ಮಂಗಳೂರು: ಸುದ್ದಿಗೋಷ್ಠಿ ನಡೆಯುತ್ತಿರುವ ನಡುವೆಯೇ ತನ್ನ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಯುವಕನೋರ್ವನನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಹೊರಹಾಕುವಂತೆ ಹೇಳಿದ ಘಟನೆ, ಶನಿವಾರ ನಡೆಯಿತು. ಈ ಘಟನೆ ಬಳಿಕ ಯುವಕ ಹೊರಬಂದು ಮಾಧ್ಯಮದೊಂದಿಗೆ ತನ್ನ ಅಳಲು ತೋಡಿಕೊಂಡಿದ್ದಾನೆ.
ನಾನು ಕಾಂಗ್ರೆಸಿಗ. ದಕ್ಷಿಣ ಕನ್ನಡದಲ್ಲಿ ಎಲ್ಲರೂ ಶಾಂತಿ ನೆಮ್ಮದಿಯಿಂದ ಬದುಕಬೇಕೆನ್ನುವುದೇ ನನ್ನ ಆಶಯ. ಹಿಂದೂ ಆಗಲಿ, ಮುಸ್ಲಿಂ ಆಗಲಿ ಯಾರೊಬ್ಬರು ಹತ್ಯೆಗೆ ಒಳಗಾಗಬಾರದು. ಈ ಭೂಮಿ ಮೇಲೆ ಬದುಕುವ ಅವಕಾಶ ಎಲ್ಲರಿಗೂ ಇದೆ ಎಂದರು.
ಸಚಿವರ ಪ್ರತಿಕ್ರಿಯೆ ಬಗ್ಗೆ ಪ್ರಶ್ನಿಸಿದಾಗ, ಬಜ್ಪೆ ಚಲೋ ಮಾಡಿ ಸಾರ್ವಜನಿಕವಾಗಿ, ಅವರನ್ನು ಕೊಲ್ಲಲು ಕರೆ ನೀಡುತ್ತಾರೆ. ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಲು ಆಗ್ರಹಿಸುವುದಷ್ಟೇ ನನ್ನ ಉದ್ದೇಶ ಎಂದರು.