ಪುತ್ತೂರು: ಪುತ್ತೂರು ರೋಟರಿ ಕ್ಲಬ್ ಆಶ್ರಯದಲ್ಲಿ ದ ರೋಟರಿ ಪೌಂಡೇಶನ್ ಡಿಸ್ಟ್ರಿಕ್ ಸೆಮಿನಾರ್ -2025 ನವಂಬರ್ 8 ಮತ್ತು 9ರಂದು ಪುತ್ತೂರು ಮರೀಲ್‌ನಲ್ಲಿರುವ ದಿ ಪುತ್ತೂರು ಕ್ಲಬ್‌ನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಡಾ. ಶ್ರೀಪ್ರಕಾಶ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ, ಕೊಡಗು, ಮೈಸೂರು ಮತ್ತು ಚಾಮರಾಜ ಜಿಲ್ಲೆಗಳನ್ನೊಳಗೊಂಡ ರೋಟರಿ ಜಿಲ್ಲೆ 3181 ಇದರ ಸದಸ್ಯರು, ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ನ. 8ರಂದು ಮಧ್ಯಾಹ್ನ ಗಂಟೆ 2ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ರೋಟರಿ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ ಕೆ ಅವರು ಉದ್ಘಾಟಿಸಲಿದ್ದಾರೆ. ಪಿಡಿಜಿ ಸಾಮ್ ಮೋವಾ ಅವರು ರೋಟರಿಯ ಮುಂದಿನ ಯೋಜನೆಗಳ ಕುರಿತು ಮಾಹಿತಿ ನೀಡಲಿದ್ದಾರೆ. ಬಳಿಕ 7 ಅವಧಿಯಲ್ಲಿ ಸೆಮಿನಾರ್ ನಡೆಯಲಿದೆ. ರೋಟರಿ ಪೌಂಡೇಶನ್ ರಿಲವೇನ್ಸ್ ಕುರಿತು ಎಆರ್‌ಆರ್‌ಎಫ್‌ಸಿ ಪಿಡಿಜಿ ಕೃಷ್ಣ ಶೆಟ್ಟಿಯವರು, ಪೊಲೀಯೋ ಕುರಿತು ಎಫ್‌ಪಿಎನ್‌ಸಿ ಪಿಡಿಜಿ ನಾಗರ್ಜುನ್, ಬೊಮ್ಮಿರೆಡ್ಡಿ ಸುರೇಂದ್ರ, ಚೇತನ್ ದೇಸಾಯಿ, ರಂಗನಾಥ್ ಭಟ್ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ ಎಂದರು.
ನ. 9ರಂದು ಬೆಳಗ್ಗೆ ಗಂಟೆ 9ಕ್ಕೆ ಜಿ.ಕೆ.ಬಾಲಕೃಷ್ಣ, ರಂಗನಾಥ ಭಟ್, ರಾಮಕೃಷ್ಣ ಪಿ.ಕೆ ಅವರು ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಬಳಿಕ ಸಮಾರೋಪದಲ್ಲಿ ಐಪಿಡಿಜಿ ವಿಕ್ರಂ ದತ್ತ, ಡಿಜಿಇ ಸತೀಶ್ ಬೋಳಾರ್, ಡಿಜಿಎನ್ ಯಶಸ್ವಿ ಎಸ್ ಸೋಮಶೇಖರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.
ಜಗತ್ತಿನಾದ್ಯಂತ ಹಲವು ಕ್ಲಬ್‌ಗಳನ್ನು ಹೊಂದಿರುವ ರೋಟರಿ ಕ್ಲಬ್‌ಗೆ ಲಕ್ಷ ಲಕ್ಷ ಸದಸ್ಯರಿದ್ದಾರೆ. ಅದೇ ರೀತಿ ಪುತ್ತೂರಿನಲ್ಲಿ 1965ರಲ್ಲಿ ದೂರದೃಷ್ಟಿಯಿಂದ ಬೆಳೆದು ಪುತ್ತೂರಿಗೆ ತನ್ನದೇ ಆದ ಕೊಡುಗೆಯನ್ನು ಸಮುದಾಯಕ್ಕೆ ನೀಡುತ್ತಾ ಬಂದಿದೆ. ಪುತ್ತೂರಿಗೆ ತೀರಾ ಅವಶ್ಯಕತೆ ಇರುವ ರೋಟರಿ ಬ್ಲಡ್ ಬ್ಯಾಂಕ್, ರಕ್ತ ಸಂಗ್ರಹ ವ್ಯಾನ್, ಡಯಾಲಿಸಿಸ್ ಸೆಂಟರ್, ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಹಿಂದೂ ರುದ್ರ ಭೂಮಿಗೆ ರೂ. 5 ಕೋಟಿಗಿಂತಲೂ ಮಿಕ್ಕಿ ವೆಚ್ಚದಲ್ಲಿ ಹಲವು ಯೋಜನೆ, ರೋಟರಿ ಪೌಂಡೇಶನ್ ಮೂಲಕ ಅನುದಾನ ಮತ್ತು ರೋಟರಿ ಸದಸ್ಯರ ದೇಣಿಗೆಯನ್ನು ಪಡೆದುಕೊಂಡು ಮಾಡಲಾಗಿದೆ. ಮುಂದಿನ ದಿನ ಪುತ್ತೂರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮ್ಯಾಮೋಗ್ರಾಫಿ ಅಳವಡಿಸಲಾಗುವುದು ಎಂದು ವಿವರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಕಾರ್ಯಕ್ರಮದ ಆಯೋಜನಾ ಅಧ್ಯಕ್ಷ ಚಿದಾನಂದ ಬೈಲಾಡಿ, ಕಾರ್ಯದರ್ಶಿ ಶ್ರೀಕಾಂತ್ ಕೊಳತ್ತಾಯ, ಖಜಾಂಜಿ ಎಂ.ಜಿ. ರಫೀಕ್, ರೋಟರಿ ಕ್ಲಬ್ ಸಮುದಾಯ ಸೇವಾ ವಿಭಾಗದ ಗುರುರಾಜ್ ಕೊಳತ್ತಾಯ, ಸದಸ್ಯ ಶ್ರೀಧರ್ ಗೌಡ ಕಣಜಾಲು ಉಪಸ್ಥಿತರಿದ್ದರು.

























