ಪ್ರಚಲಿತ

ಮಾನ್ಸೂನ್: ಮಂಗಳೂರು ಕೊಂಕಣ ರೈಲು ವೇಳಾಪಟ್ಟಿ!

ಮಂಗಳೂರು: ಕೊಂಕಣ ರೈಲ್ವೇ ವಿಭಾಗದಲ್ಲಿ ಸಂಚರಿಸುವ ಪಾಲ್ಗಾಟ್‌ ವಿಭಾಗದ ರೈಲುಗಳ ಸಂಚಾರದ ಮಾನ್ಸೂನ್‌ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು ಇದು ಜೂ.15ರಿಂದ ಅ.20ರ ವರೆಗೆ ಅನ್ವಯವಾಗಲಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಕೊಂಕಣ ರೈಲ್ವೇ ವಿಭಾಗದಲ್ಲಿ ಸಂಚರಿಸುವ ಪಾಲ್ಗಾಟ್‌ ವಿಭಾಗದ ರೈಲುಗಳ ಸಂಚಾರದ ಮಾನ್ಸೂನ್‌ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು ಇದು ಜೂ.15ರಿಂದ ಅ.20ರ ವರೆಗೆ ಅನ್ವಯವಾಗಲಿದೆ.

akshaya college

ಎರ್ನಾಕುಲಂ ಜಂಕ್ಷನ್‌-ಪುಣೆ ಜಂಕ್ಷನ್‌ (ರೈಲು ಸಂಖ್ಯೆ-22149) ಬೆಳಗ್ಗೆ 5.15ರ ಬದಲು ಮುಂಜಾವ 2.15ಕ್ಕೆ ಹೊರಡಲಿದೆ. ಎರ್ನಾಕುಲಂ ಜಂಕ್ಷನ್‌- ಹಜರತ್‌ ನಿಜಾಮುದ್ದೀನ್‌ ಜಂಕ್ಷನ್‌ (22655) ಬೆಳಗ್ಗೆ 5.15ರ ಬದಲು ಮುಂಜಾವ 2.15ಕ್ಕೆ, ಮಡಗಾಂವ್‌ ಜಂಕ್ಷನ್‌-ಮಂಗಳೂರು ಸೆಂಟ್ರಲ್‌ (10107) ಮುಂಜಾವ 4ರ ಬದಲು ಮುಂಜಾವ 4.40ಕ್ಕೆ, ತಿರುವನಂತಪುರಂ ನಾರ್ತ್‌- ಯೋಗ್‌ ನಗರಿ ಹೃಷಿಕೇಶ್‌ (22659) ಬೆಳಗ್ಗೆ 9.10ರ ಬದಲು ಮುಂಜಾವ 4.50ಕ್ಕೆ ಹೊರಡಲಿದೆ.

ತಿರುವನಂತಪುರಂ ನಾರ್ತ್‌-ಚಂಡೀಗಢ (12217) ಬೆಳಗ್ಗೆ 9.10ರ ಬದಲು ಮುಂಜಾವ 4.50ಕ್ಕೆ, ತಿರುವನಂತಪುರ ನಾರ್ತ್‌-ಅಮೃತಸರ್‌ (12483) ಬೆಳಗ್ಗೆ 9.10ರ ಬದಲು ಮುಂಜಾವ 4.50ಕ್ಕೆ, ತಿರುನಲ್ವೇಲಿ ಜಂಕ್ಷನ್‌- ಜಾಮನಗರ (19577) ಬೆಳಗ್ಗೆ 8ರ ಬದಲು ಮುಂಜಾವ 5.05ಕ್ಕೆ, ತಿರುನೆಲ್ವೇಲಿ ಜಂಕ್ಷನ್‌ – ಗಾಂಧಿಧಾಮ್‌ ಬಿಜಿ (20923) ಬೆಳಗ್ಗೆ 8ರ ಬದಲು ಮುಂಜಾವ 5.05ಕ್ಕೆ ಹೊರಡಲಿದೆ. ತಿರುವನಂತಪುರ ನಾರ್ತ್‌-ಲೋಕಮಾನ್ಯ ತಿಲಕ್‌(12202) ಬೆಳಗ್ಗೆ 9.10ರ ಬದಲು ಬೆಳಗ್ಗೆ 7.45ಕ್ಕೆ ಹೊರಡಲಿದೆ.

ಮಡಗಾಂವ್‌ ಜಂಕ್ಷನ್‌-ಮಂಗಳೂರು ಸೆಂಟ್ರಲ್‌(56616) ಮಧ್ಯಾಹ್ನ 2.10ರ ಬದಲು ಮಧ್ಯಾಹ್ನ 2.15ಕ್ಕೆ, ಮಡಗಾಂವ್‌ ಜಂಕ್ಷನ್‌-ಮಂಗಳೂರು ಸೆಂಟ್ರಲ್‌(20645) ಸಂಜೆ 6.10ರ ಬದಲು ಸಂಜೆ 5.35ಕ್ಕೆ, ತಿರುವನಂತಪುರ ನಾರ್ತ್‌- ಇಂಧೋರ್‌ ಜಂಕ್ಷನ್‌(20931) ಬೆಳಗ್ಗೆ 11.15ರ ಬದಲು ಬೆಳಗ್ಗೆ 9.10ಕ್ಕೆ, ತಿರುವನಂತಪುರ ನಾರ್ತ್‌-ಪೋರಬಂದರ್‌ (20909) ಬೆಳಗ್ಗೆ 11.15ರ ಬದಲು ಬೆಳಗ್ಗೆ 9.10ಕ್ಕೆ ಹೊರಡಲಿದೆ.

