ಪುತ್ತೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಆಶ್ರಯದಲ್ಲಿ ರಾಜ್ಯ ರಾಷ್ಟ್ರೀಯ ಯೋಗ ಶಿಕ್ಷಕರ ಪ್ರ ಶಿಕ್ಷಣ ಶಿಬಿರ ಯೋಗ ಜೀವನ ದರ್ಶನ 2025ರ ಅಂಗವಾಗಿ ಯೋಗ ಪ್ರಶಿಕ್ಷಣ ಶಿಬಿರ ಬುಧವಾರ ಸಂಜೆ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನ ಹಾಗೂ ಸುಭದ್ರ ಕಲಾ ಮಂದಿರದಲ್ಲಿ ಉದ್ಘಾಟನೆಗೊಂಡಿತು.
ಬೆಂಗಳೂರಿನ ಶಿಕ್ಷಣ ಪ್ರಮುಖ್ ಭರತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಯೋಗದ ಮಹತ್ವವನ್ನು ವಿವರಿಸಿದರು. ಯೋಗದಿಂದ ಮಾನಸಿಕ ಸಮತೋಲನವನ್ನು ಹೇಗೆ ಕಾಪಾಡಬಹುದು ಎಂದು ವಿವರಿಸಿದರು.
ಮುಖ್ಯ ಅತಿಥಿಯಾಗಿದ್ದ ವಕೀಲ ಚಿದಾನಂದ ಬೈಲಾಡಿ ಮಾತನಾಡಿ, ಎಸ್ ಪಿ ವೈ ಎಸ್ ಎಸ್ ಸಮಿತಿಯು ಶಿಸ್ತು ಹಾಗೂ ಸಮಯ ಪರಿಪಾಲನೆಗೆ ಹೆಚ್ಚು ಮಹತ್ವ ನೀಡುತ್ತಿದ್ದು, ಇದು ಪ್ರಶಂಸನೀಯ ಕಾರ್ಯ. ಇದರೊಂದಿಗೆ ಪ್ರತಿಫಲಾಪೇಕ್ಷೆ ಇಲ್ಲದ ನಿಸ್ವಾರ್ಥ ಸೇವೆ ಸಮಿತಿಯ ವರ್ಚಸ್ಸನ್ನು ಹೆಚ್ಚಿಸಿದೆ ಎಂದ ಅವರು, ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸೇರಿರುವ ಶಿಕ್ಷಣಾರ್ಥಿಗಳನ್ನು ನೋಡುವುದೇ ಸಂತೋಷ ಎಂದರು.
ಅಧ್ಯಕ್ಷತೆ ವಹಿಸಿದ್ದ ನೇತ್ರಾವತಿ ವಲಯದ ಸಂಚಾಲಕ ಅಶೊಕ್ ಮಾತನಾಡಿ, ಆರೋಗ್ಯಕ್ಕೆ ಯೋಗದ ಕೊಡುಗೆಯನ್ನು ವಿವರಿಸಿದರು.
ತೆಂಕಿಲ ಗೌಡ ಸಮುದಾಯ ಭವನದ ಅಧ್ಯಕ್ಷ ರವಿ ಅಣ್ಣ ಮುಂಗ್ಲಿಮನೆ ಉಪಸ್ಥಿತರಿದ್ದರು.
ಅಶ್ವಿನಿ ಸ್ವಾಗತಿಸಿ, ಶುಭ ವಂದಿಸಿದರು. ರಂಜಿನಿ ಕಾರ್ಯಕ್ರಮ ನಿರೂಪಿಸಿದರು.