ಪುತ್ತೂರು: ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಪರ್ಲ್ ಸಿಟಿ ಲ್ಯಾಬೋರೇಟರಿ ಪುತ್ತೂರು ಇವರ ಸಹಯೋಗದಲ್ಲಿ ಮೂತ್ರಾಶಯದ ಕ್ಯಾನ್ಸರ್ ಹಾಗೂ ಮೂತ್ರಪಿಂಡದ ಕಾಯಿಲೆಗಳ ಉಚಿತ ತಪಾಸಣಾ ಶಿಬಿರ ನ. 8ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಕಲ್ಲಾರೆ ಬಳಿಯೂರು ದರ್ಬಾರ್ ಪರ್ಲ್ ಸಿಟಿ ಲ್ಯಾಬೋರೇಟರಿಯಲ್ಲಿ ನಡೆಯಲಿದೆ ಎಂದು ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಹಾಯಕ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್ ಶೇಟ್ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂತ್ರಪಿಂಡ / ಮೂತ್ರನಾಳದ ಕಲ್ಲುಗಳು, ಮೂತ್ರದಲ್ಲಿ ರಕ್ತ, ಮೂತ್ರದ ಸೋಂಕು, ಪ್ರಾಸ್ಪೇಟ್ ಸಂಬಂಧಿತ ಸಮಸ್ಯೆಗಳು, ಮೂತ್ರಪಿಂಡ ಡಯಾಲಿಸಿಸ್, ಪುರುಷ ಬಂಜೆತನ ಮೊದಲಾದ ತೊಂದರೆ ಇರುವ ರೋಗಿಗಳು ಈ ಶಿಬಿರದಲ್ಲಿ ಭಾಗವಹಿಸಬಹುದು ಎಂದರು.
ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಸಂಬಂಧಿತ ಪ್ರಕರಣ ಹೆಚ್ಚಾಗುತ್ತಿದ್ದು, ಸಮಾಜದಲ್ಲಿ ಇದರ ಬಗ್ಗೆ ಅರಿವು, ಜಾಗೃತಿ ಕಾರ್ಯಕ್ರಮ, ಶಿಬಿರಗಳನ್ನು ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಹಮ್ಮಿಕೊಂಡಿರುತ್ತೇವೆ. ಇದರ ಅಂಗವಾಗಿ ಪ್ರಥಮ ಕಾರ್ಯಕ್ರಮವಾಗಿ ಪುತ್ತೂರಿನ ಕಲ್ಲಾರೆಯಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಯೂರಾಲಜಿ ವಿಭಾಗದ ಪರಿಣಿತ ತಜ್ಞ ವೈದ್ಯರಿಂದ ಮೂತ್ರಾಶಯದ ಮತ್ತು ಕಿಡ್ನಿ ಕಾಯಿಲೆಗಳ ತೊಂದರೆ / ಸಮಸ್ಯೆ ಬಗ್ಗೆ ತಪಾಸಣೆ ನಡೆಸಿ ಹೆಚ್ಚಿಸಿ ಚಿಕಿತ್ಸೆಯ ಅಗತ್ಯವಿದ್ದಲ್ಲಿ, ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಶಿಫಾರಸು ಮಾಡಿ ಅತ್ಯಂತ ರಿಯಾಯಿತಿ ಅಥವಾ ಸರಕಾರಿ ಯೋಜನೆಗಳಡಿಯಲ್ಲಿ ಚಿಕಿತ್ಸೆ ಹಾಗೂ ಶಸ್ತ್ರಕ್ರಿಯೆಯನ್ನು ಮುಕ್ತವಾಗಿ ನಡೆಸಲಾಗುವುದು ಎಂದರು.
ಕಾರ್ಡ್ ನೋಂದಾವಣೆ:
ಶಿಬಿರದಲ್ಲಿ ಯೆನ್ ಆರೋಗ್ಯ ಕಾರ್ಡ್ ನೋಂದಾವಣೆಯೂ ನಡೆಯಲಿದೆ. ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ 200 ರೂ., ಎಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ 300 ರೂ., ರೇಷನ್ ಹೊರತುಪಡಿಸಿ ಬೇರೆ ದಾಖಲೆ ನೀಡಿದ್ದಲ್ಲಿ 300 ರೂ. ಶುಲ್ಕ ನಿಗದಿ ಮಾಡಲಾಗಿದೆ. ಇದರಲ್ಲಿ 5 ಮಂದಿ ಸದಸ್ಯರು ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಲು ಅವಕಾಶವಿದೆ ಎಂದು ವಿವರಿಸಿದರು. ಹೆಚ್ಚಿನ ಮಾಹಿತಿಗಾಗಿ 9606970667, 9481716228, 6363695272.
ಪತ್ರಿಕಾಗೋಷ್ಠಿಯಲ್ಲಿ ಸೀನಿಯರ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ವಿಜಾಯಾನಂದ ಶೆಟ್ಟಿ, ಯೆನ್ ಮಿತ್ರ ಮನೋಹರ್ ರೈ, ಶಿಬಿರ ಸಂಯೋಜಕ ಉಮರ್ ಶಾಫಿ ಉಪಸ್ಥಿತರಿದ್ದರು.

























