Gl jewellers
ಸ್ಥಳೀಯ

ಒಕ್ಕಲಿಗ ಸೇವಾವಾಹಿನಿಯಿಂದ ಮನೆನಿರ್ಮಾಣಕ್ಕೆ ನೆರವಿನ‌ ಹಸ್ತ | ನ. 16: ಕಾವೂರು ಮಠಾದೀಶರಿಂದ ಪಾಂಬಾರು ತೀರ್ಥರಾಮ ಗೌಡರಿಗೆ  ಕೆಂಪುಕಲ್ಲು ಹಸ್ತಾಂತರ ಸಮಾರಂಭ

Karpady sri subhramanya
ಸಮಾನ ಮನಸ್ಕ ಒಕ್ಕಲಿಗ ಯುವಕರು ಬಡ ಕುಟುಂಬಗಳಿಗೆ ಆರ್ಥಿಕ, ಸಾಮಾಜಿಕ ಬಲವರ್ಧನೆ ಉದ್ದೇಶದಿಂದ ನೂತನವಾಗಿ ಪ್ರಾರಂಭಿಸಲಾದ ಒಕ್ಕಲಿಗ ಗೌಡ ಸೇವಾವಾಹಿನಿ ದ.ಕ., ಕರ್ನಾಟಕ ಟ್ರಸ್ಟ್ ನ ಚೊಚ್ಚಲ ಸಹಾಯಾರ್ಥ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ನ. 16ರಂದು ಆದಿಚುಂಚನಗಿರಿಯ ಮಂಗಳೂರಿನ ಕಾವೂರು ಶಾಖಾ ಮಠಾಧೀಶರಾದ ಶ್ರೀ ಧರ್ಮಪಾಲನಾಥ ಸ್ವಾಮೀಜಿಗಳು ಈ ನೆರವಿನ ಹಸ್ತದ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

SRK Ladders
Akshaya College

ಒಕ್ಕಲಿಗ ಸಮಾಜದ ವಿಟ್ಲ ಮುಡ್ನೂರು ಗ್ರಾಮದ ಆಲಂಗಾರು ನಿವಾಸಿ ಪಾಂಬಾರು ತೀರ್ಥರಾಮ ಗೌಡರ ಮನೆಯು ಕಳೆದ ಬಾರಿಯ ಮಳೆಗಾಲದಲ್ಲಿ ಬಾರಿ ಮಳೆಗೆ ನೆಲಸಮ ಆಗುವ ಹಂತದಲ್ಲಿದ್ದು
ಪ್ರಸ್ತುತ ಆ ಮನೆಯಲ್ಲಿ ವಾಸ ಮಾಡಲು ಅಸಾಧ್ಯವಾಗಿದ್ದು, ಅವರಿಗೆ ನೂತನ ಮನೆ ನಿರ್ಮಾಣಕ್ಕೆ ಕೆಂಪುಕಲ್ಲನ್ನು ಸೇವಾ ವಾಹಿನಿಯು ನೀಡಲು ಮುಂದಾಗಿದ್ದು ಅದರಂತೆ 2500 ಕೆಂಪು ಕಲ್ಲನ್ನು ನೂತನ ಮನೆ ನಿವೇಶನಕ್ಕೆ ಪೂರೈಸಿದೆ. ಇದರ ಸಾಂಕೇತಿಕ ಹಸ್ತಾಂತರ ಕಾರ್ಯಕ್ರಮ ಇಂದು ನವೆಂಬರ್ 16 ರಂದು ಸಂಜೆ 4 ಗಂಟೆಗೆ ಜರಗಲಿದೆ.

Sampya jathre

ಒಕ್ಕಲಿಗ ಸಮಾಜದ ಅಭಿವೃದ್ಧಿಯ ಕನಸನ್ನು ಕಾಣುತ್ತಿರುವ ಸಮಾನಮನಸ್ಕ ದಾನಿಗಳ ನೆರವಿನೊಂದಿಗೆ ತಲಾ 6000 ರೂಪಾಯಿಗಳ ಸಹಾಯಹಸ್ತದ ಸಂಗ್ರಹದೊಂದಿಗೆ ಸೇವಾ ವಾಹಿನಿ ಈ ಚೊಚ್ಚಲ ಕಾರ್ಯಕ್ರಮ ಆಯೋಜಿಸಿದೆ.

ಎರಡನೇ ನೆರವಿನ ಹಸ್ತವಾಗಿ ಮುಂದಿನ ತಿಂಗಳು ಸುಳ್ಯ ತಾಲೂಕು ಪಂಬೆತ್ತಾಡಿ ಗ್ರಾಮದ ಜಾಕೆ ಜಯರಾಮ ಗೌಡರಿಗೆ ನೀಡಲು ಮುಂದಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

Related Posts

ಬಾವಿಗೆ ಬಿದ್ದ ಬೆಕ್ಕಿನಿಂದ ಅಟ್ಯಾಕ್!! ಪುತ್ತೂರಿನ ತೆಂಕಿಲದಲ್ಲಿ ರಕ್ಷಣೆಗೆ ಮುಂದಾದವರ ಮೇಲೆಯೇ ತಿರುಗಿ ಬಿದ್ದ ಬೆಕ್ಕು!!

ರಕ್ಷಣೆಗೆಂದು ಬಂದ ಅಗ್ನಿಶಾಮಕದಳದ ಸಿಬ್ಬಂದಿಗಳ ಮೇಲೆ ಬೆಕ್ಕೊಂದು ಅಟ್ಯಾಕ್ ಮಾಡಿರುವ ಘಟನೆ…

12ರಲ್ಲಿ 12 ಸೀಟುಗಳನ್ನು ಬಾಚಿದ ಸಹಕಾರ ಭಾರತಿ|ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ರಂಗೇರಿದ ಕದನದಲ್ಲಿ ಜಯ ಸಾಧಿಸಿದ ಬಿಜೆಪಿ

ರಂಗೇರಿದ ಚುನಾವಣಾ ಆಖಾಡದಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಎಲ್ಲಾ 12 ಸದಸ್ಯರು ಪುತ್ತೂರು…