ಪ್ರಚಲಿತ

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 251.06 ಕೋಟಿ ರೂ. ಮಂಜೂರು | ತನ್ನ ಅವಧಿಯಲ್ಲಿ 2259.65 ಕೋಟಿ ರೂ. ಮಂಜೂರು: ಶಾಸಕ ಅಶೋಕ್ ಕುಮಾರ್ ರೈ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: 2025-26ನೇ ಸಾಲಿನಲ್ಲಿ 251.06 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಇದರಲ್ಲಿ 2259.65 ಕೋಟಿ ರೂ. ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ತನ್ನ ಅವಧಿಯಲ್ಲಿ ಅನುದಾನ ಬಂದಂತಾಗಿದೆ. ಇನ್ನು 450 ಕೋಟಿ ರೂ. ಮೆಡಿಕಲ್ ಕಾಲೇಜು ಉದ್ದೇಶದಿಂದ 400 ಹಾಸಿಗೆಗಳ ಆಸ್ಪತ್ರೆಗಾಗಿ ಮಂಜೂರು ಆಗಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2023-24ನೇ ಸಾಲಿನಲ್ಲಿ 1479.59 ಕೋಟಿ ರೂ., 2024-25ನೇ ಸಾಲಿನಲ್ಲಿ 529 ಕೋಟಿ ರೂ., 2025-26ನೇ ಸಾಲಿನಲ್ಲಿ 251.06 ಕೋಟಿ ರೂ. ಅನುದಾನ ಬಂದಿದೆ ಎಂದರು.

529 ಕೋಟಿ ರೂ.ನಲ್ಲಿ ಪುತ್ತೂರು ತಾಲೂಕು ಪಂಚಾಯತ್ ಹೊಸ ಕಟ್ಟಡ ನಿರ್ಮಾಣಕ್ಕಾಗಿ 5.50 ಕೋಟಿ ರೂ., ತಾಲೂಕು ಎಸ್.ಸಿ. ಎಸ್.ಟಿ. ಬೋರ್ ವೆಲ್ ಸಣ್ಣ ನೀರಾವರಿ ಇಲಾಖೆಗೆ .50 ಕೋಟಿ ರೂ., ಕೆಪಿಎಸ್ ಕುಂಬ್ರ ಕೊಠಡಿ ನಿರ್ಮಾಣಕ್ಕಾಗಿ 0.84 ಕೋಟಿ ರೂ., ಲೋಕೋಪಯೋಗಿ ಇಲಾಖೆ ರಸ್ತೆಡಾಮರಿಕರಣ 2.0 ಕೋಟಿ ರೂ., ಪುತ್ತೂರು ತಾಲೂಕು ಎಸ್.ಸಿ/ ಎಸ್.ಟಿ ಬೋರ್‌ವೆಲ್ ಸಣ್ಣ ನೀರವರಿ ಇಲಾಖೆ – 1.50 ಕೋಟಿ ರೂ., ಕಿಂಡಿ ಅಣೆಕಟ್ಟು ನಿರ್ಮಾಣ ಸಣ್ಣ ನಿರಾವರಿ ಇಲಾಖೆ 5.70 ಕೋಟಿ ರೂ. ಅನುದಾನ ಮಂಜೂರುಗೊಂಡಿದೆ ಎಂದರು.

