ಪ್ರಚಲಿತಸ್ಥಳೀಯ

ಚುನಾವಣಾ ರಾಜಕೀಯದಿಂದ ದೂರ ಉಳಿಯುತ್ತೇನೆ: ಡಿ.ವಿ. ಸದಾನಂದ ಗೌಡ | ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಭೇಟಿ ನೀಡಿದರು.

akshaya college

ಶ್ರೀ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, 30 ವರ್ಷಗಳ ರಾಜಕೀಯ ಜೀವನದಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹಲವು ಜವಬ್ದಾರಿಗಳನ್ನು ನಿರ್ವಹಿಸುವ ಯೋಗ ಸಿಕ್ಕಿದೆ. ಮುಂದೆ ಚುನಾವಣಾ ರಾಜಕೀಯದಿಂದ ದೂರ ಸರಿಯುತ್ತೇನೆ. ಹಾಗೆಂದು ರಾಜಕೀಯದಿಂದಲ್ಲ ಎಂದು ಸ್ಪಷ್ಟಪಡಿಸಿದರು.

ಪರಿವಾರ ವಾದ, ಭ್ರಷ್ಟಾಚಾರದಿಂದ ಮುಕ್ತವಾಗಬೇಕು ಎನ್ನುವ ಕಲ್ಪನೆ ನರೇಂದ್ರ ಮೋದಿಯವರದ್ದು. ಆದರೆ ರಾಜ್ಯದ ಜವಾಬ್ದಾರಿ ಹೊತ್ತವರು ಅದೆಲ್ಲವನ್ನು ಹೊಂದಿದ್ದಾರೆ. ಹಾಗಾಗಿ ಮುಂದೆ ಇದನ್ನೆಲ್ಲಾ ಶುದ್ಧೀಕರಣ ಮಾಡುವ ಕೆಲಸವನ್ನು ನಾವೆಲ್ಲಾ ಮಾಡ್ತೇವೆ. ಆದರೆ ಈಗ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುವುದಷ್ಟೇ ನಮ್ಮ ಗುರಿ ಎಂದರು.

ದೈವಾಂಶಸಂಭೂತ ಮೋದಿ ಅವರ ಕಲ್ಪನೆಯನ್ನು ತಳಮಟ್ಟದವರೆಗೂ ತಲುಪಿಸಬೇಕಾದ ಕೆಲಸವನ್ನು ನಾವೆಲ್ಲರೂ ಮಾಡಬೇಕು ಎಂದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 122