Friday, November 22
Share News

ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಗಳಿಗೆ “Resume Writing and Interview Preparation” ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕರಾದ ಡಾ. ಶ್ರೀಶ ಭಟ್, ವಿದ್ಯಾರ್ಥಿಗಳಿಗೆ Resume Writing ಬಗ್ಗೆ ಮಾಹಿತಿಯನ್ನು ನೀಡಿ ಉದ್ಯೋಗವನ್ನು ಬಯಸುವ ವಿದ್ಯಾರ್ಥಿಗಳ Resume ಹೇಗಿರಬೇಕು? ಯಾವೆಲ್ಲ ವಿಷಯಗಳನ್ನು ಒಳಗೊಂಡಿರಬೇಕು? ವಿದ್ಯಾರ್ಥಿಗಳು ಮಾಡುವಂತಹ ತಪ್ಪುಗಳು, ಇವುಗಳ ಬಗ್ಗೆ ಮಾಹಿತಿ ನೀಡಿ, ವಿದ್ಯಾರ್ಥಿಗಳಿಗೆ ಹೊಸ ಮಾದರಿಯ Resume ತಯಾರಿಸಲು ಮಾಹಿತಿ ಮಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಸಾಫ್ಟ್ ವೇರ್ ಇಂಜಿನಿಯರ್ of Accenture ಅವಿನಾಶ್ ವಿ.ಕೆ. ಅವರು ವಿದ್ಯಾರ್ಥಿಗಳಿಗೆ ಇಂಟರ್ವ್ಯೂಗೆ ಬೇಕಿರುವಂತಹ ತಯಾರಿ ಹಾಗೂ ಅದನ್ನು ಎದುರಿಸುವ ಸವಾಲುಗಳ ಬಗ್ಗೆ ಮನವರಿಕೆ ಮಾಡಿ ಅವರನ್ನು ಹುರಿದುಂಬಿಸಿದರು.

ಸುಮಾರು 70 ವಿದ್ಯಾರ್ಥಿಗಳು ಈ ಕಾರ್ಯಗಾರದಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಂಡರು.

ಅಂತಿಮ ಫ್ಯಾಶನ್ ಡಿಸೈನ್ ಪದವಿ ವಿದ್ಯಾರ್ಥಿಗಳಾದ ಶ್ರದ್ಧಾ ಹಾಗೂ ಸ್ಮಿತಾ ಪ್ರಾರ್ಥಿಸಿದರು. ಅಂತಿಮ ಬಿಕಾಂ ಪದವಿಯ ವಿದ್ಯಾರ್ಥಿ ಮಹಮದ್ ಮುಸ್ತಫ ಬಿ.ಎ. ಸ್ವಾಗತಿಸಿ, ಅಂತಿಮ ಇಂಟೀರಿಯರ್ ಡಿಸೈನ್ ಪದವಿ ವಿದ್ಯಾರ್ಥಿನಿ ರಿಯಾ ಪೊನ್ನಮ್ಮ ವಂದಿಸಿದರು. ಸಾಕ್ಷಿ ಕಾರ್ಯಕ್ರಮ ನಿರೂಪಿಸಿದರು.


Share News

Comments are closed.

Exit mobile version