಧ್ಯಾಪಕಿಯಾದದ್ದು ಇದೇ ಮೊದಲು!!

ತೃತೀಯ ಲಿಂಗಿಯೊಬ್ಬರು ವಿಶ್ವವಿದ್ಯಾಲಯವೊಂದರ ಅರೆಕಾಲಿಕ ಪ್ರಾಧ್ಯಾಪಕಿಯಾಗಿ ನೇಮಕಗೊಳ್ಳುವ ಮೂಲಕ…

1 of 2