ತೋಡು ಬದಿ ತಡೆಗೋಡೆ ನಿಮಾಣ ಸಣ್ಣ ನಿರಾವರಿ ಇಲಾಖೆ – 8.50 ಕೋಟಿ ರೂ., ತೋಡು ಬದಿ ತಡೆಗೋಡೆ ನಿಮಾಣ ಸಣ್ಣ ನಿರಾವರಿ ಇಲಾಖೆ ಭಾಗ -2ರಲ್ಲಿ 2.75 ಕೋಟಿ ರೂ.,  ಲೋಕೋಪಯೋಗಿ ಇಲಾಖೆ ವಿವಿಧ ಕಾಮಗಾರಿಗೆ 5.00 ಕೋಟಿ ರೂ., ಲೋಕೋಪಯೋಗಿ ಇಲಾಖೆ ಕಾಲುಸಂಕ ನಿರ್ಮಾಣಕ್ಕಾಗಿ 1.00 ಕೋಟಿ ರೂ., ಲೋಕೋಪಯೋಗಿ ಇಲಾಖೆ (ಪ್ರಾಂಸಿ PRAMSY) 03.00 ಕೋಟಿ ರೂ., ಜಿಲ್ಲಾ ಪಂಚಾಯತ್ ರಸ್ತೆಗಳ ಅನುದಾನ – 0.71 ಕೋಟಿ ರೂ., ಜಿಲ್ಲಾ ಪಂಚಾಯತ್ ಅಭಿವೃದ್ಧಿ ಅನುದಾನ 0.84 ಕೋಟಿ ರೂ.,  ಮುಖ್ಯ ಮಂತ್ರಿಯವರ ವಿಶೇಷ ಅನುದಾನ 50.00 ಕೋಟಿ ರೂ., ಹೊಸ ಕಾರ್ಮಿಕರ ಶಾಲಾ ಕಟ್ಟಡ ನಿರ್ಮಾಣ 37.00 ಕೋಟಿ ರೂ., ತಾಲೂಕು ಪಂಚಾಯತ್ ಅನಿರ್ಭಂಧಿತ ಅನುದಾನ 2.00 ಕೋಟಿ ರೂ., ತಾಲೂಕು ಪಂಚಾಯತ್ ಮತ್ತುಜಿಲ್ಲಾ ಪಂಚಾಯತ್ ಅನುದಾನ ಬಂಟ್ವಾಳ ತಾಲೂಕು 0.60 ಕೋಟಿ ರೂ., ನಗರ ಸಭೆ ನಗರೋತ್ಥಾನ ಅನುದಾನ 0.55 ಕೋಟಿ ರೂ., ಹೊಸ ತಾಲೂಕು ಕ್ರೀಡಾಂಗಣ ಅಭಿವೃದ್ಧಿ 9.50 ಕೋಟಿ ರೂ., ನಗರ ಸಭೆ ಮರುಡಾಮರಿಕರಣ ಕಾಮಗಾರಿ 0.45 ಕೋಟಿ ರೂ., ನಗರ ಸಭೆ ಒಳರಸ್ತೆ ಮರುಡಾಮರಿಕರಣ 0.27 ಕೋಟಿ ರೂ., ಅಮೃತ ನಗರೋತ್ತಾನಕೆರೆ ಅಭಿವೃದ್ಧಿ 3.20 ಕೋಟಿ ರೂ., ಕೆರೆ ಅಭಿವೃದ್ಧಿ 0.75 ಕೋಟಿ ರೂ., ಕೆರೆ ಅಭಿವೃದ್ಧಿ ಕಾರಂಜಿ ನಿರ್ಮಾಣ 2.0 ಕೋಟಿ ರೂ., ಪುತ್ತೂರು ತಾಲೂಕು ನಲ್ಲಿಕಟ್ಟೆ ಎಂಬಲ್ಲಿ ಧ್ವಜ ಸ್ಥಂಭ ನಿರ್ಮಾಣ 1.0 ಕೋಟಿ ರೂ., ಬೊಳುವಾರು ಬಳಿ ವೃತ್ತಅಭಿವೃದ್ಧಿ 2.0 ಕೋಟಿ ರೂ., ಕೊಂಬೆಟ್ಟು ಜಿಮ್ ಮತ್ತು ಕ್ರೀಂಡಾಂಗಣ ಅಭಿವೃದ್ಧಿ 2.0 ಕೋಟಿ ರೂ., ಬೆಟ್ಟಂಪಾಡಿ ಸೇತುವೆ ಬಳಿ ರಸ್ತೆ ಅಭಿವೃದ್ಧಿ 1.50 ಕೋಟಿ ರೂ., ಹಿಂದುಳಿದ ವರ್ಗಗಳ ಇಲಾಖೆ ಹೊಸ ಹಾಸ್ಟೆಲ್‌ ಕಟ್ಟಡ ನಿರ್ಮಾಣ 5.0 ಕೋಟಿ ರೂ., ಪಂಚಾಯತ್ ಹಾಗೂ ಲೊಕೋಪಯೋಗಿ ಇಲಾಖೆ ರಸ್ತೆಗಳ ಬಳಿ ತಡೆಗೋಡೆ 12.50 ಕೋಟಿ ರೂ., ಲೊಕೋಪಯೋಗಿ ಇಲಾಖೆ ರಸ್ತೆಗಳ ಅಭಿವೃದ್ಧಿ ಎಸ್.