ಪುತ್ತೂರು: ಮುರದಲ್ಲಿ ನಡೆದಿದ್ದ ಅಪಘಾತ ಇದೀಗ ಎರಡು ಬಲಿ ತೆಗೆದುಕೊಳ್ಳುವಂತೆ ಮಾಡಿದೆ.
ಇತ್ತೀಚೆಗಷ್ಟೇ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಅಪೂರ್ವ ಕೆ. ಭಟ್ (32) ಕೊನೆಯುಸಿರೆಳೆದಿದ್ದರು. ಇದೀಗ ಅವರ ಅಂಡೆಪುಣಿ ತಂದೆ ಈಶ್ವರ ಭಟ್ (70) ಮೃತಪಟ್ಟಿದ್ದಾರೆ.
ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಬಳಿಕ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಇದೀಗ ಅವರೂ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ಮೇ 27ರಂದು ಪುತ್ತೂರಿನ ಮುರ ಜಂಕ್ಷನ್ ಬಳಿ ಅಪಘಾತ ನಡೆದಿತ್ತು. ಬೆಂಗಳೂರಿನಿಂದ ಆಗಮಿಸಿದ್ದ ಮಗಳನ್ನು ಕರೆದೊಯ್ಯಲು ಪುತ್ತೂರಿಗೆ ಆಗಮಿಸಿದ್ದ ಈಶ್ವರ ಭಟ್ ಅವರು ಮಗಳು ಹಾಗೂ ಮೊಮ್ಮಗಳನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದರು. ಮುರ ಜಂಕ್ಷನಿನಲ್ಲಿ ಪಡ್ನೂರಿಗೆ ತೆರಳುವ ರಸ್ತೆಗೆ ಕಾರನ್ನು ತಿರುಗಿಸುತ್ತಿದ್ದಂತೆ ಮಂಗಳೂರಿನತ್ತ ವೇಗವಾಗಿ ಚಲಿಸುತ್ತಿದ್ದ ಮರ್ಸಿ ಬಸ್, ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ತಂದೆ – ಮಗಳು ಗಂಭೀರ ಗಾಯಗೊಂಡಿದ್ದರು.
ಅಪೂರ್ವ ಅವರ ಮಗಳು ಪವಾಡಸದೃಶ ಪರಾಗಿದ್ದರು.
