ಎರ್ನಾಕುಲಂ ಜಂಕ್ಷನ್‌-ಹಜರತ್‌ ನಿಜಾ ಮುದ್ದೀನ್‌ ಜಂಕ್ಷನ್‌(12617) ಮಧ್ಯಾಹ್ನ 1.25ರ ಬದಲು ಬೆಳಗ್ಗೆ 10.30ಕ್ಕೆ, ಕೊಯಮತ್ತೂರು ಜಂಕ್ಷನ್‌-ಹಿಸಾರ್‌ (22476) ಮಧ್ಯಾಹ್ನ 2.55ರ ಬದಲು ಮಧ್ಯಾಹ್ನ 1.30ಕ್ಕೆ, ಮಂಗಳೂರು ಸೆಂಟ್ರಲ್‌-ಲೋಕಮಾನ್ಯ ತಿಲಕ್‌(12620) ಮಧ್ಯಾಹ್ನ 2.20ರ ಬದಲು ಮಧ್ಯಾಹ್ನ 12.45ಕ್ಕೆ, ಎರ್ನಾಕುಲಂ ಜಂಕ್ಷನ್‌- ಮಡಗಾಂವ್‌ ಜಂಕ್ಷನ್‌(10216) ಬೆಳಗ್ಗೆ 10.40ರ ಬದಲು ಮಧ್ಯಾಹ್ನ 1.25ಕ್ಕೆ, ತಿರುವಂತಪುರ ಸೆಂಟ್ರಲ್‌-ಹಜರತ್‌ ನಿಜಾಮುದ್ದೀನ್‌ ಜಂಕ್ಷನ್‌(12431) ರಾತ್ರಿ 7.15ರ ಬದಲು ಮಧ್ಯಾಹ್ನ 2.40ಕ್ಕೆ ಹೊರಡಲಿದೆ.

ಮಂಗಳೂರು ಜಂಕ್ಷನ್‌-ಮುಂಬಯಿ ಸಿಎಸ್‌ಟಿ (12134) ಮಧ್ಯಾಹ್ನ 2ರ ಬದಲು ಸಂಜೆ 4.35ಕ್ಕೆ, ಎರ್ನಾಕುಲಂ ಜಂಕ್ಷನ್‌-ಅಜ್ಮೇರ್ ಜಂಕ್ಷನ್‌ (12977) ರಾತ್ರಿ 8.25ರ ಬದಲು ಸಂಜೆ 6.50ಕ್ಕೆ, ಮಡಗಾಂವ್‌ ಜಂಕ್ಷನ್‌-ಎರ್ನಾಕುಲಂ ಜಂಕ್ಷನ್‌ (10215) ರಾತ್ರಿ 7.30ರ ಬದಲು ರಾತ್ರಿ 9ಕ್ಕೆ , ತಿರುವನಂತಪುರ ಸೆಂಟ್ರಲ್‌-ಹಜರತ್‌ ನಿಜಾಮುದ್ದೀನ್‌ ಜಂಕ್ಷನ್‌ (22653) ರಾತ್ರಿ 12.50ರ ಬದಲು ರಾತ್ರಿ 10ಕ್ಕೆ ಹೊರಡಲಿದೆ ಎಂದು ಪಾಲಕ್ಕಾಡ್‌ ರೈಲ್ವೇ ವಿಭಾಗದ ಪ್ರಕಟನೆ ತಿಳಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಅನಧಿಕೃತ ಶಾಲೆಗಳ ಸಂಖ್ಯೆ ಬಹಿರಂಗಪಡಿಸಿದ ಸರ್ಕಾರ: ಕಠಿಣ ಕ್ರಮದ ಸೂಚನೆ | ದ.ಕ., ಉಡುಪಿಯಲ್ಲೂ ಇದೆ ಅಕ್ರಮ ಶಾಲೆಗಳು!!

ಬೆಂಗಳೂರು: ರಾಜ್ಯದಲ್ಲಿ ಅನಧಿಕೃತ ಶಾಲೆಗಳ ಸಂಖ್ಯೆಯನ್ನು‌ ಸರಕಾರ ಬಹಿರಂಗಪಡಿ ಸಿದ್ದು, ಶಾಲಾ…

ಜುಲೈ 12ರಂದು ರಾಷ್ಟ್ರೀಯ ಲೋಕ ಅದಾಲತ್ | ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಪುತ್ತೂರಿನ ನ್ಯಾಯಾಧೀಶರು

ಪುತ್ತೂರು: ರಾಜೀ ಸಂದಾನದ ಮೂಲಕ ಬಗೆಹರಿಸಿಕೊಳ್ಳಬಹುದಾದ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು…