ಪ್ರಚಲಿತ

ಅನಧಿಕೃತ ಶಾಲೆಗಳ ಸಂಖ್ಯೆ ಬಹಿರಂಗಪಡಿಸಿದ ಸರ್ಕಾರ: ಕಠಿಣ ಕ್ರಮದ ಸೂಚನೆ | ದ.ಕ., ಉಡುಪಿಯಲ್ಲೂ ಇದೆ ಅಕ್ರಮ ಶಾಲೆಗಳು!!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ರಾಜ್ಯದಲ್ಲಿ ಅನಧಿಕೃತ ಶಾಲೆಗಳ ಸಂಖ್ಯೆಯನ್ನು‌ ಸರಕಾರ ಬಹಿರಂಗಪಡಿ ಸಿದ್ದು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಾಹಿತಿ ಪ್ರಕಾರ ರಾಜ್ಯದಲ್ಲಿ 2024-25ರ ಸಾಲಿನಲ್ಲಿ ಒಟ್ಟು 993 ಅನಧಿಕೃತ ಶಾಲೆಗಳಿವೆ. ಇಂಥ ಶಾಲೆಯನ್ನು ಮುಚ್ಚದಿದ್ದರೆ ಆಡಳಿತ ಮಂಡಳಿ ವಿರುದ್ಧ ಪೊಲೀಸ್‌ ಠಾಣೆಗೆ ದೂರು ನೀಡಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

akshaya college

ರಾಜ್ಯದಲ್ಲಿ ಅನಧಿಕೃತ ಶಾಲೆಗಳನ್ನು ಪಟ್ಟಿ ಮಾಡುವ ಪ್ರಯತ್ನ 2022-23ನೇ ಸಾಲಿನಿಂದ ನಡೆಯುತ್ತಲೇ ಇದೆ. 2023-24ರಲ್ಲಿ ಒಟ್ಟು 1,600ಕ್ಕೂ ಹೆಚ್ಚು ಅನಧಿಕೃತ ಶಾಲೆಗಳಿವೆ ಎಂಬ ಮಾಹಿತಿ ಹರಿದಾಡಿದ್ದರೂ ಶಾಲಾ ಶಿಕ್ಷಣ ಇಲಾಖೆ ಈ ಮಾಹಿತಿಯನ್ನು ಖಚಿತಪಡಿಸಿರಲಿಲ್ಲ. ಅನಂತರ ಶಾಲೆಗಳಿಗೆ ಅಧಿಕೃತಗೊಳ್ಳಲು ಸಮಯಾವಕಾಶ ನೀಡಿದ ಇಲಾಖೆಯು ಅಧಿಕೃತ ಶಾಲೆಗಳ ಪಟ್ಟಿಯನ್ನು ಪ್ರಕಟಿಸಿತ್ತು. ಈಗ ಅಂತಿಮವಾಗಿ ಅನಧಿಕೃತ ಶಾಲೆಗಳನ್ನು ಬಹಿರಂಗಪಡಿಸಲಾಗಿದೆ.

ರಾಜ್ಯದಲ್ಲಿ ಅನಧಿಕೃತ ಶಾಲೆಗಳಲ್ಲಿ ಬೆಂಗಳೂರು ಶೈಕ್ಷಣಿಕ ಜಿಲ್ಲೆಗಳದ್ದೇ ಸಿಂಹಪಾಲಿದೆ. ರಾಜ್ಯದಲ್ಲಿ ಅತಿ ಹೆಚ್ಚು ಅನಧಿಕೃತ ಶಾಲೆಗಳು ಬೆಂಗಳೂರು ದಕ್ಷಿಣ (172)ದಲ್ಲಿದೆ. ಅನಂತರದ ಸ್ಥಾನದಲ್ಲಿ ಬೆಂಗಳೂರು ಉತ್ತರ (141), ರಾಮನಗರ (120), ರಾಯಚೂರು (101), ಚಿತ್ರದುರ್ಗ (95) ಇದೆ. ಹಾವೇರಿ, ಶಿರಸಿ, ಉತ್ತರ ಕನ್ನಡ, ಯಾದಗಿರಿ, ಕೊಪ್ಪಳ, ಬಳ್ಳಾರಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಅನಧಿಕೃತ ಶಾಲೆಗಳಿಲ್ಲ. ದಕ್ಷಿಣ ಕನ್ನಡ, ಉಡುಪಿಯಲ್ಲಿ ತಲಾ 1 ಅನಧಿಕೃತ ಶಾಲೆಗಳಿವೆ.

ಅನಧಿಕೃತ ಶಾಲೆಗಳ ವಿಂಗಡಣೆ ಹೇಗೆ?