ಹೆಚ್ ಮತ್ತುಎಂ.ಡಿ.ಆರ್ 2.0 ಕೋಟಿ ರೂ., ಲೊಕೋಪಯೋಗಿ ಇಲಾಖೆ ಕಟ್ಟಡಗಳ ರಿಪೇರಿ ಮತ್ತು ಕಲ್ವರಟ್ ನಿರ್ಮಾಣ ನಿರ್ಮಾಣ 1.0 ಕೋಟಿ ರೂ., ಸಿ.ಎಸ್.ಆರ್ ನಿಧಿ ಅಡಿ ವಿವಿಧ ಶಾಲೆಗಳ ಕೊಠಡಿ ಹಾಗೂ ಶೌಚಾಲಯ ನಿರ್ಮಾಣ 1.5 ಕೋಟಿ ರೂ., ಅಂಬೇಡ್ಕರ್ ಭವನ ನಿರ್ಮಾಣ ಪುತ್ತೂರು ಹಾಗೂ ವಿಟ್ಲ 1.75 ಕೋಟಿ ರೂ., ಲೊಕೋಪಯೋಗಿ ಇಲಾಖೆ ರಸ್ತೆಗಳ ಅಭಿವೃದ್ಧಿ SHDP 25 ಕೋಟಿ ರೂ., ಲೋಕೋಪಯೋಗಿ ಇಲಾಖೆ ರಸ್ತೆಗಳ ಅಭಿವೃದ್ಧಿ Appendix E 30.00 ಕೋಟಿ ರೂ., ಲೊಕೋಪಯೋಗಿ ಇಲಾಖೆ ಸೇತುವೆಗಳ ನಿರ್ಮಾಣ 6.15 ಕೋಟಿ ರೂ., ಲೋಕೋಪಯೋಗಿ ಇಲಾಖೆ Railway Under Bridge 8.0 ಕೋಟಿ ರೂ., ಲೊಕೋಪಯೋಗಿ ಇಲಾಖೆ ರಸ್ತೆಗಳ ಅಭಿವೃದಿ C.R.F 6.0 ಕೋಟಿ ರೂ., ಪರಿಶಿಷ್ಟ ಜಾತಿ ಮತ್ತು ಪಂಗಡಗಳ ರಸ್ತೆ ಅಭಿವೃದ್ಧಿ 1.50 ಕೋಟಿ ರೂ. ಮಂಜೂರಾಗಿದೆ. ಒಟ್ಟು 251.06 ಕೋಟಿ ರೂ., ವಿಧಾನಸಭಾ ಕ್ಷೇತ್ರಕ್ಕೆ ಬಂದಿದೆ ಎಂದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಫೆ. 11ಕ್ಕೆ ಕರ್ನಾಟಕ ರಾಜ್ಯ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದಿಂದ ಮಂಗಳೂರು ಪುರಭವನದಲ್ಲಿ ರಾಜ್ಯ ಸಮಾವೇಶ

ಪುತ್ತೂರು: ಕರ್ನಾಟಕ ರಾಜ್ಯ ಕನ್ನಡ ಉಳಿಸಿ, ಬೆಳೆಸಿ ಅಭಿಯಾನ ಇದರ ವತಿಯಿಂದ ಕನ್ನಡ ಮನಸ್ಸುಗಳ…

ಚಾಮುಂಡಿ ಬೆಟ್ಟದಲ್ಲಿ ಕಾಣಿಸಿಕೊಂಡ ಬೆಂಕಿ ನಂದಿಸಲು ಹರಸಾಹಸ! 100 ಎಕರೆಯಷ್ಟು ಅರಣ್ಯ ಪ್ರದೇಶ ಬೆಂಕಿಗಾಹುತಿ!

ಕಿಡಿಗೇಡಿಗಳ ಕೃತ್ಯದಿಂದ ಚಾಮುಂಡಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡು…