ಪುತ್ತೂರು: ತಾಲೂಕಿನ ಒಳಮೊಗ್ರು ಗ್ರಾಮದ ಕಾವು ನಿವಾಸಿ, ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಮಾಜಿ ಸದಸ್ಯ ಸತೀಶ್ ಕುಮಾರ್ (56 ವ.) ಹೃದಯಘಾತದಿಂದ ಬೆಂಗಳೂರಿನಲ್ಲಿ ಬುಧವಾರ ನಿಧನರಾದರು.
ಮಲ್ನಾಡ್ ಇನ್ಫೋಟೆಕ್ ಸ್ಟೇಟ್ ಕೋ ಆರ್ಡಿನೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಅವರು ಪುತ್ತೂರಿನ ಪಿಸಿಎನ್ ಕೇಬಲ್ ನೆಟ್ವರ್ಕ್ ನ ಪಾಲುದಾರ ರಾಗಿದ್ದಾರೆ.
ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ಅವರಿಗೆ ಬುಧವಾರ ಮದ್ಯಾಹ್ನ ತೀವ್ರ ಹೃದಯಾಘಾತ ಉಂಟಾಗಿ ಮೃತಪಟ್ಟಿದ್ದಾರೆ.
ಸತೀಶ್ ಅವರ ಪತ್ನಿ ವರ್ಷಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದರು.
ಮೃತರು ತಾಯಿ, ಇಬ್ಬರು ಪುತ್ರರು, ಸಹೋದರ ರಿಪಬ್ಲಿಕ್ ಟಿವಿ ವರದಿಗಾರ ರಾಜೇಶ್ ರಾವ್ ಸಹಿತ ಇಬ್ಬರು ಸಹೋದರರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.