ಅನುಮತಿ ಇಲ್ಲದೆ ಸ್ಥಳಾಂತರಿಸಿ ಅನಧಿಕೃತಗೊಂಡ ಶಾಲೆಗಳ ಸಂಖ್ಯೆ 217 ಇದೆ. ಉಳಿದಂತೆ ರಾಜ್ಯ ಪಠ್ಯಕ್ರಮದಲ್ಲಿ ಅನುಮತಿ ಪಡೆದು ಇತರ ಪಠ್ಯಗಳನ್ನು ಬಳಸುತ್ತಿರುವ 101 ಶಾಲೆಗಳಿವೆ. ರಾಜ್ಯ ಪಠ್ಯಕ್ರಮದಲ್ಲಿ ಅನುಮತಿ ಪಡೆದು ಇತರ ಪಠ್ಯಕ್ರಮದಲ್ಲಿ ಬೋಧಿಸುತ್ತಿರುವ 89, ಕೇಂದ್ರ ಪಠ್ಯಕ್ರಮಕ್ಕೆ ಸಂಯೋಜನೆ ಹೊಂದಿದ ಬಳಿಕ ಅನಧಿಕೃತವಾಗಿ ಅದೇ ಕಟ್ಟಡದಲ್ಲಿ ರಾಜ್ಯ ಪಠ್ಯಕ್ರಮ ದಲ್ಲಿ ಮುಂದುವರಿಸುತ್ತಿರುವ 79 ಶಾಲೆಗಳು, ಅನಧಿಕೃತ ಹೆಚ್ಚುವರಿ ವಿಭಾಗಗಳನ್ನು ಹೊಂದಿರುವ 46 ಶಾಲೆ, ಶಾಲಾ ನೋಂದಣಿ ಪಡೆಯದೆ ನಡೆಯುತ್ತಿರುವ 27 ಶಾಲೆ, ನೋಂದಣಿ ಇಲ್ಲದೆ ಅನಧಿಕೃತವಾಗಿ ಉನ್ನತೀಕರಿಸಿದ ತರಗತಿಗಳನ್ನು ನಡೆಸುತ್ತಿರುವ 21 ಶಾಲೆ, ಅನಧಿಕೃತ ಮಾಧ್ಯಮ 19, ಅನುಮತಿ ಇಲ್ಲದೆ ಹಸ್ತಾಂತರಿಸಿರುವ 7 ಶಾಲೆಗಳನ್ನು ಗುರುತಿಸಿ, ಅನಧಿಕೃತ ಎಂದು ಘೋಷಿಸಲಾಗಿದೆ.

ಬಿಇಒಗೆ ಶಾಲೆ ಮುಚ್ಚುವ ಹೊಣೆ

ಅನಧಿಕೃತ ಶಾಲೆಗಳು ಮುಚ್ಚಿರುವುದನ್ನು ಸಿಆರ್‌ಪಿ, ಬಿಆರ್‌ಪಿ ಮತ್ತು ಶಿಕ್ಷಣ ಸಂಯೋಜಕರು ಸ್ಥಳ ಪರಿಶೀಲಿಸಿ ಖಾತರಿಪಡಿಸಿಕೊಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಒಂದು ವೇಳೆ ಆಡಳಿತ ಮಂಡಳಿ ಶಾಲೆ ಮುಚ್ಚಲು ಒಪ್ಪದಿದ್ದರೆ ಅಂತಹ ಶಾಲೆಯ ವಿರುದ್ಧ ಪೊಲೀಸ್ ದೂರು ನೀಡಿ ಪೊಲೀಸರ ಸಹಾಯದಿಂದ ಶಾಲೆ ಮುಚ್ಚುವ ಕೆಲಸವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಡಬೇಕು. ಒಂದು ವೇಳೆ ಅನಧಿಕೃತ ಶಾಲೆಗಳಿಗೆ ಡೈಸ್ ಕೋಡ್ ನೀಡಿದ್ದರೆ ಅದನ್ನು ತತ್‌ಕ್ಷಣ ಹಿಂಪಡೆಯಬೇಕೆಂಬ ನಿರ್ದೇಶನವನ್ನು ಶಾಲಾ ಶಿಕ್ಷಣ ಇಲಾಖೆ ನೀಡಿದೆ.

ಅನಧಿಕೃತ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಕ್ಷಮ ಪ್ರಾಧಿಕಾರಗಳಿಗೆ ನಿರ್ದೇಶನ ನೀಡಿದ್ದೇವೆ. ಅನಧಿಕೃತ ಎಂದು ಗುರುತಿಸಲಾಗಿರುವ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳನ್ನು ಅವರ ಶೈಕ್ಷಣಿಕ ಭವಿಷ್ಯ ಕುಂಠಿತವಾಗದಂತೆ ಅಧಿಕೃತ ಶಾಲೆಗಳಿಗೆ ಸೇರಿಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದೇವೆ.

  • ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ

ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಕಾಲೇಜು ವಿದ್ಯಾರ್ಥಿಗಳಿಗೆ 6 ವಿಶೇಷ AI ಸಾಧನ ಉಡುಗೊರೆ ನೀಡಿದ ಗೂಗಲ್ | ಐದು ದೇಶದ ವಿದ್ಯಾರ್ಥಿಗಳಿಗೆ ಉಚಿತ ಚಂದಾ ಆಫರ್!!

ಗೂಗಲ್ ಫಾರ್ ಎಜುಕೇಷನ್ ಎಂಬ ಧ್ಯೇಯದಡಿ ಗೂಗಲ್ ಕಾಲೇಜು ವಿದ್ಯಾರ್ಥಿಗಳಿಗೆ 6 ಹೊಸ ಪರಿಕರಗಳನ್ನು…

ಜುಲೈ 12ರಂದು ರಾಷ್ಟ್ರೀಯ ಲೋಕ ಅದಾಲತ್ | ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಪುತ್ತೂರಿನ ನ್ಯಾಯಾಧೀಶರು

ಪುತ್ತೂರು: ರಾಜೀ ಸಂದಾನದ ಮೂಲಕ ಬಗೆಹರಿಸಿಕೊಳ್ಳಬಹುದಾದ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು…